ಚಾಮರಾಜನಗರ: ನಗರದ ಗಾಳೀಪುರ ಬಡಾವಣೆಗಳಲ್ಲಿ ರಸ್ತೆಯ ಎರಡು ಇಕ್ಕಲೆಗಳಲ್ಲಿ ಸುಸಜ್ಜಿತ ಚರಂಡಿಗಳು, ರಸ್ತೆ ಅಭಿವೃದ್ದಿ ಹಾಗೂ ಮೂಲ ಸೌಕರ್ಯ ಕಲ್ಪಿಸುವ ದೃಷ್ಠಿಯಿಂದ ಶಾಸಕ ಸಿ,ಪುಟ್ಟರಂಗಶೆಟ್ಟಿ ನಗರಸಭಾ ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ಬೇಟಿ ನೀಡಿ ಪರಿಶೀಲಿಸಿದರು.
ಇದೇ ವೇಳೆ ಬಡಾವಣೆಯ ನಿವಾಸಿಗಳು ಬೀದಿ ದೀಪ, ಕುಡಿಯುವ ನೀರು, ರಸ್ತೆ ಹಾಗೂ ಚರಂಡಿಗಳು ನಿರ್ಮಾಣ, ಚರಂಡಿಗಳಲ್ಲಿ ಕಸ ತೆರವುಗೂಳಿಸ ಕೂಡಬೇಕೇಂದು ಶಾಸಕರಲ್ಲಿ ಮನವಿ ಮಾಡಿ ಕೂಂಡರು.
ಪರಿಶೀಲಿಸಿದ ನಂತರ ಶಾಸಕ ಸಿ,ಪುಟ್ಟರಂಗಶೆಟ್ಟಿ ಮಾತನಾಡಿ ನಗರದ ಬಡಾವಣೆಗಳಲ್ಲಿ ಸ್ವಚ್ಘತೆ ಕೈಗೂಳ್ಳುವಂತೆ ನಗರಸಭಾ ಅಧಿಕಾರಿಗಳಿಗೆಸೂಚನೆ ನೀಡಿದರು.
27ರಂದು ಚಾಮರಾಜನಗರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಗಮಿಸಲಿದ್ದಾರೆ. ಹೂಸದಾಗಿ ರಸ್ತೆ, ಚರಂಡಿ, ಹಾಗೂ ನಗರದ ಪ್ರಮುಖ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ದಿ ಪಡಿಸುವ ದೃಷ್ಠಿಯಿಂದ ಅಗತ್ಯ ಅನುದಾನ ನೀಡುವಂತೆ ಮನವಿ ಮಾಡಿಕೂಳ್ಳಲಾಗುವುದು ಎಂದು ಶಾಸಕರು ತಿಳಿಸಿದರು.
ನಗರಸಭಾ ಪೌರಾಯುಕ್ತ ರಾಮದಾಸ್, ನಗರಸಭಾ ಸದಸ್ಯರಾದ ರಾಜಪ್ಪ, ಮಹಮದ್‍ಅಮೀ,ಅಪ್ಸರ್‍ಪಾಷ, ಇನ್ಸರ್, ಕಲೀಲ್ ವುಲ್, ಮಾಜಿ ನಗರಸಭಾ ಸದಸ್ಯ ಮಹಮದ್‍ಅತ್ತಿಕ್, ಮಹದೇವ್ ,ನಗರಸಭಾ ಇಂಜಿನಿಯರ್ ರೇಣುಕಾರಾಧ್ಯ, ಆರೋಗ್ಯೆ ನಿರೀಕ್ಷಕ ಮಂಜು, ಕೆ,ಇ,ಬಿ ಇಂಜಿನಿಯರ್‍ಮಂಜುನಾಥ್, ಸೇರಿದಂತೆ ಇತರರು ಇದ್ದರು.
