ಮೈಸೂರು: ಇಂದಿನ ಡಿಜಿಟಲ್‍ಯುಗದಲ್ಲಿ ಕಾರ್ಪೋರೇಟ್ ಉದ್ಯಮ ಬದಲಾಗುತ್ತಿರುವ ಪರಿ ಹಾಗೂ ಈ ಪ್ರಗತಿಗೆ ಪೂರಕವಾಗಿ ಇಂದಿನ ವಿದ್ಯಾರ್ಥಿಗಳು ಹೇಗೆ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದು ಎಂಬ ವಿಷಯದ ಕುರಿತು ಅಮೃತ ವಿಶ್ವವಿದ್ಯಾಪೀಠಂ, ಮೈಸೂರು ಕ್ಯಾಂಪಸ್‍ನಲ್ಲಿ ಪ್ಯಾನೆಲ್ ಡಿಸ್ಕಶನ್ ನಡೆಯಿತು. ಅಮೃತ ವಿಶ್ವವಿದ್ಯಾಪೀಠಂ ಮೈಸೂರುಕ್ಯಾಂಪಸ್‍ನ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗ ಹಾಗೂ ಕಾರ್ಪೋರೇಟ್ &ಇಂಡಸ್ಟ್ರಿ ರಿಲೇಶನ್ಸ್ ವಿಭಾಗದಜಂಟಿ ಸಹಯೋಗದಲ್ಲಿ ಈ ಕಾರ್ಯಕ್ರಮ ಅಕ್ಟೋಬರ್ 6 ರಂದುಆಯೋಜಿಸಲಾಗಿತ್ತು.

ಎಬಿ ವೋಲ್ವೋನ ಮಾನವ ಸಂಪನ್ಮೂಲ ವಿಭಾಗದ ಬ್ಯುಸಿನೆಸ್ ಪಾಟ್ರ್ನರ್ ಆಗಿರುವ ಅರವಿಂದ್ ವಾರಿಯರ್; ತಿರುಚಿರಪಲ್ಲಿಯ ಇಂಡಿಯನ್ ಇನ್ಸ್‍ಟಿಟ್ಯೂಟ್‍ಆಫ್ ಮ್ಯಾನೇಜ್‍ಮೆಂಟ್‍ನಲ್ಲಿ ಮ್ಯಾನೇಜರ್ (ಪ್ಲೇಸ್‍ಮೆಂಟ್ಸ್) ಆಗಿರುವ ಶ್ಯಾಮ್; ಬೆಂಗಳೂರಿನ ಐಎಸ್‍ಬಿಆರ್ ಬ್ಯುಸಿನೆಸ್ ಸ್ಕೂಲ್‍ನ ಲನಿರ್ಂಗ್ ಅಂಡ್ ಡೆವಲಪ್‍ಮೆಂಟ್ ವಿಭಾಗದಲ್ಲಿ ಅಸೋಸಿಯೇಟ್ ಪೆÇ್ರಫೆಸರ್ ಹಾಗೂ ಸೀನಿಯರ್ ಮ್ಯಾನೇಜರ್ ಆಗಿರುವ ಡಾ.ಬಾಲಚಂದರ್‍ಎಸ್; ಎಂಫಸಿಸ್‍ನ ಇಂಡಿಯಾ ಕ್ಯಾಂಪಸ್ ಲೀಡ್ ಆಗಿರುವ ಜೋಶುವಾಡೇವಿಡ್; ಫ್ರೀಲಾನ್ಸ್ ಕನ್ಸಲ್ಟಂಟ್ ಆಗಿರುವ ಪ್ರೀತಮ್ ಐಯ್ಯರ್ ಪ್ಯಾನೆಲಿಸ್ಟ್‍ಗಳಾಗಿ ಭಾಗವಹಿಸಿದ್ದರು. ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ಮುಖ್ಯಸ್ಥರಾದ ಡಾ.ಕೆ.ಬಾಲಾಜಿ ಪ್ಯಾನೆಲ್‍ಡಿಸ್ಕಶನ್‍ನ್ನು ನಿರ್ವಹಿಸಿದರು.

ಚರ್ಚೆಯಲ್ಲಿ ಭಾಗವಹಿಸಿದ ಅರವಿಂದ್ ವಾರಿಯರ್, ಇಂದು ಕಾರ್ಪೋರೇಟ್ ಜಗತ್ತಿನಲ್ಲಿ ಕೃತಕ ಬುದ್ಧಿ ಮತ್ತೆಯ ಪ್ರಭಾವ ಹೆಚ್ಚುತ್ತಿದೆ. ಹೀಗಾಗಿ ಇಂದಿನ ವಿದ್ಯಾರ್ಥಿಗಳು ತಮ್ಮ ಸ್ವಂತಿಕೆ, ಸೃಜನಶೀಲತೆ ಹಾಗೂ ಕೌಶಲ್ಯಗಳ ಕಡೆಗೆ ಹೆಚ್ಚಿನ ಗಮನ ಕೊಡಬೇಕು. ಚ್ಯಾಟ್‍ಜಿಪಿಟಿಯಂತಹಕೃತಕ ಬುದ್ಧಿಮತ್ತೆ ಸಂಪನ್ಮೂಲಗಳ ಮೇಲೆ ಹೆಚ್ಚು ಅವಲಂಬಿತವಾಗದೇ ಮಾನವ ಸಹಜಯುಕ್ತಿಯನ್ನು ಬಳಸಬೇಕು ಎಂದರು.
ಕಾರ್ಯಕ್ರಮದಲ್ಲಿದ್ದ ಮತ್ತೋರ್ವ ಸಂಪನ್ಮೂಲ ವ್ಯಕ್ತಿಡಾ. ಶ್ಯಾಮ್ ಮಾತನಾಡಿ, ಇಂದಿನ ವಿದ್ಯಾರ್ಥಿಗಳಿಗೆ ವೃತ್ತಿರಂಗದಲ್ಲಿಅವರಅಭಿರುಚಿಗೆಅನುಗುಣವಾಗಿ ಸಾಕಷ್ಟು ಆಯ್ಕೆಗಳಿವೆ. ಅವರು ಸಾಕಷ್ಟು ಕಾರ್ಯಾಗಾರಗಳು, ಪೆÇ್ರಜೆಕ್ಟ್‍ಗಳು ಹಾಗೂ ಇಂಟರ್ನ್‍ಶಿಪ್‍ಗಳಲ್ಲಿ ಕೆಲಸ ಮಾಡುವ ಮೂಲಕ ತಮಗೆಸೂಕ್ತವಾದುದನ್ನು ಆಯ್ದುಕೊಳ್ಳಬೇಕಿದೆ ಎಂದರು. ಹಾಗೆಯೇಅಭಿರುಚಿಗೆತಕ್ಕಂತಹ ಕೆಲಸ ಸಿಗುವದು ಇಂದಿನ ದಿನಗಳಲ್ಲಿ ಒಂದು ಸವಾಲಾಗಿ ಬದಲಾಗಿದೆಎಂದುಅಭಿಪ್ರಾಯಪಟ್ಟರು.
ಜೋಶುವಾಡೇವಿಡ್, ಸೈದ್ಧಾಂತಿಕಜ್ಞಾನ, ಗುರಿಯಲ್ಲಿನ ಸ್ಪಷ್ಟತೆ ಹಾಗೂ ವೈಯಕ್ತಿಕ ಬ್ರ್ಯಾಂಡಿಂಗ್ ಮೇಲೆ ಹೆಚ್ಚಿನ ಗಮನ ಹರಿಸಬೇಕುಎಂದು ತಿಳಿಸಿದರು.
ಡಾ.ಬಾಲಚಂದರ್‍ಎಸ್. ಔದ್ಯೋಗಿಕಕ್ಷೇತ್ರದಲ್ಲಿನ ಬೆಳವಣಿಗೆಗಾಗಿ ಕೃತಕ ಬುದ್ಧಿಮತ್ತೆಯನ್ನು ಬಳಸಲು ಸಲಹೆ ನೀಡಿದರು. ಹಾಗೆಯೇ ವಿಆರ್‍ಐಓ ಪರಿಕಲ್ಪನೆ ಹಾಗೂ ಸ್ಮಾರ್ಟ್ ಗೋಲ್‍ಗಳನ್ನು ವಿವರಿಸಿದರು.
ನಂತರ ಮಾತನಾಡಿದ ಪ್ರಥಮ್‍ಐಯ್ಯರ್, ಅತಿವೇಗದಲ್ಲಿ ಪ್ರಗತಿ ಹೊಂದುತ್ತಿರುವಡಿಜಿಟಲ್ ಮಾಧ್ಯಮಕ್ಕೆತಕ್ಕಂತೆ ಸಂವಹನ ಕೌಶಲ್ಯ, ವಿಶ್ಲೇಷಣಾ ಸಾಮಥ್ರ್ಯ ಹಾಗೂ ತಂತ್ರಜ್ಞಾನ ಕೌಶಲ್ಯಗಳನ್ನು ಹೊಂದಬೇಕಾದ ಅಗತ್ಯತೆಗಳ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿಅಮೃತ ವಿಶ್ವವಿದ್ಯಾಪೀಠಂ ಮೈಸೂರುಕ್ಯಾಂಪಸ್‍ನ ಅಸೋಸಿಯೇಠ್ ಡೀನ್ ಪೆÇ್ರ.ಶೇಖರ್ ಬಾಬು, ಪ್ರಾಂಶುಪಾಲ ಪೆÇ್ರ.ಜಿ.ರವೀಂದ್ರನಾಥ್, ಅಕ್ಯಾಡೆಮಿಕ್‍ಕೋ-ಆರ್ಡಿನೇಟರ್‍ಡಾ.ರೇಖಾ ಭಟ್, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.