ದ್ವಿತೀಯ ಪಿಯುಸಿ : ಜಿಲ್ಲೆಗೆ ಶೇ. 81.92ರಷ್ಟು ಫಲಿತಾಂಶ

ಚಾಮರಾಜನಗರ: 2022-23ನೇ ಸಾಲಿನ ಮಾರ್ಚ್ ತಿಂಗಳಲ್ಲಿ ನಡೆದ
ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು
ಚಾಮರಾಜನಗರ ಜಿಲ್ಲೆಗೆ ಶೇ. 81.92ರಷ್ಟು ಫಲಿತಾಂಶ ಬಂದಿದ್ದು
ರಾಜ್ಯದಲ್ಲಿ ಜಿಲ್ಲೆ 12ನೇ ಸ್ಥಾನ ಪಡೆದುಕೊಂಡಿದೆ.
ಪರೀಕ್ಷೆಗೆ 3626 ಬಾಲಕರು ಹಾಜರಾಗಿದ್ದು, ಈ ಪೈಕಿ 2588 ಬಾಲಕರು
ಉತ್ತೀರ್ಣಗೊಂಡಿದ್ದು ಶೇಕಡವಾರು ಫಲಿತಾಂಶ 71.37ರಷ್ಟಿದೆ.
ಪರೀಕ್ಷೆಗೆ 3758 ಬಾಲಕಿಯರು ಹಾಜರಾಗಿದ್ದು ಇವರಲ್ಲಿ 3084
ಬಾಲಕಿಯರು ಉತ್ತೀರ್ಣರಾಗಿದ್ದು ಶೇಕಡವಾರು ಫಲಿತಾಂಶ 82.06
ರಷ್ಟಿದೆ.
ಕಲಾ ವಿಭಾಗದಲ್ಲಿ 2328 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ
ಪೈಕಿ 1686 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇಕಡ
ಫಲಿತಾಂಶ 72.42ರಷ್ಟಿದೆ. ವಾಣಿಜ್ಯ ವಿಭಾಗದಲ್ಲಿ 2325 ವಿದ್ಯಾರ್ಥಿಗಳು
ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 2059 ವಿದ್ಯಾರ್ಥಿಗಳು
ತೇರ್ಗಡೆಯಾಗಿದ್ದು, ಶೇಕಡ ಫಲಿತಾಂಶ 88.56ರಷ್ಟಿದೆ. ವಿಜ್ಞಾನ
ವಿಭಾಗದಲ್ಲಿ 1676 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ
1440 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇಕಡ ಫಲಿತಾಂಶ
85.92 ರಷ್ಟಿದೆ.
ಪಟ್ಟಣ ಪ್ರದೇಶದ 4324 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು
ಇವರಲ್ಲಿ 3540 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇಕಡ ಫಲಿತಾಂಶ
81.87 ರಷ್ಟಿದೆ. ಗ್ರಾಮೀಣ ಪ್ರದೇಶದ 2005 ವಿದ್ಯಾರ್ಥಿಗಳು
ಪರೀಕ್ಷೆಗೆ ಹಾಜರಾಗಿದ್ದು ಇವರಲ್ಲಿ 1645 ವಿದ್ಯಾರ್ಥಿಗಳು
ಉತ್ತೀರ್ಣರಾಗಿದ್ದು ಶೇಕಡ ಫಲಿತಾಂಶ 82.04 ರಷ್ಟಿದೆ ಎಂದು ಪದವಿ
ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮಂಜುನಾಥ
ಪ್ರಸನ್ನ ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *