ಚಾಮರಾಜನಗರ: ಚಾಮರಾಜನಗರ ದಸರಾ ಮಹೋತ್ಸವದ ಅಂಗವಾಗಿ ಚಾಮರಾಜೇಶ್ವರ ದೇವಸ್ಥಾನದ ಆವರಣದ ಪ್ರಧಾನ ವೇದಿಕೆ, ನಗರದ ಜಿಲ್ಲಾಡಳಿತ ಭವನದಲ್ಲಿರುವ ಜೆ.ಹೆಚ್. ಪಟೇಲ್ ಸಭಾಂಗಣ ಹಾಗೂ ವರನಟ ಡಾ. ರಾಜ್‍ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಅಕ್ಟೋಬರ್ 18ರಂದು ನಡೆಯಲಿರುವ ಸಾಂಸ್ಕøತಿಕ ಕಾರ್ಯಕ್ರಮಗಳ ವಿವರ ಇಂತಿದೆ.
ಶ್ರೀ ಚಾಮರಾಜೇಶ್ವರ ದೇವಸ್ಥಾನ ಆವರಣದ ಪ್ರಧಾನ ವೇದಿಕೆಯಲ್ಲಿ ಮಹಿಳಾ ದಸರಾ ಅಂಗವಾಗಿ ಬೆಳಿಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಸಾಂಸ್ಕøತಿಕ ಕಾರ್ಯಕ್ರಮ, ಮಧ್ಯಾಹ್ನ 2 ರಿಂದ 3 ರವರೆಗೆ ಉಡಿಗಾಲದ ಶ್ರೀ ಶರಣೆ ನೀಲಾಂಬಿಕೆ ಮಹಿಳಾ ಮತ್ತು ತಂಡ ಹಾಗೂ ಗುರುವಿನಪುರದ ಶ್ರೀ ಶರಣೆ ನಾಗಲಾಂಬಿಕೆ ಮಹಿಳಾ ಭಜನೆ ಸಂಘದವರಿಂದ ವಚನಗಾಯನ, ಮಧ್ಯಾಹ್ನ 3ರಿಂದ 4ರವರೆಗೆ ಜ. ಸುರೇಶ್‍ನಾಗ್, ಮಹದೇವಪ್ರಭು.ಎಂ, ಬಿ.ಕೃಷ್ಣಮೂರ್ತಿ, ನಂಜುಂಡಸ್ವಾಮಿ.ಎನ್, ಆದರ್ಶಕುಮಾರ್.ಎಸ್ ಸಮನ್ವಯ ತಂಡದಿಂದ ಜನಪದಗೀತೆ ಗಾಯನ, ಸಂಜೆ 4 ರಿಂದ 5ರವರೆಗೆ ಎಸ್.ಜಿ ಮಹಾಲಿಂಗಸ್ವಾಮಿ, ಜೆ.ಬಿ.ಮಹೇಶ್, ಲೋಕೇಶ್.ಎಂ ಅಣಗಳ್ಳಿ ಸಮನ್ವಯ ತಂಡದಿಂದ ಸುಗಮ ಸಂಗೀತ, ಸಂಜೆ 5 ರಿಂದ 5.30ರವರೆಗೆ ಚಾಮರಾಜನಗರದ ಗೌತಮ್ ಇಂಗ್ಲಿಷ್ ಪಬ್ಲಿಕ್ ಸ್ಕೂಲ್ ವತಿಯಿಂದ ಭಾರತ ಭಾಗ್ಯ ವಿಧಾತ ಕಾರ್ಯಕ್ರಮ, ಸಂಜೆ 5.30 ರಿಂದ 6.30ರವರೆಗೆ ಜಿ. ರಾಜಪ್ಪ, ಎಂ.ಮಂಜುನಾಥ, ಬಿ.ಎಸ್.ಲತಾ, ಸಂತೋಷ್, ಪುಟ್ಟಸ್ವಾಮಿ ಮತ್ತು ಸಮನ್ವಯ ತಂಡದಿಂದ ಕನ್ನಡ ವೈಭವಗೀತ ಗಾಯನ, 6.30 ರಿಂದ 7.30ರವರೆಗೆ ಕೆಂಪರಾಜು, ನವೀನ್ ಕುಮಾರ್, ರಘುವೀರ್, ಅಶ್ವಿನಿ ಮತ್ತು ಸಮನ್ವಯ ತಂಡದಿಂದ ಜನಪದ ಗೀತೆ ಗಾಯನ, ರಾತ್ರಿ 7.30 ರಿಂದ 8ರವರೆಗೆ ಮುಡಿಗುಂಡ ಜೆ. ಮೂರ್ತಿ ಮತ್ತು ತಂಡದಿಂದ ಕಾವ್ಯ ಕುಂಚ ಗಾಯನ, 8 ರಿಂದ 8.30ರವರೆಗೆ ಯಳಂದೂರಿನ ರವಿ ಕುಮಾರ್ ಮತ್ತು ತಂಡದಿಂದ ಕನ್ನಡ ಗೀತೆ ಗಾಯನ, ರಾತ್ರಿ 9 ರಿಂದ 9.50ರವರೆಗೆ ಕಬ್ಬಹಳ್ಳಿಯ ಶ್ರೀ ಮದ್ದಾನೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗುಂಡ್ಲುಪೇಟೆಯ ಗೌತಮ್ ಪ್ರಥಮ ದರ್ಜೆ ಕಾಲೇಜು, ಯರಕನಗದ್ದೆಯ ಸೋಲಿಗ ಪುಷ್ಪಮಾಲೆ ಕಲಾ ಸಂಘ, ಚೇತನ ಡ್ಯಾನ್ಸ್ ಕಂಪನಿ ಯಿಂದ ನೃತ್ಯ ವೈಭವ ನಡೆಯಲಿದೆ.
ನಗರದ ಜೆ.ಹೆಚ್. ಪಟೇಲ್ ಸಭಾಂಗಣದ ವೇದಿಕೆಯಲ್ಲಿ ಬೆಳಿಗ್ಗೆ 9 ರಿಂದ 10.30 ಗಂಟೆಯವರೆಗೆ ಕೊಮರನಪುರ ಕೆ.ಎಸ್. ಮಹದೇವಸ್ವಾಮಿ ಮತ್ತು ತಂಡದಿಂದ ಭಕ್ತಿಗೀತೆ, 10.30 ರಿಂದ 11.30ರವರೆಗೆ ಸಿದ್ದಯ್ಯ ಅಂಕಹಳ್ಳಿ ಮತ್ತು ತಂಡ, ರಾಮಸಮುದ್ರದ ಕಾಳಪ್ಪ ಮತ್ತು ತಂಡದವರಿಂದ ತಂಬೂರಿ ಪದ, 11 ರಿಂದ 11.30ರವರೆಗೆ ಶ್ರೀನಿವಾಸ ಹೊನ್ನೂರು ಮತ್ತು ತಂಡ, ಗೌರಿ ಶಂಕರ್ ಮತ್ತು ತಂಡದವರಿಂದ ನೀಲಗಾರರ ಪದ, 11.30 ರಿಂದ 12ರವರೆಗೆ ಯರಿಯೂರು ಬಸವರಾಜು ಮತ್ತು ತಂಡ, ಬ್ಯಾಡಮೂಡ್ಲು ಮಾದಶೆಟ್ಟಿ ಮತ್ತು ತಂಡದವರಿಂದ ತಂಬೂರಿ ಪದ, ಮಧ್ಯಾಹ್ನ 12 ರಿಂದ 12.30ರವರೆಗೆ ದೊಡ್ಡಮೋಳೆ, ಪಿ. ಸಿದ್ದಶೆಟ್ಟಿ ಮತ್ತು ತಂಡ, ಗುಂಡ್ಲುಪೇಟೆಯ ಸಿದ್ದಯನ್ಯಪುರದ ಕೆ. ಎಸ್. ಲಕ್ಷ್ಮಣ ಮತ್ತು ತಂಡದವರಿಂದ ತಂಬೂರಿ ಪದ, 12.30 ರಿಂದ 1ರವರೆಗೆ ಮದ್ದೂರು ಮಲ್ಲಿಕಾರ್ಜುನ ಮತ್ತು ತಂಡದವರಿಂದ ಶಿವಭಜನೆ, 1 ರಿಂದ 2ರವರೆಗೆ ಶಿವಯೋಗಿ ಭಜನಾತಂಡ, ಉಮೇಶ್, ರಾಜೇಶ್ ಬಿ, ಜ್ಯೋತಿಗೌಡನಪುರ, ಆರ್ ಶಿವಮೂರ್ತಿ ಅವರಿಂದ ಭಜನೆ, 2 ರಿಂದ 3 ರವರೆಗೆ ಚಾಮರಾಜನಗರ, ನಾರಾಯಣಸ್ವಾಮಿ, ಮದ್ದಯ್ಯನಹುಂಡಿ ಸೋಮಶೇಖರ್ ಗುಂಡ್ಲುಪೇಟೆ ಅವರಿಂದ ಸುಗಮ ಸಂಗೀತ, 3 ರಿಂದ ಸಂಜೆ 5 ರವರೆಗೆ ಯಳಂದೂರು ಸ್ಥಳೀಯ ಕಲಾವಿದರಿಂದ ಸೋಬಾನೆ ಸಂಭ್ರಮ, ಸಂಜೆ 5 ರಿಂದ 6ರವರೆಗೆ ರಾಜಶೇಖರ್ ಕೆಂಪನಪುರ, ಕೆ.ಎಂ.ಮಹೇಶ್ ಕೆರೆಹಳ್ಳಿ, ಮಹದೇವಸ್ವಾಮಿ, ಬಂಡಿಗೆರೆ, ಸಿದ್ದಪ್ಪ, ವಡಯೆರ್ ಪಾಳ್ಯ ಮಹೇಂದ್ರ ವರ್ಮ, ಬೆಂಡರವಾಡಿ ಅವರಿಂದ ಜನಪದ ಸಂಗೀತ, ಸಂಜೆ 6 ರಿಂದ ರಾತ್ರಿ 8 ರವರೆಗೆ ಮಹೇಶ್ ಹೆಚ್. ಎನ್, ಹಂಗಳ, ನವೀನ್ ಗುಂಡ್ಲುಪೇಟೆ, ದರ್ಶನ್ ಗುಂಡ್ಲುಪೇಟೆ, ಮಹೇಂದ್ರ ಸಿ, ಚಾ.ನಗರ, ವಿಜಯ ಚಾ.ನಗರ ಅವರಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ.
ಅಕ್ಟೋಬರ್ 18ರಂದು ವರನಟ ಡಾ. ರಾಜ್ ಕುಮಾರ್ ರಂಗಮಂದಿರದಲ್ಲಿ ಸಾಮಾಜಿಕ ಹಾಗೂ ಪೌರಾಣಿಕ ನಾಟಕಗಳ ಪ್ರದರ್ಶನ ಹಾಗೂ ಸೋಬಾನೆ ಸಂಭ್ರಮ ಕಾರ್ಯಕ್ರಮವಿದೆ. ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಜಿಲ್ಲೆಯ ಮಹಿಳಾ ಕಲಾವಿದರಿಂದ ಸೋಬಾನೆ ಸಂಭ್ರಮ ನಡೆಯಲಿದೆ. ಮಧ್ಯಾಹ್ನ 2 ರಿಂದ 3 ಗಂಟೆಯವರೆಗೆ ಹನೂರಿನ ಸತೀಶ್ ಪೊನ್ನಾಚಿ ಮತ್ತು ತಂಡದವರಿಂದ ಚಂದುರಂಗರ ಇಲಿ ಬೋನು, ಮಧ್ಯಾಹ್ನ 3 ರಿಂದ 4 ಗಂಟೆಯವರೆಗೆ ಚಾಮರಾಜನಗರದ ಶಿವಶಂಕರ್À ಮತ್ತು ತಂಡದವರಿಂದ ಹೆಣ್ಣು ನೋಡಕ ಬಂದಾರ, ಸಂಜೆ 4 ರಿಂದ 6 ಗಂಟೆಯವರೆಗೆ ಚಾಮರಾಜನಗರದ ರಂಗವಾಹಿನಿ ಅವರಿಂದ ಮಧ್ಯಮ ವ್ಯಾಯೋಗ, ಸಂಜೆ 6 ರಿಂದ 7ಗಂಟೆಯವರೆಗೆ ಚಾಮರಾಜನಗರದ ಅಭ್ಯಾಸಿ ಟ್ರಸ್ಟ್ ಅವರಿಂದ ಕಂಡಾಯದ ಕೋಳಿ ನಾಟಕ ಪ್ರದರ್ಶನ ನಡೆಯಲಿದೆ.