ಚಾಮರಾಜನಗರ: ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ 148 ನೇ ಜನ್ಮದಿನಾಚರಣೆ ಹಾಗೂ ಮಾಜಿಪ್ರಧಾನಿ ಇಂದಿರಾಗಾಂಧೀಜಿ ಅವರ 39 ನೇ ಪುಣ್ಯಸ್ಮರಣೆ ಕಾರ್ಯಕ್ರಮ ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಮಂಗಳವಾರ ನಡೆಯಿತು.
ಮಾಜಿಪ್ರಧಾನಿ ಇಂದಿರಾಗಾಂಧಿ ಮತ್ತು ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದ ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ” ಭಾರತದೇಶದ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಅವರು ಕಾಂಗ್ರೆಸ್ ಪಕ್ಷವನ್ನು ಸಮರ್ಥವಾಗಿ ಕಟ್ಟುವ ಕೆಲಸಮಾಡಿದರು. ದೇಶದ ಜನರ ಕಲ್ಯಾಣಕ್ಕಾಗಿ ಜಾರಿಗೆ ತಂದ ಗರೀಬಿಹಠಾವೋ, ಭೂಸುಧಾರಣೆಯಂತಹ, ಆಹಾರಭದ್ರತೆಯಂತಹ 20ಅಂಶದ ಕಾರ್ಯಕ್ರಮಗಳು ಇಂದಿಗೂ ಜನಪ್ರಿಯವಾಗಿವೆ. ಅವರ ಹಾದಿಯಲ್ಲಿ ಇಂದು ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜು ನಖರ್ಗೆ ಅವರು ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ. ಕ್ರಿಯಾಶೀಲಪ್ರಧಾನಿಯಾಗಿದ್ದ ಇಂದಿರಾ ಅವರನ್ನು ಅವರ ಅಂಗರಕ್ಷಕರೇ ಹತ್ಯೆಗೈದದ್ದು. ದುರಂತದ ಸಂಗತಿಯಾಗಿದೆ ಎಂದು ವಿಷಾಧಿಸಿದರು.
ಇಂದಿರಾಗಾಂಧಿ ಅವರಂತೆ ವಲ್ಲಭಬಾಯಿ ಪಟೇಲರು ಉಕ್ಕಿನ ಮನುಷ್ಯ ಎಂದೇ ಪ್ರಸಿದ್ದಿಯಾಗಿದ್ದರು. ಸ್ವಾತಂತ್ರ್ಯ ನಂತರ ಹಲವಾರು ಕಡೆ ಹರಿದುಹಂಚಿಹೋಗಿದ್ದ ನಾನಾಭಾಗಗಳನ್ನು ಒಟ್ಟುಗೂಡಿಸಿದರು ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿ,” ಅಖಂಡಭಾರತ ನಿರ್ಮಾಣಮಾಡಿದ ಸರ್ದಾರ್‍ವಲ್ಲಭ ಬಾಯ್ ಪಟೇಲ್ ಹಾಗೂ ಮಾಜಿಪ್ರಧಾನಿ ದಿ.ಇಂದಿರಾಗಾಂಧಿ ಅವರು ದೇಶಕ್ಕೆ ನೀಡಿದ ಜನಪರ ಕಾರ್ಯಕ್ರಮಗಳನ್ನು ಸ್ಮರಣೆ ಮಾಡುವ ಅಗತ್ಯವಿದೆ” ಎಂದರು,
ಜಿಲ್ಲಾ ಕಾಂಗೆಸ್ ಉಪಾಧ್ಯಕ್ಷ ಬಿ,ಕೆರವಿಕುಮಾರ್, ಜಿಲ್ಲಾ ಕಾಂಗೆಸ್ ಮಹಿಳಾ ಅಧ್ಯಕ್ಷೆ ಲತಾರಾಜಶೇಖರ್‍ಜತ್ತಿ, ಜಿಲ್ಲಾ ಕಾಂಗ್ರೆಸ್ ಪ್ರಧಾನಕಾರ್ಯದರ್ಶಿ ಚಿಕ್ಕಮಹದೇವ, ಆರ್ ಮಹದೇವ್, ನಗರಸಭಾ ಸದಸ್ಯರಾದ ಚಿನ್ನಮ್ಮ, ಕಲಾವತಿ, ನೀಲಮ್ಮ, ಭಾಗ್ಯೆಮ್ಮ, ನಾಗರತ್ನ, ಜಿ,ಪಂ ಮಾಜಿ ಸದಸ್ಯ ರಮೇಶ್, ಜಿಲ್ಲಾ ಕಾಂಗ್ರೆಸ್ ಎಸ್,ಸಿ ಘಟಕದ ಅಧ್ಯಕ ಸೋಮೇಶ್ವರ್, ಸಿ,ಕೆ ಮಂಜುನಾಥ್ ನಸುಲ್ಲ್ರಾಖಾನ್, ನಾಗಯ್ಯ ನಾಗವಳ್ಳಿ, ಸೇವಾ ದಳದ ಜಿಲ್ಲಾ ಅಧ್ಯಕ್ಷ ಜಯರಾಜ್,ತಾಲ್ಲೂಕುಉಪಾಧ್ಯಕ್ಷಎಂ,ಸಿ,ನಾಗರಾಜು,ಆಯುಬ್‍ಖಾನ್,ಮರಿಯಾದಹುಂಡಿಕುಮಾರ್, ಶಿವಕುಮಾರ್‍ರಾಮಸಮುದ್ರ, ಎ,ಪಿ,ಎಂ,ಸಿ ಸದಸ್ಯ ಸೋಮೇಶ್, ಅಲ್ಪ ಸಂಖ್ಯಾತ ಬ್ಲಾಕ್ ಅಧ್ಯಕ್ಷ ಸೈಯದ್‍ಅಹ್ಮದ್, ಸ್ಯಯದ್‍ಮೊಹದ್ದೀನಿ, ನಗರಸಭಾ ಮಾಜಿಸದಸ್ಯ ಚಂಗುಮಣಿ, ಸೇವಾ ದಳದ ಸದಸ್ಯರಾದ ಕಲೀಮ್, ನಂಜದೇವರು, ಯವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ಮೋಹನ್,ಅಕ್ಷಯ್, ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತ ಹಾಜರಿದ್ದರು.