ಚಾಮರಾಜನಗರ: ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದಲ್ಲಿ ಬರುವ ಎಲ್ಲಾ ತುಂಡು ಗುತ್ತಿಗೆ ಕಾಮಗಾರಿಗಳನ್ನು ಸಮಾನವಾಗಿ, ಜೇಷ್ಠತಾ ಆಧಾರದ ಮೇಲೆ ಎಲ್ಲಾ ಗುತ್ತಿಗೆದಾರರಿಗೂ ನೀಡಬೇಕು ಎಂದು ಆಗ್ರಹಿಸಿ ಚಾಮರಾಜನಗರ ಪರಿಶಿಷ್ಠ ಜಾತಿ ಮತ್ತು ಪಂಗಡ ಗುತ್ತಿದಾರರ ಕ್ಷೇಮಾಭಿವೃದ್ದಿ ಸಂಘ ಹಾಗೂ ಚಾಮರಾಜನಗರ ಸಿವಿಲ್ ಗುತ್ತಿಗೆದಾರರ ಹಿತರಕ್ಷಣಾ ಸಮಿತಿ ವತಿಯಿಂದ ನಗರದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಜಿ.ಪಂ. ಉಪ ಕಾರ್ಯದರ್ಶಿ ಸರಸ್ವತಿ ಅವರ ಮೂಲಕ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪ್ರತಿಭಟನೆ ನೇತೃತ್ವ ವಹಿಸಿದ ಸಂಘದ ಅಧ್ಯಕ್ಷ ಸಿ.ಕೆ.ಮಂಜುನಾಥ್ ಮಾತನಾಡಿ, ಇಲ್ಲಿನ ಜಿಲ್ಲಾ ಪಂಚಾಯತ್ ಇಂಜಿನಿಯರಿAಗ್ ವಿಭಾಗದಲ್ಲಿ ಬರುವ ೫ ಲಕ್ಷ ಮಿತಿಗೊಳಪಡಿಸಿ ಬರುವ ಎಲ್ಲಾ ಗುತ್ತಿಗೆ ಕಾಮಗಾರಿಗಳನ್ನು ಸಮಾನವಾಗಿ ಎಲ್ಲಾ ಗುತ್ತಿಗೆದಾರರುಗಳಿಗೆ ಜೇಷ್ಠತಾ ಆಧಾರದ ಮೇಲೆ ಹಂಚಿಕೆ ಮಾಡಬೇಕು. ಇದರಲ್ಲಿ ೩ನೇ, ೪ನೇ ದರ್ಜೆ ಗುತ್ತಿಗೆದಾರರುಗಳಿಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ಅಧಿಕಾರಿಗಳು ಕೆಲವೇ ಕೆಲವು ಗುತ್ತಿಗೆದಾರರುಗಳಿಗೆ ಮಾತ್ರ ತುಂಡು ಗುತ್ತಿಗೆಯನ್ನು ನೀಡುತ್ತಿದ್ದಾರೆ. ಇದರಿಂದ ಗುತ್ತಿಗೆ ಪರವಾನಗಿ ಮಾಡಿಕೊಂಡು ಬರುವ ಹೊಸ ಗುತ್ತಿಗೆದಾರರು ವರ್ಷಕ್ಕೆ ಒಂದು ಕಾಮಗಾರಿಯನ್ನು ಮಾಡದಿರುವಂತಹ ಪರಿಸ್ಥಿತಿ ಉಂಟಾಗಿದೆ. ಅಲ್ಲದೆ ಕಮಿಷನ್‌ಗೋಸ್ಕರ ಕೊಟ್ಟಿರುವ ಗುತ್ತಿಗೆದಾರರಿಗೆ ಮತ್ತೆ ಕಾಮಗಾರಿಗಳನ್ನು ನೀಡುತ್ತಿದ್ದಾರೆ. ಇದರಿಂದ ಸಣ್ಣ ಗುತ್ತಿಗೆದಾರರರಿಗೆ ಅನ್ಯಾಯವಾಗುತ್ತದೆ. ಆದರಿಂದ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ನಿಂದ ಬರುವ ಅನುದಾನಗಳು ಹಾಗೂ ಶಾಸಕರು, ಸಂಸದರ ನಿಧಿಗಳಿಂದ ಬರುವ ಅನುದಾನ ಹಾಗೂ ಸರ್ಕಾರದ ವಿವಿಧ ಲೆಕ್ಕಶೀರ್ಷಿಕೆಯಿಂದ ಬರುವ ಅನುದಾನಗಳ ಕಾಮಗಾರಿಗಳನ್ನು ಸಮಾನವಾಗಿ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ಎಲ್ಲಾ ತುಂಡು ಗುತ್ತಿಗೆಗಳನ್ನು ಸಮಾನವಾಗಿ ಎಲ್ಲಾ ಗುತ್ತಿಗೆದಾರರಗಳಿಗೆ ಜೇಷ್ಠತಾ ಆಧಾರದ ಮೇಲೆ ನೀಡಬೇಕು. ಕಮಿಷನ್ ದಂಧೆಯನ್ನು ನಿಲ್ಲಿಸಬೇಕು. ಕಾಮಗಾರಿ ಗುಣಮಟ್ಟ ಕಾಪಾಡಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು. ಕಾಮಕಾರಿಗಳನ್ನು ನೀಡಿರುವ ಗುತ್ತಿಗೆದಾರರ ಕಾಮಗಾರಿಯ ವಿವರ ಮಾಹಿತಿಯನ್ನು ನಾಮಫಲಕದಲ್ಲಿ ಪ್ರಕಟಣೆಗೊಳಿಸಬೇಕು. ಪಂಚಾಯತ್ ರಾಜ್ ಇಂಜಿನಿಯರ್ ವಿಭಾಗದಲ್ಲಿ ಕೆಲವು ಹೊರಗುತ್ತಿಗೆ ನೌಕರರು, ಇಂಜಿನಿಯರ್ ಸಹಾಯಕರೇ ಹೆಚ್ಚು ಗುತ್ತಿಗೆ ಕೆಲಸಗಳನ್ನು ನೀಡುತ್ತಿದ್ದಾರೆ. ಅಂತಹ ನೌಕರರನ್ನು ತೆಗೆದು ಹಾಕಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಗುತ್ತಿಗೆದಾರರಾದ ರಂಗನಾಯಕ ಕಣ್ಣೇಗಾಲ, ಬಿಸಲವಾಡಿ ಉಮೇಶ್, ಕಾವುದವಾಡಿ ಗುರು, ಕೃಷ್ಣಮೂರ್ತಿ, ಶ್ರೀನಿವಾಸೌಡ. ಚಾ.ಗು.ನಾಗರಾಜು, ಪರ್ವತ್‌ರಾಜ್, ಬಿ.ಎಲ್.ಮಹದೇವಸ್ವಾಮಿ, ಬಸವಣ್ಣ, ಶಿವಬಸಪ್ಪ, ನಾಗೇಶ್, ಬಸವರಾಜು, ಸೋಮಸುಂದರ್, ಶಿವನಾಗಣ್ಣ, ಕಾರ್‌ನಾಗೇಶ್, ಶಿವಕುಮಾರ್, ವೈ.ಪಿ.ರಾಜೇಂದ್ರ, ಎಸ್. ರವಿ ಇತರರು ಭಾಗವಹಿಸಿದ್ದರು.