ಮೈಸೂರು: ಶ್ರೀ ಚಂದ್ರಮೌಳೇ ಶ್ವರಸ್ವಾಮಿ ದೇವಸ್ಥಾನ ಟ್ರಸ್ಟ್, ಮೈಸೂರು ನೇಗಿಲಯೋಗಿ ಮಹಿಳೆಯರ ಕ್ಷೇಮಾಭಿವೃದ್ಧಿ ಸಂಘ ಮತ್ತು ನೇಗಿಲ ಯೋಗಿ ಸಮಾಜ ಸೇವಾ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಡಿ.11ರ ಸೋಮವಾರ ಸಂಜೆ 5 ಗಂಟೆಗೆ ಕೆ.ಜಿ.ಕೊಪ್ಪಲಿನ ಶ್ರೀ ಚಂದ್ರ ಮೌಳೇಶ್ವರಸ್ವಾಮಿ ದೇವಸ್ಥಾನದ ಆವ ರಣದಲ್ಲಿ ಸಾಮೂಹಿಕ ದೀಪೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಆಸಕ್ತ ಭಕ್ತಾದಿಗಳು ತಮ್ಮ ಸ್ವಂತ ದೀಪ, ಎಣ್ಣೆ ಇತ್ಯಾದಿಗಳನ್ನು ತಂದು ಆವರಣದಲ್ಲಿ ದೀಪವನ್ನು ನಿಗದಿಪಡಿಸಿರುವ ಸ್ಥಳದಲ್ಲಿ ಹಚ್ಚಬಹುದು ಅಥವಾ ಆಯೋಜಕರು ವ್ಯವಸ್ಥೆ ಮಾಡಿರುವ ದೀಪ, ಎಣ್ಣೆ ಇತ್ಯಾದಿಗಳನ್ನು ಬಳಸಿಕೊಂಡು ವ್ಯವಸ್ಥೆ ಮಾಡಿರುವ ದೀಪಗಳನ್ನು ತಮ್ಮ ಹೆಸರಿನಲ್ಲಿ ಮತ್ತು ಪರವಾಗಿ ಬೇರೆಯವರ ಮೂಲಕವೂ ಹಚ್ಚಬಹುದು.
ಅಂದು ಸಾಮೂಹಿಕ ಭಜನಾ ಕಾರ್ಯ ಕ್ರಮವನ್ನು ಹಮ್ಮಿಕೊಂಡಿದ್ದು, ಆಸಕ್ತರು ಇದರ ಸದುಪಯೋಗವನ್ನು ಪಡೆದುಕೊಂಡು ಭಜನಾ ಕಾರ್ಯಕ್ರಮದಲ್ಲಿ ಭಾಗ ವಹಿಸಬಹುದು ಹಾಗೂ ಸೆಲ್ಪಿ ಪಾಯಿಂಟ್ ವ್ಯವಸ್ಥೆಯನ್ನು ಮಾಡಲಾಗಿದೆ.
ನೋಂದಣಿ ಮತ್ತು ಹೆಚ್ಚಿನ ಮಾಹಿತಿ ಗಾಗಿ ನೇಗಿಲಯೋಗಿ ಮರುಳೇಶ್ವರ ಸೇವಾ ಭವನ, ಹೊಸ ನ್ಯಾಯಾಲಯದ ಎದುರು, ಕೆ.ಜಿ.ಕೊಪ್ಪಲು, ಮೈಸೂರು ಅಥವಾ ಶ್ರೀ ಚಂದ್ರಮೌಳೇಶ್ವರಸ್ವಾಮಿ ದೇವಸ್ಥಾನ ಟ್ರಸ್ಟ್, ನ್ಯೂ ಕಾಂತರಾಜ ಅರಸ್ ರಸ್ತೆ, ಕೆ.ಜಿ. ಕೊಪ್ಪಲು, ಸರಸ್ವತಿಪುರಂ ಮೊ. 94483 92488, 9113201893, 7204518109, 9900629393, 9448428899, 7892 172182 ಮೂಲಕ ಸಂಪರ್ಕಿಸಬಹುದು.