ಮೈಸೂರು: ವಿಕಸಿತ ಭಾರತ ಸಂಕಲ್ಪ ಯಾತ್ರೆಯು ಎಲ್ಲಾ ನಾಗರಿಕರಿಗೆ ವಿಶೇಷವಾಗಿ ಬುಡಕಟ್ಟು ಜನಾಂಗದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಒದಗಿಸುತ್ತಿರುವ ಯೋಜನೆಗಳ ವಿವರವನ್ನು ಎಲ್ಲರಿಗೂ ನೀಡಿ ಅನುಕೂಲ ಒದಗಿಸುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆಯ ಕೇಂದ್ರ ಸಚಿವೆ ಮೀನಾಕ್ಷಿ ಲೇಖಕಿ ಅಭಿಪ್ರಾಯಪಟ್ಟಿದ್ದಾರೆ.
ಮೈಸೂರು ಜಿಲ್ಲೆ, ಹುಣಸೂರು ತಾಲೂಕಿನ ಕಾಡಂಚಿನ ನೇರಳೆಕುಪ್ಪೆ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ ಸಚಿವೆ ಜನರನ್ನು ಉದ್ದೇಶಿಸಿ ಮಾತನಾಡಿದರು ಸ್ವಚ್ಛ ಭಾರತ ಉಜ್ವಲ ಯೋಜನೆ, ಕಿಸಾನ್ ಸಮ್ಮಾನ್ ನಿಧಿ ಪ್ರಧಾನಮಂತ್ರಿ ಗಲೀಪ್ ಕಲ್ಯಾಣ್ ಯೋಜನೆ ಸೇರಿದಂತೆ ಹತ್ತು ಹಲವು ಯೋಜನೆಗಳ ಮಾಹಿತಿಯನ್ನು ವಿಕಸಿತ ಭಾರತ ಸಂಕಲ್ಪ ಯಾತ್ರೆಯು ಜಾಗೃತಿ ಮೂಡಿಸುತ್ತಿದೆ.
ವಿಶ್ವ ಶೌಚಾಲಯ ದಿನವಾದ ಇಂದು ಗಾಂಧಿಜಿಯ ಕನಸಿನಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ವಿಶೇಷ ಕಾಳಜಿಯೊಂದಿಗೆ ದೇಶದಾದ್ಯಂತ ಕೋಟ್ಯಾಂತರ ಶೌಚಾಲಯಗಳು ನಿರ್ಮಾಣವಾಗಿದೆ ಹಿಂದುಳಿದ ಜಿಲ್ಲೆಗಳಲ್ಲಿ ಹೆಚ್ಚಿನ ಯೋಚನೆಗಳನ್ನು ತಂದಿರುವ ಕೇಂದ್ರ ಸರ್ಕಾರವು ಆಶಾ ಕಾರ್ಯಕರ್ತೆಯರು ಹಾಗೂ ಸ್ವ ಸಹಾಯ ಮಹಿಳಾ ಸಂಘಗಳ ಸಹಕಾರದೊಂದಿಗೆ ಮಹಿಳೆಯರಿಗಾಗಿ ವಿಶೇಷ ಯೋಜನೆಗಳನ್ನು ತಂದಿದೆ ಸಿಕಲ್ ಸೆಲ್ ರಕ್ತಹೀನತೆ ಸಮಸ್ಯೆಯಿಂದ ಬುಡಕಟ್ಟು ಜನಾಂಗವು ಹೆಚ್ಚಾಗಿ ಬಳಲುತ್ತಿದ್ದು, ಇಂಥವರಿಗಾಗಿ ಆರೋಗ್ಯ ಇಲಾಖೆಯ ಮೂಲಕ ವಿಶೇಷ ಹಾರೈಕೆ ಯೋಜನೆ ಯಶಸ್ವಿಯಾಗಿ ಜಾರಿಯಲ್ಲಿದೆ ಎಂದು ಸಚಿವೆ ಮೀನಾಕ್ಷಿ ಲೇಖಿ ತಿಳಿಸಿದರು.
ನಂತರ ಮಾತನಾಡಿದ ಮೈಸೂರು ಕೊಡಗು ಸಂಸದ ಪ್ರತಾಪ ಸಿಂಹ ಅವರು ಬಯಲು ಬಹಿರ್ದಿಸೆ ಮುಕ್ತ ಭಾರತ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಗುರಿಯಾಗಿದ್ದು ಸ್ವಚ್ಛ ಭಾರತವು ಭಾರತ ಸರ್ಕಾರದ ಬಹುದೊಡ್ಡ ಕಾರ್ಯಕ್ರಮಗಳಲ್ಲಿ ಒಂದಾಗಿದೆ ವಿಕಸಿತ ಭಾರತ ಸಂಕಲ್ಪ ಯಾತ್ರೆಯೂ ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಮಾಹಿತಿ ಬಿತ್ತರಿಸುತ್ತಿದ್ದು ಬಡವರಿಗೆ ಉಚಿತ ಅಕ್ಕಿ ಉಜ್ವಲ ಯೋಜನೆ ಮೂಲಕ ಉಚಿತ ಗ್ಯಾಸ್ ಸಿಲಿಂಡರ್ ಬಡವರಿಗಾಗಿ ಆರೋಗ್ಯ ವಿಮೆಗಳು ಪರಿಶಿಷ್ಟ ವರ್ಗಕ್ಕೆ ವಿಶೇಷ ಸೌಲಭ್ಯಗಳನ್ನು ನೀಡುತ್ತಿರುವ ಕುರಿತು ಜನರಿಗೆ ಮಾಹಿತಿ ನೀಡುತ್ತಿದೆ ಎಂದರು.
2024ರ ಕ್ಯಾಲೆಂಡರ್ ಅನ್ನು ಹಾಗೂ ಕೇಂದ್ರ ಸರ್ಕಾರಗಳ ಯೋಜನೆಗಳ ಮಾಹಿತಿ ಉಳ್ಳ ಕಿರು ಪುಸ್ತಕವನ್ನು ಸಚಿವರು ಹಾಗೂ ಸಂಸದರು ಅನಾವರಣಗೊಳಿಸಿದರು. ಪ್ರಧಾನ ಮಂತ್ರಿ ಜನ ಸುರಕ್ಷಾ ಯೋಜನೆ ಫಲಾನುಭವಿಗಳಿಗೆ ಪ್ರಮಾಣ ಪತ್ರ ಕಿಸಾನ್ ಕ್ರೆಡಿಟ್ ಕಾರ್ಡ್ ಉಜ್ವಲ ಉಚಿತ ಸಿಲಿಂಡರ್ ಗಳನ್ನು ಸಾಂಕೇತಿಕವಾಗಿ ಕೆಲ ಫಲಾನುಭವಿಗಳಿಗೆ ವಿತರಿಸಲಾಯಿತು. ರಾಷ್ಟ್ರೀಯ ರಾಸಾಯನಿಕ ಗೊಬ್ಬರ ಇಲಾಖೆಯಿಂದ ಜೂನ್ ಮೂಲಕ ಯೂರಿಯಾ ಸಿಂಪಡಣೆ ಪ್ರಾತ್ಯಕ್ಷಿಕೆ ನೀಡಲಾಯಿತು.
ನೇರಳಕುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಗೀತಾ, ಎಸ್‌ಬಿಐ ಬಿಜಿಎಂ ರಾಜಶೇಖರ್, ಕೆನರಾ ಬ್ಯಾಂಕ್ ಬಿಜೆಎಂ ರಮೇಶ್, ಕೆನರಾ ಬ್ಯಾಂಕ್ ಆರ್ ಎಂ ಉಮೇಶ್ ಪಿ ಎಸ್, ಲೀಡ್ ಡಿಸ್ಟ್ರಿಕ್ಟ್ ಮ್ಯಾನೇಜರ್ ನಾಗೇಶ್ ವಿ ಎನ್, ಎಸ್ ಎಲ್ ಬಿ ಸಿ ಜನರಲ್ ಮ್ಯಾನೇಜರ್ ಭಾಸ್ಕರ್ ಚಕ್ರವರ್ತಿ, ಕೇಂದ್ರ ಸನ್ಮಾನ ಇಲಾಖೆಯ ಅಧಿಕಾರಿ ಶೃತಿ ಎಸ್ ಟಿ, ನಬಾರ್ಡ್ ಜಿಲ್ಲಾಮಟ್ಟದ ಅಧಿಕಾರಿ ಹಿತಾ ಸುವರ್ಣ ಮತ್ತು ಗ್ರಾಮಸ್ಥರು ನೆರೆದಿದ್ದರು.