ಚಾಮರಾಜನಗರ: ತಾಲೂಕಿನ ಪುಣಜನೂರು ಗ್ರಾಮ ಪಂಚಾಯತಿಯಲ್ಲಿ ವಿವಿಧ ವಸತಿ ಯೋಜನೆಯ 2023-24 ನೇ ಸಾಲಿನ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಕ್ರಿಯಾ ಯೋಜನೆ ಸಂಬಂಧ ಗ್ರಾಮಪಂಚಾಯಿತಿ ಅಧ್ಯಕ್ಷೆ ಸಿ.ವಿ. ಭಾಯಿ ಗಣೇಶ್ ಅವರ ಅಧ್ಯಕ್ಷತೆಯಲ್ಲಿ ಗ್ರಾಮಸಭೆ ನಡೆಯಿತು.

ಇದೇ ವೇಳೆ ಅವರು ಮಾತನಾಡಿ, ಅಮೃತ ಯೋಜನೆಯಡಿಯಲ್ಲಿ ಪುಣಜನೂರು ಗ್ರಾ.ಪಂ ಸೇರಿಸುವ ಪ್ರಯತ್ನದಲ್ಲಿ ಎಲ್ಲರೂ ಒಗ್ಗೂಡಿ ಕೆಲಸ ಮಾಡಿದರೆ ಗ್ರಾಮ ಪಂಚಾಯತಿಯನ್ನು ಮತ್ತಷ್ಟು ಅಭಿವೃದ್ದಿಪಡಿಸಲು ಸಾಧ್ಯವಿದೆ. ಈಗಾಗಲೇ ಗ್ರಾ.ಪಂ ವ್ಯಾಪ್ತಿಯಲ್ಲಿ ವಸತಿ ಹೀನರು, ಕಡು ಬಡವರನ್ನು ಗುರ್ತಿಸಿ ಅವರಿಗೆ ವಸತಿ ನಿಮಾಣ ಮಾಡಿಕೊಡುವ ಪ್ರಯತ್ನದಲ್ಲಿದ್ದು, ಗ್ರಾಮಸಭೆಗಳಲ್ಲಿ ವಿಶೇಷವಾಗಿ ವಿಧವೆಯರು, ಅಂಗವಿಕಲರು, ಹಿರಿಯ ನಾಗರೀಕರು,ಮಹಿಳೆಯತಿಗೆ ಮೊದಲ ಆದ್ಯತೆ ನೀಡಿ ಆಯ್ಕೆ ಮಾಡಬೇಕು ಎಂದರು.
ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಸಿದ್ದರಾಜು ಮಾತನಾಡಿ, ಈಗಾಗಲೇ ಗ್ರಾ.ಪಂ ವ್ಯಾಪ್ತಿಯಲ್ಲಿ ವಾರ್ಡ್ಸಭೆ ನಡೆಸಲಾಗಿದ್ದು, 233 ಅರ್ಜಿಗಳು ಬಂದಿವೆ. ಪರಿಶಿಷ್ಟ ಜಾತಿಗೆ -75, ಪರಿಶಿಷ್ಟ ಪಂಗಡಕ್ಕೆ – 64, ಸಾಮಾನ್ಯ ವರ್ಗದವರಿಗೆ – 34 ಮನೆಗಳು ಸೇರಿದಂತೆ 174 ಮನೆಗಳು ಮಂಜೂರಾಗಿದೆ.
ನರೇಗಾ ಯೋಜನೆಯಡಿ, ದಿನಕ್ಕೆ 316 ಕೂಲಿ ನಿಗಧಿ ಮಾಡಿದ್ದು, ಉದ್ಯೋಗಖಾತರಿ ಹಣ ನೇರವಾಗಿ ಫಲಾನುಭವಿಗಳ ಖಾತೆಗೆ ನೇರವಾಗಿ ಜಮಾ ಆಗಲಿದೆ. ಫಲಾನುಭವಿಗಳು ಸರಕಾರದ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗುವಂತೆ ಸಲಹೆ ನೀಡಿದರು.
ಗ್ರಾಪಂ ಉಪಾಧ್ಯಕ್ಷ ರಾಚಪ್ಪ, ಲೆಕ್ಕಾಧಿಕಾರಿ ಮಹದೇವಸ್ವಾಮಿ, ವಾಟರ್ಮೆನ್ ಮಹದೇವನಾಯಕ ವಿವಿಧ ಗ್ರಾಪಂ ಸದಸ್ಯರು. ಪಿಎಸಿಸಿ ಬ್ಯಾಂಕ್ ನಿರ್ದೇಶಕರು, ಗ್ರಾಮದ ಮುಖಂಡರು ಗ್ರಾಮಸ್ಥರು ಹಾಜರಿದ್ದರು.