ಜಿಲ್ಲಾ ಕನ್ನಡ ಸಂಘದಿಂದ ಕನ್ನಡ ರಾಜ್ಯೋತ್ಸವ ಆಚರಣೆ

ಚಾಮರಾಜನಗರ: ನಗರದ ಶ್ರೀಚಾಮರಾಜೇಶ್ವರ ಉದ್ಯಾನವನದ ಮುಂಭಾಗದಲ್ಲಿ  ಜಿಲ್ಲಾ ಕನ್ನಡ ಸಂಘದ ವತಿಯಿಂದ ಸುವರ್ಣ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.

ಸಂಘದ ಮಾಜಿ ಅಧ್ಯಕ್ಷ ಚಂದ್ರಶೇಖರ್ ಧ್ವಜಾರೋಹಣ ನೆರೆವೇರಿಸಿದರು.

ಅಧ್ಯಕ್ಷ ತೆ ವಹಿಸಿದ ಸಂಘದ ಅಧ್ಯಕ್ಷ ಸಿ.ಎ.ಮಹದೇವಶೆಟ್ಟಿ, ಮಾತನಾಡಿ, ಸುವರ್ಣ ಕರ್ನಾಟಕ ಸಂಭ್ರಮದ  ನೆನಪಿನಾರ್ಥವಾಗಿ ಸಂಘವು ಮುಂದಿನ ದಿನಗಳಲ್ಲಿ ಪಂಚಲೋಹದಿಂದ  3 ಅಡಿ ಎತ್ತರದ ಭುವನೇಶ್ವರಿ ಉತ್ಸವ ಮೂರ್ತಿ  ಮಾಡಿಸಿ, ಕನ್ನಡ ಕಾರ್ಯಕ್ರಮಗಳ ಮೆರವಣಿಗೆಗೆ ಉಚಿತವಾಗಿ ಕೊಡಲಾಗುತ್ತದೆ ಅಲ್ಲದೆ  ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಈ ಕಾರ್ಯಕ್ರಮಕ್ಕೆ  ಜನಪ್ರತಿನಿಧಿಗಳು, ವಿವಿಧ ಗಣ್ಯರನ್ನು ಆಹ್ವಾನಿಸಲಾಗುವುದು. ಕಾರ್ಯಕ್ರಮದಲ್ಲಿ ಕನ್ನಡ ಭಾಷೆ ಸಾಧಕರನ್ನು ಸನ್ಮಾನಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಸಂಘ ಪ್ರಧಾನ ಕಾರ್ಯದರ್ಶಿ ಎಂ.ಎಸ್.ರಾಧಾಕೃಷ್ಣ, ನಿರ್ದೇಶಕರಾದ ಚಾ.ಪು.ಬಂಗಾರನಾಯಕ, ಶ್ರೀನಾಥ್, ವೆಂಕಟರಮಣನಾಯಕ, ನಗರ ಸಭಾ ಮಾಜಿ ಸದಸ್ಯ ಚಿನ್ನಸ್ವಾಮಿ, ಇತರರು ಹಾಜರಿದ್ದರು.

Leave a Reply

Your email address will not be published. Required fields are marked *