ದಸರಾ ಮಹೋತ್ಸವ : ಅ. 19ರಂದು ನಡೆಯಲಿರುವ ವಿವಿಧ ಕಾರ್ಯಕ್ರಮಗಳ ವಿವರ

ಚಾಮರಾಜನಗರ: ಚಾಮರಾಜನಗರ ದಸರಾ ಮಹೋತ್ಸವದ ಅಂಗವಾಗಿ ಚಾಮರಾಜೇಶ್ವರ ದೇವಸ್ಥಾನದ ಆವರಣದ ಪ್ರಧಾನ ವೇದಿಕೆ, ನಗರದ ಜಿಲ್ಲಾಡಳಿತ ಭವನದಲ್ಲಿರುವ ಜೆ.ಹೆಚ್. ಪಟೇಲ್ ಸಭಾಂಗಣ ಹಾಗೂ ವರನಟ ಡಾ. ರಾಜ್‍ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಅಕ್ಟೋಬರ್ 19ರಂದು ನಡೆಯಲಿರುವ ಕಾರ್ಯಕ್ರಮಗಳ ವಿವರ ಇಂತಿದೆ.

ಶ್ರೀ ಚಾಮರಾಜೇಶ್ವರ ದೇವಸ್ಥಾನ ಆವರಣದ ಪ್ರಧಾನ ವೇದಿಕೆಯಲ್ಲಿ ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ ದೊಡ್ಡಗವಿ ಬಸಪ್ಪ ಮತ್ತು ತಂಡ, ಚಾ.ನಗರ ನಿಂಗಶೆಟ್ಟಿ ಮತ್ತು ತಂಡದವರಿಂದ ತಂಬೂರಿ ಪದ, ಬೆಳಿಗ್ಗೆ 11 ರಿಂದ 12 ರವರೆಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಕದಳಿ ಮಹಿಳಾ ವೇದಿಕೆ, ಕಟ್ನವಾಡಿಯ ಬಿ ಮಹದೇವಸ್ವಾಮಿ ಮತ್ತು ತಂಡದವರಿಂದÀ ವಚನ ಗಾಯನ ಮತ್ತು ಭಜನೆ, ಮಧ್ಯಾಹ್ನ 12 ರಿಂದ 1ರವರೆಗೆ ಎಂ. ಶಿವಕುಮಾರ್ ಆಲ್ಕರೆ ಮತ್ತು ತಂಡ, ಬಾಚಹಳ್ಳಿಯ ಮಾದೇಶ್ ಮತ್ತು ತಂಡದವರಿಂದ ತಂಬೂರಿ ಪದ, ಮಧ್ಯಾಹ್ನ 1 ರಿಂದ 2ರವರೆಗೆ ಚಾ.ನಗರ ಶಂಕರಪುರದ ಚಂದನ್ ಎನ್ ಮತ್ತು ತಂಡದವರಿಂದ ವಾದ್ಯ ಸಂಗೀತ, ಮಧ್ಯಾಹ್ನ 2 ರಿಂದ 3ರವರೆಗೆ ಕೊಳ್ಳೇಗಾಲ ತಾಲ್ಲೂಕು ಸಿದ್ದಯ್ಯನಪುರದ ಕೈಲಾಸಮೂರ್ತಿ ಮತ್ತು ತಂಡ, ಗುಂಡ್ಲುಪೇಟೆಯ ರಂಗನಾಥಪುರದ ಪುಟ್ಟರಾಜು ಮತ್ತು ತಂಡದವರಿಂದ ತಂಬೂರಿ ಪದ ಮತ್ತು ನೀಲಗಾರರ ಪದ, 3 ರಿಂದ 4ರವರೆಗೆ ಹೆಚ್.ಎಂ. ಶಿವಣ್ಣ, ಎಸ್ ಸುರೇಶ್, ಮಂಗಳಮ್ಮ, ಮುತ್ತುರಾಜ್, ಸಮನ್ವಯ ತಂಡದಿಂದ ಮಧುರ ಅತಿ ಮಧುರ ಗೀತ ಗಾಯನ, ಸಂಜೆ 4 ರಿಂದ 5 ಎನ್. ದೊರೆಸ್ವಾಮಿ, ನಾಗಮಹದೇವ್, ನಾಗೇಂದ್ರ, ರೋಹಿತ್, ಮಹದೇವಸ್ವಾಮಿ ಸಮನ್ವಯತಂಡದಿಂದ ಜನಪದ ಗೀತ ಗಾಯನ, ಸಂಜೆ 5 ರಿಂದ 5.30ರವರೆಗೆ ಚಾಮರಾಜನಗರದ ಪಂಕಜ ರವಿಶಂಕರ್ ಅವರಿಂದ ಏಕಪಾತ್ರ ಅಭಿನಯ ದುರ್ಯೋಧನ ಪಾತ್ರ, ಸಂಜೆ 5.30 ರಿಂದ 6ರವರೆಗೆ ಮಾಂಬಳ್ಳಿಯ ಅರುಣ್ ಕುಮಾರ್ ಮತ್ತು ತಂಡದವರಿಂದ ಸುಗಮ ಸಂಗೀತ, ಸಂಜೆ 6 ರಿಂದ 7 ರವರೆಗೆ ಚಾಮರಾಜನಗರದ ಸಿ.ಎಂ. ನರಸಿಂಹಮೂರ್ತಿ ಮತ್ತು ತಂಡದವರಿಂದ ಜನಪದ ಜೇಕಾಂರ, ರಾತ್ರಿ 7.30 ರಿಂದ 8ರವರೆಗೆ ಕೊಮರನಪುರ ಆರ್. ಮಹೇಂದ್ರ ಮತ್ತು ತಂಡದವರಿಂದ ಸರಿಗಮಪ ಸಂಜೆ, ರಾತ್ರಿ 8 ರಿಂದ 8.30ರವರೆಗೆ ಮಿಮಿಕ್ರಿ ಗೋಪಿ ಮತು ಉಮ್ಮತ್ತೂರು ಬಸವರಾಜು ತಂಡದವರಿಂದ ಹಾಸ್ಯ ಸಂಜೆ, ರಾತ್ರಿ 8.30 ರಿಂದ 9.50ರವರೆಗೆ ಚಾಮರಾಜನಗರದ ಅವತಾರ್ ಡ್ಯಾನ್ಸ್ ಇನ್ಸಿಟ್ಯೂಟ್, ಗುಂಡ್ಲುಪೇಟೆಯ ಗೌತಮ್ ಕಾಲೇಜು, ದುಂದಾಸನಪುರ ಸರ್ಕಾರಿ ಐಟಿಐ ಕಾಲೇಜು, ಕಬ್ಬಹಳ್ಳಿಯ ರಂಜಿತಾ ಸೋಮಶೇಖರ್ ಮತ್ತು ತಂಡ, ಕೊಳ್ಳೇಗಾಲದ ಮೋನಿಷ್.ಎನ್ ಮತ್ತು ತಂಡ, ಶಿವತಾಂಡವ ಡ್ಯಾನ್ಸ್ ಇನ್ಸಿಟ್ಯೂಟ್ ಅವಿನಾಶ್. ಪಿ ಅವರಿಂದ ನೃತ್ಯ ಸಂಜೆ ನಡೆಯಲಿದೆ.

ನಗರದ ಜೆ.ಹೆಚ್. ಪಟೇಲ್ ಸಭಾಂಗಣದ ವೇದಿಕೆಯಲ್ಲಿ ಬೆಳಿಗ್ಗೆ 10 ರಿಂದ 10.30ರವರೆಗೆ ಚಾ.ನಗರದ ಸಿಂದೂರ ಭಜನೆ ಮಂಡಳಿಯಿಂದ ಭಜನೆ, 10.30 ರಿಂದ 11ರವರೆಗೆ ರಾಮಸಮುದ್ರ ನಾಗರಾಜು ಪಿ, ಕಂದೇಗಾಲದ ಪುಟ್ಟರಾಚಯ್ಯ ಅವರಿಂದ ತಂಬೂರಿ ಪದ, 11 ರಿಂದ 11.30ರವರೆಗೆ ಹೆಗ್ಗೋಠಾರದ ಮಂಟೇಸ್ವಾಮಿ ನೀಲಗಾರರ ಸಂಘದಿಂದ ನೀಲಗಾರರ ಪದ, 11.30 ರಿಂದ 12ರವರೆಗೆ ದೊಡ್ಡಮೋಳೆಯ ಸಣ್ಣಶೆಟ್ಟಿ ಮತ್ತು ತಂಡದಿಂದ ತಂಬೂರಿ ಪದ, ಮಧ್ಯಾಹ್ನ 12 ರಿಂದ 12.30ರವರೆಗೆ ಹರದನಹಳ್ಳಿ ಚೆನ್ನಿಗಶೆಟ್ಟಿ ಮತ್ತು ತಂಡ, ಚಿಲಕವಾಡಿ ಶಿವಮೂರ್ತಿ ಮತ್ತು ತಂಡದವರಿಂದ ತಂಬೂರಿ ಪದ, ಮಧ್ಯಾಹ್ನ 12.30 ರಿಂದ 1ರವರೆಗೆ ಬೆಂಡರವಾಡಿ ಆರ್ ಸಿದ್ದರಾಜು ಮತ್ತು ತಂಡ, ನಲ್ಲೂರು ಬಿ.ಶಂಕರ್ ಮತ್ತು ತಂಡದವರಿಂದ ಶಿವಭಜನೆ, 1 ರಿಂದ 1.30ರವರೆಗೆ ಚಾ.ನಗರದ ಮಹೇಶ್.ಆರ್, ಮಲೆಯೂರು ಮಹೇಶ್. ಎಸ್ ಅವರಿಂದ ಭಜನೆ, ಮಧ್ಯಾಹ್ನ 2 ರಿಂದ 3ರವರೆಗೆ ಯೋಗೇಶ್. ಎಂ.ಜಿ. ಮದ್ದೂರು, ಪ್ರಕಾಶ್ ಮದ್ದೂರು, ಬಸವರಾಜು ಮದ್ದೂರು, ಗಿರೀಶ್ ಎಸ್. ಗಾಳೀಪುರ ಅವರಿಂದ ಸುಗಮ ಸಂಗೀತ, ಮಧ್ಯಾಹ್ನ 3 ರಿಂದ ಸಂಜೆ 5ರವರೆಗೆ ಸ್ಥಳೀಯ ಕಲಾವಿದರಿಂದ ಸೋಬಾನೆ ಸಂಭ್ರಮ, 5ರಿಂದ 6ರವರೆಗೆ ಮಹದೇವಸ್ವಾಮಿ ಹೆಗ್ಗೋಠಾರ, ಕೆ.ನಂಜುಂಡಯ್ಯ ಕೋಡಿಉಗನೆ, ಬಂಗಾರನಾಯ್ಕ ಗುಂಡ್ಲುಪೇಟೆ ಅವರಿಂದ ಜನಪದ ಸಂಗೀತ, 6ರಿಂದ 8ರವರೆಗೆ ಅಕ್ಷತ ಬಿ.ಎಸ್ ಗುಂಡ್ಲುಪೇಟೆ, ಕೃಷ್ಣ ಬಿ.ಆರ್. ಗುಂಡ್ಲುಪೇಟೆ, ಸಂಪತ್‍ಕುಮಾರ್ ಇರಸವಾಡಿ ಅವರಿಂದ ನೃತ್ಯ ನಡೆಯಲಿದೆ.

ವರನಟ ಡಾ. ರಾಜ್‍ಕುಮಾರ್ ಜಿಲ್ಲಾ ರಂಗಮಂದಿರದ ವೇದಿಕೆಯಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ರಂಗಗೀತೆ ಗಾಯನ ರಂಗ ಸಂಭ್ರಮ, ಮಧ್ಯಾಹ್ನ 1 ರಿಂದ 8ರವರೆಗೆ ಚಾಮರಾಜನಗರದ ಶ್ರೀ ಮಲೆ ಮಹದೇಶ್ವರಸ್ವಾಮಿ ಕಲಾ ಸಂಘದಿಂದ ದಕ್ಷಯಜ್ಞ ನಾಟಕ ನಡೆಯಲಿದೆ.

Leave a Reply

Your email address will not be published. Required fields are marked *