ಚಾಮರಾಜನಗರ ಪಟ್ಟಣ ವಿವಿಧೆಡೆ ಆಶಾಕಿರಣ ಆಂದೋಲನ ಕಾರ್ಯಕ್ರಮದಡಿ ನೇತ್ರ ತಪಾಸಣಾ ಶಿಬಿರ : ಸದುಪಯೋಗಕ್ಕೆ ಮನವಿ

ಚಾಮರಾಜನಗರ: ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಸಮಗ್ರ ನೇತ್ರ ತಪಾಸಣೆ ಮತ್ತು ಉಚಿತ ಶಸ್ತ್ರಚಿಕಿತ್ಸೆ ಆಶಾಕಿರಣ ಆಂದೋಲನಾ ತಪಾಸಣಾ ಶಿಬಿರಗಳನ್ನು ಚಾಮರಾಜನಗರ ಪಟ್ಟಣ ಪ್ರದೇಶದಲ್ಲಿ ನವೆಂಬರ್ 10ರವರೆಗೆ ಹಮ್ಮಿಕೊಳ್ಳಲಾಗಿದೆ.

ಶಿಬಿರದಲ್ಲಿ ಸಮೀಪ ದೃಷ್ಠಿ ದೋಷ, ದೂರ ದೃಷ್ಠಿ ದೋಷ, ಕಣ್ಣಿನ ಪೊರೆ ಹಾಗೂ ಇತರೆ ಕಣ್ಣಿನ ತೊಂದರೆ ಇರುವ ಎಲ್ಲಾ ವಯೋಮಾನದ ನಾಗರಿಕರಿಗೆ ಕಣ್ಣಿನ ತಪಾಸಣೆ ನಡೆಸಲಾಗುವುದು.

ಸೋಮವಾರಪೇಟೆ, ವರದರಾಜಪುರ, ಗಾಳಿಪುರ, ವಾರ್ಡ್ ಸಂ 1,2,3,4,5,6ರ ನಾಗರಿಕರಿಗೆ ಒಪ್ಪು ಮಸೀದಿ ಹತ್ತಿರ ಶಿಬಿರ ಏರ್ಪಡಿಸಲಾಗಿದೆ. ಮೂಡ್ಲುಪುರ, ಮಹದೇಶ್ವರ ಕಾಲೋನಿ, ಕೊಳದಬೀದಿ, ದೇವಾಂಗಬೀದಿ, ವಾರ್ಡ್ ಸಂ 7,8,11,20,21ರ ನಾಗರಿಕರಿಗೆ ಕೊಳದಬೀದಿಯಲ್ಲಿರುವ ಯಾತ್ರೀ ಭವನದಲ್ಲಿ ಶಿಬಿರ ಹಮ್ಮಿಕೊಳ್ಳಲಾಗಿದೆ. ಪೌರಕಾರ್ಮಿಕರ ಕಾಲೋನಿ, ಡಾ.ಬಿ.ಆರ್. ಅಂಬೇಡ್ಕರ್ ಬಡಾವಣೆ, ಮದೀನ ಮಸೀದಿ ಬೀದಿ, ಕೆ.ಪಿ. ಮೊಹಲ್ಲಾ, ವಾರ್ಡ್ ಸಂ 9,12,13,14,15ರ ನಾಗರಿಕರಿಗೆ ಪೇಟೆ ಪ್ರೈಮರಿ ಶಾಲೆಯಲ್ಲಿ ಶಿಬಿರ ಏರ್ಪಡಿಸಲಾಗಿದೆ. ರೈಲ್ವೇ ಬಡಾವಣೆ, ಉಪ್ಪಾರ ಬೀದಿ, ನಾಯಕರ ಬೀದಿ, ವಾರ್ಡ್ ಸಂ 16,17,18,19,22ರ ಸಾರ್ವಜನಿಕರಿಗೆ ಉಪ್ಪಾರ ಭವನದಲ್ಲಿ ಶಿಬಿರ ಆಯೋಜಿತವಾಗಿದೆ. ಚೆನ್ನಿಪುರದಮೋಳೆ, ಜಾಲಹಳ್ಳಿಹುಂಡಿ, ಭಗೀರಥನಗರ, ಹೌಸಿಂಗ್‍ಬೋರ್ಡ್, ಕರಿನಂಜನಪುರ ವಾರ್ಡ್ ಸಂ 23,24,25, 26,10ರ ನಾಗರಿಕರಿಗೆ ಸಿ.ಡಿ.ಎಸ್ ಭವನದಲ್ಲಿ ಶಿಬಿರ ಏರ್ಪಡಿಸಲಾಗಿದೆ. ದೊಡ್ಡಬೀದಿ, ಆದಿ ಜಾಂಬವರ ಬೀದಿ, ಸುಬೇದಾರ ಕಟ್ಟೆ ಬೀದಿ, ಒಟ್ಟಾರೆ ರಾಮಸಮುದ್ರ, ವಾರ್ಡ್ ಸಂ 27,28,29,30,31ರ ನಾಗರಿಕರಿಗೆ ರಾಮಸಮುದ್ರದ ಪ್ರಥಮ ಚಿಕಿತ್ಸಾ ಕೇಂದ್ರದಲ್ಲಿ ಶಿಬಿರ ಹಮ್ಮಿಕೊಳ್ಳಲಾಗಿದೆ.
ಪಟ್ಟಣದ ನಾಗರಿಕರು ಶಿಬಿರದ ಸದುಪಯೋಗ ಮಾಡಿಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಚಿದಂಬರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *