ಜೈ ಹಿಂದ್ ಕಟ್ಟೆಯಲ್ಲಿ ನವರಾತ್ರಿ ಸಂಭ್ರಮ

ಚಾಮರಾಜನಗರ: ಜೈ ಹಿಂದ್ ಪ್ರತಿಷ್ಠಾನ ಮತ್ತು ಋಗ್ವೇದಿ ಯೂತ್ ಕ್ಲಬ್ ವತಿಯಿಂದ ನಗರದ ಜೈ ಹಿಂದ್ ಕಟ್ಟೆಯಲ್ಲಿ ನವರಾತ್ರಿ ಸಂಭ್ರಮ ಕಾರ್ಯಕ್ರಮದಲ್ಲಿ ಶಾರದಾಂಬೆಗೆ ಪುಷ್ಪ ಸಲ್ಲಿಸುವ ಮೂಲಕ ಉದ್ಘಾಟಿಸಲಾಯಿತು.

ಬೆಂಗಳೂರಿನ ದಿ ಹೆಲ್ತ್ ಪಾಯಿಂಟ್ ಜಿಮ್ ಮಾಲೀಕರಾದ ಹಾಗೂ ಜಿಮ್ ನಲ್ಲಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಬಿ ಕೆ ಪ್ರಕಾಶ್ ರವರು ಉದ್ಘಾಟಿಸಿ ಮಾತನಾಡಿ, ನವರಾತ್ರಿ ಸಂಭ್ರಮ ಸರ್ವರಿಗೂ ಒಳಿತನ್ನು ಮಾಡಲಿ. ಮಳೆ ಬೆಳೆಯಾಗಿ ಜೀವನ ಹಾಗೂ ರೈತರ ಕಲ್ಯಾಣವಾಗಲಿ. ಬರಗಾಲ ಬೇಗ ಹೋಗಲಿ. ಮಳೆ ಯಾಗಲಿ ಎಂದು ಸರ್ವರೂ ತಾಯಿಯಲ್ಲಿ ಪ್ರಾರ್ಥಿಸೋಣ.  ನವರಾತ್ರಿ ನವಶಕ್ತಿಯ ಹಬ್ಬ. ನವರಾತ್ರಿಯಲ್ಲಿ ತಾಯಿ ದುರ್ಗಾ ಮಾತೆಯ ಧ್ಯಾನ ಮತ್ತು ಪ್ರಾರ್ಥನೆಯನ್ನು ನೆರವೇರಿಸುವ ಮೂಲಕ ಎಲ್ಲಾ ಸಂಕಷ್ಟಗಳು ದೂರವಾಗಲಿ ಎಂದು ಪ್ರಾರ್ಥಿಸಿದರು.

ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತರಾದ ಸುರೇಶ್ ಎನ್ ಋಗ್ವೇದೀ ಮಾತನಾಡಿ, 9 ದಿನಗಳ ಕಾಲ ನಿರಂತರವಾಗಿ ನಾಡಿನ ಎಲ್ಲಾ  ಜನರು ವಿಶೇಷ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸುವ ಮೂಲಕ ಪ್ರಕೃತಿಯನ್ನು ಪೂಜಿಸಿ ಸರ್ವ ಶಕ್ತಿಯನ್ನು ಭಗವಂತ ನೀಡುವಂತಾಗಲಿ .ಸರ್ವೇ ಜನಃ ಸುಖಿನೋ ಭವಂತು ಎಂಬಂತೆ ಸರ್ವರಿಗೂ ಒಳಿತನ್ನು ಮಾಡಲಿ ಎಂದು ತಿಳಿಸಿದರು.

ಅಖಿಲ ಕರ್ನಾಟಕ ಗ್ರಾಹಕ ಪರಿಷತ್ತಿನ ಮುಖ್ಯಸ್ಥರಾದ ರಾಜೇಶ್, ಋಗ್ವೇದೀ ಯೂತ್ ಕ್ಲಬ್ ಅಧ್ಯಕ್ಷರಾದ ಶರಣ್ಯ ಋಗ್ವೇದಿ ಮತ್ತು ಶ್ರಾವ್ಯ ಋಗ್ವೇದಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *