ಚಾಮರಾಜನಗರ: ಡಾ.ಎಪಿಜೆ ಅಬ್ದುಲ್‌ಕಲಾಂ ಅವರ ಸ್ಮರಣಾರ್ಥವಾಗಿ ಬ್ರದರ್ಸ್ ಕ್ರಿಕೆಟ್ ಕ್ಲಬ್ ವತಿಯಿಂದ ನ. 3 ರಿಂದ 5 ರವರಗೆ ಐಪಿಎಲ್ ಮಾದರಿಯಲ್ಲಿ ನಗರದಲ್ಲಿ ನಡೆಯುವ ಕ್ರಿಕೆಟ್ ಪಂದ್ಯಾವಳಿಗೆ ಆಟಗಾರರನ್ನು ಆರಿಸುವ ಸಲುವಾಗಿ ಆಟಗಾರರ ಹರಾಜು ಪ್ರಕ್ರಿಯೆ ನಗರದ ಮೌಲಾನ ಆಜಾದ್ ಕಮ್ಯೂನಿಟಿ ಹಾಲ್‌ನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮದೀನಾ ಮಸೀದಿ ಗುರುಗಳಾದ ಸೈಯದ್ ಮೊಕ್ತಾರ್, ಸಿದ್ದಮಲ್ಲೇಶ್ವರ ವಿರಕ್ತ ಮಠಾಧ್ಯಕ್ಷರಾದ ಶ್ರೀಚನ್ನಬಸವಾಸ್ವಾಮೀಜಿ, ಬಳ್ಳಾರಿ ಅಯ್ಯೂಬ್, ಮದೀನಾ ಮಸೀದಿಯ ಅಧ್ಯಕ್ಷ ನಯೀಂ ಉಲ್ಲಾ ಹಕ್, ಇರ್ಫಾನ್ ಖಾನ್, ಪ್ರಸನ್ನಕುಮಾರ್, ಜುಬೇರ್ ಉಲ್ ಹಕ್, ನಯಾಜ್ ಪಾಷ, ಸುದರ್ಶನ್ ರೆಡ್ಡಿ, ಸೈಯದ್ ಅಲೀಂ, ತೌಸೀಫ್ ಖಾನ್, ಗ್ರಾನೈಟ್ ಮಾಲೀಕರಾದ ಸೈಯದ್ ಅಜೀಜ್, ನಗರಸಭಾ ಸದಸ್ಯ ಅಬ್ರಾರ್ ಅಹಮದ್, ಅಯೋಜಕರಾದ ನವಾಜ್ ಷರೀಪ್ ಅಬ್ದುಲ್ ರೆಹಮಾನ್, ಮುಸಾಯಿದ್ ಉಲ್ಲಾ, ಜುಬೇರ್ ಉಲ್ಲಾ, ಸೈಯದ್ ವಾಸೀಂ ಅಬ್ದುಲ್, ಜಹೀದ್ ,ಜಬಿವುಲ್ಲಾ ಖಾನ್ ಹಾಜರಿದ್ದರು. 6 ತಂಡಗಳು. ಭಾಗವಹಿಸಿದ್ದವು