ಚಾ.ನಗರದಲ್ಲಿ ಸುತ್ತೂರು ಶ್ರೀರಾಜೇಂದ್ರಶ್ರೀಗಳ 108ನೇ ಜಯಂತೋತ್ಸವ
ಚಾಮರಾಜನಗರ: ಧರ್ಮದ ಆಧಾರದ ಮೇಲೆ ದೇಶ ಕಟ್ಟಬೇಕಾಗಿದೆ. ಧರ್ಮ ಉಳಿದರೆ ದೇಶವು ಉಳಿಯುತ್ತದೆ. ನಮ್ಮ ಭಾರತೀಯ ಸಂಸ್ಕøತಿ ಪರಂಪರೆ ಅಚಾರ ವಿಚಾರಗಳ ಮೇಲೆ ಭಾರತೀಯ ಸಂಸ್ಕøತಿ ನಿಂತಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ತಿಳಿಸಿದರು.

ನಗರದ ಜೆಎಸ್‍ಎಸ್ ಶಿಕ್ಷಣ ಸಂಸ್ಥೆಗಳ ಅವರಣದಲ್ಲಿ ವಿವಿಧ ಸಂಘ ಸಂಸ್ಥೆಗಳು, ಭಕ್ತವೃಂದ ಹಾಗೂ ಜೆಎಸ್‍ಎಸ್ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ನಡೆ ಪರಮಪೂಜ್ಯ ಡಾ. ಶ್ರೀ ಶಿವರಾತ್ರಿರಾಜೇಂದ್ರಸ್ವಾಮಿಗಳ 108ನೆಯ ಜಯಂತಿ ಮಹೋತ್ಸವನ್ನು ಉದ್ಗಾಟಿಸಿ ಅವರು ಮಾತನಾಡಿದರು. ಭಾರತ ಉಳಿದಿರುವುದು ನಮ್ಮ ಆಚಾರ ವಿಚಾರಗಳಿಂದ ಈ ದೇಶದ ಸಂಸ್ಕøತಿ ಪರಂಪರೆಯನ್ನುಉಳಿಸುವ ಗುರುತಾರ ಜವಾಬ್ದಾರಿ ನಮ್ಮದಾಗಿದೆ. ನಮ್ಮ ಸಂಸ್ಕತಿಗೆ ಗೌರವ ಕೊಡುವುದನ್ನು ನಾವೆಲ್ಲರು ಕಲಿತುಕೊಳ್ಳಬೇಕಾಗಿದೆ. ಧರ್ಮ ಉಳಿದರೆ ದೇಶ ಉಳಿಯುತ್ತದೆ ಎಂದರು.

ಮಠಮಾನ್ಯಗಳ ನೀಡುತ್ತಿರುವ ಕೊಡುಗೆ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಅವರ ಸಾಧನೆಯಿಂದ ನಮ್ಮ ದೇಶದ ಅಭಿವೃದ್ದಿಯತ್ತ ಸಾಗುತ್ತಿದೆ. ಈ ಸಾಲಿನಲ್ಲಿ ಸುತ್ತೂರು ಶ್ರೀಮಠವು ಮೊದಲನೇ ಸಾಲಿನಲ್ಲಿದೆ. ಶ್ರೀ ರಾಜೇಂದ್ರಸ್ವಾಮಿಗಳು ನಮ್ಮ ದೇಶ ಅಲ್ಲದೇ ವಿದೇಶಗಳಲ್ಲಿಯೂ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ, ಶಿಸ್ತಿನ ಜೊತೆಗೆ ಭಾರತೀಯ ಸಂಸ್ಕøತಿ ಮತ್ತು ಪರಂಪರೆಯನ್ನು ಉಳಿಸುವ ಕೆಲಸ ಮಾಡಿದ್ದಾರೆ. ಅವರ ಹಾದಿಯಲ್ಲಿಯೇ ಈಗಿನ ಶ್ರೀಗಳು ನಡೆದು ಮಹಾವಿದ್ಯಾಪೀಠವು ಇಂದು ಬೃಹತಾಕಾರವಾಗಿ ಬೆಳೆದು ನಿಂತಿದೆ. ದಕ್ಷಿಣದಲ್ಲಿ ಸುತ್ತೂರು ಮಠ, ಸಿದ್ದಗಂಗಾ ಮಠ, ಉತ್ತರದಲ್ಲಿ ತರಳುಬಾಳು ಮಠ, ಕವಿಸಿದ್ದೇಶ್ವರ ಮಠ ಸೇರಿದಂತೆ ನಾನಾ ಜಾತಿಯ ಮಠಗಳು ಶಿಕ್ಷಣ, ದಾಸೋಹ ಹಾಗೂ ನಮ್ಮ ದೇಶ ಸಂಸ್ಕಾರವನ್ನು ಕಲಿಸುವಲ್ಲಿ ಶ್ರಮಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜೇಂದ್ರಶ್ರೀಗಳು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚಿ ಅದ್ಯತೆ ನೀಡಿದರು. ಹೀಗಾಗಿ ಅವರು ಗ್ರಾಮೀಣ ಪ್ರದೇಶದ ಮೂಲ ಸೌಲಭ್ಯಗಳು ಇಲ್ಲದೇ ಕಡೆ ಶಾಲೆಗಳನ್ನು ತೆರೆದು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅನುಕೂಲ ಮಾಡಿಕೊಟ್ಟರು. ಅದರ ಫಲವಾಗಿ ಇಂದು ಲಕ್ಷಾಂತರ ಹೆಣ್ಣು ಮಕ್ಕಳು ಶಿಕ್ಷಣ ಪಡೆದು ಸಮಾಜದ ಮುಖ್ಯ ವಾಹಿನಿ ಬಂದಿದ್ದಾರೆ. ಇಲ್ಲಿ ಕುಳಿತಿರುವ ಬಹಳಷ್ಟು ಹೆಣ್ಣು ಮಕ್ಕಳು ಶಿಕ್ಷಕರಾಗಲು ವಿವಿಧ ಹುದ್ದೆಗಳನ್ನು ಅಲಂಕರಿಸಲು ರಾಜೇಂದ್ರಶ್ರಿಗಳು ಕೊಡುಗೆ ಇದೆ. ಹೀಗಾಗಿ ಅವರ ನಾವೆಲ್ಲರು ನೆನಪು ಮಾಡಿಕೊಳ್ಲಬೇಕು. ಚಿನ್ನದ ಕರಡಿಗೆಯನ್ನು ಮಾರಿ ಹಾಸ್ಟೆಲ್ ಕಟ್ಟಿದ ಶ್ರೀಗಳು, ಸಮಾಜದ ಅಭ್ಯುದಯಕ್ಕೆ ತಮ್ಮ ಜೀವನವನ್ನೇ ತ್ಯಾಗ ಮಾಡಿದ್ದಾರೆ ಎಂದು ಶೋಭಾ ಕರಂದ್ಲಾಜೆ ಬಣ್ಣಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಮಾತನಾಡಿ, ಪೂಜ್ಯ ರಾಜೇಂದ್ರಶ್ರೀಗಳು 108ನೇ ಜಯಂತಿ ಕಾರ್ಯಕ್ರಮವು ಬಹಳ ಅರ್ಥಪೂರ್ಣವಾಗಿ ಎರಡು ದಿನಗಳ ಕಾಲ ನಡೆದಿದೆ. ರಾಜೇಂದ್ರಶ್ರೀಗಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದರು. ಅವರ ಸೇವೆಯನ್ನು ಸ್ಮರಿಸುವ ಜೊತೆಗೆ ಅವರ ಅದರ್ಶವನ್ನು ನಾವೆಲ್ಲರು ಪಾಲಿಸೋಣ. ರೈತರು ಮಳೆಯ ಇಲ್ಲದೇ ಸಂಕಷ್ಟದಲ್ಲಿದ್ದಾರೆ. ಅವರ ನೆರವಿಗೆ ಕೇಂದ್ರ ಸರ್ಕಾರ ಧಾವಿಸಬೇಕು. ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಜಾರಿ ಮಾಡಿದ್ದು, ಯಡಿಯೂರಪ್ಪ ಅವರು ಆದರೆ, ಅದನ್ನು ಪೂರ್ಣಗೊಳಿಸಿ, 20 ಕೆರೆಗಳಿಗೆ ನೀರು ತುಂಬಿಸಿದ್ದು ನಮ್ಮ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರವಾಗಿದೆ ಎಂದರು.

ಸಂಸದ ವಿ. ಶ್ರೀನಿವಾಸಪ್ರಸಾದ್ ಮಾತನಾಡಿ, 12ನೆ ಶತಮಾನದಲ್ಲಿ ಬಸವಣ್ಣ ಮಾಡಿದ ಕ್ರಾಂತಿ ಪರಿಣಾಮ ಕರ್ನಾಟಕದಲ್ಲಿ ಶರಣ ಸಂಸ್ಕøತಿ ಬೆಳೆಯಿತು.ಅಂದು ಬಸವಣ್ಣ ಸನಾತನ ಧರ್ಮದಲ್ಲಿದ್ದ ನ್ಯೂನತೆಯ ವಿರುದ್ದ ಬಹಿರಂಗವಾಗಿ ಆಕ್ರೋಶ ಕೊಂಡು ವೀರಶೈವ ಲಿಂಗಾಯತ ಧರ್ಮವನ್ನು ಸ್ಥಾಪನೆ ಮಾಡಿದೆ. ಆದೇ ಬಸವ ಧರ್ಮ. ಎಲ್ಲಾ ಜಾತಿ, ಜನಾಂಗದವರಿಗೆ ಲಿಂಗ ಕಟ್ಟಿ ಲಿಂಗಾಯತ ಧರ್ಮವನ್ನು ಬೆಳೆಸಿದರು. ಅಂದು ಸ್ಥಾಪನೆಕೊಂಡು ಮಠಗಳು ಧರ್ಮ ಪ್ರಚಾರದ ಕೇಂದ್ರಗಳಾದವು. ದಕ್ಷಿಣದಲ್ಲಿಯು ವಿರಕ್ತ ಮಠಗಳು ಉದಯವಾದು. ಈ ಸಾಲಿನಲ್ಲಿ ಸುತ್ತೂರು ಮಠವು ಸಹ ಒಂದಾಗಿದೆ. ಶ್ರೀ ಮಠದ ಕೊಡುಗೆ ಅನನ್ಯವಾಗಿದೆ. ಯಾವುದೇ ಧರ್ಮವನ್ನು ನಾಶ ಮಾಡಿ ಎನ್ನುವುದು ಅವಿವೇಕತನವಾಗಿದೆ. ಆ ಧರ್ಮದಲ್ಲಿರುವ ನ್ಯೂನತೆಯನ್ನು ತಿದ್ದುಪಡಿ ಮಾಡಿಕೊಂಡು ಮುನ್ನಡೆಯುವುದೇ ಧರ್ಮ ಪಾಲನೆಯಾಗಿದೆ. ಶಿಕ್ಷಣ ಆರೋಗ್ಯ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ರಾಜೇಂದ್ರಶ್ರಿಗಳು ಮಾಡಿದ ಸಾಧನೆ ಹೆಚ್ಚಿನದ್ದಾಗಿದೆ. ಅವರ ಜಯಂತಿಯಲ್ಲಿ ಭಾಗವಹಿಸುವ ಅವಕಾಶ ದೊರೆತಿರುವುದು ನಮ್ಮೆಲ್ಲರ ಪುಣ್ಯ ಎಂದರು.
ಸುತ್ತೂರು ಶ್ರೀ ಕ್ಷೇತ್ರದ ಶ್ರೀ ಶಿವರಾತ್ರಿದೇಶಿಕೇಂದ್ರಸ್ವಾಮೀಜಿ ಸಾನ್ನಿಧ್ಯವ ವಹಿಸಿ ಮಾತನಾಡಿ, ಚಾಮರಾಜನಗರ ಜಿಲ್ಲೆಯ ಬಗ್ಗೆ ರಾಜೇಂದ್ರಶ್ರೀಗಳಿಗೆ ಅಪಾರವಾದ ಪ್ರೀತಿ ಇತ್ತು. ಅವರು ಈ ಭಾಗಕ್ಕೆ ಬಂದಾಗಲ್ಲೆಲ್ಲ ಈ ಭಾಗದಲ್ಲಿ ಶಾಲೆಗಳನ್ನು ದೊರೆದು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿದರು. ಕುಗ್ರಾಮಗಳಲ್ಲಿ ಶಾಲೆಗಳನ್ನು ಆರಂಬಿಸಿದರು. ಸಂತೇಮರಹಳ್ಳಿ, ಉಮ್ಮತ್ತುರು, ರಾಮಾಪುರ, ಮಾರ್ಟಹಳ್ಳಿ, ಅರಕವಾಡಿ ಸೇರಿ ಅನೇಕ ಕಡೆ ಪ್ರೌಢಶಾಲೆಗಳನ್ನು ಆರಂಭಿಸಿ, ಹೆಣ್ನು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿದ್ದರು. 108ನೇ ಜಯಂತಿಯನ್ನು ಚಾ.ನಗರದಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲಾಗಿದೆ. 108 ನಾಮ ಜಪ ಮಾಡುವಂತೆ ರಾಜೇಂದ್ರಶ್ರೀಗಳ 108ನೇ ಜಯಂತಿ ವೈಭವವಾಗಿ ನೆರವೇರಿತು ಎಂದರು.
ಕಾರ್ಯಕ್ರಮದಲ್ಲಿ ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ಸಿ. ಪುಟ್ಟರಂಗಶೆಟ್ಟಿ, ಎಚ್.ಎಂ. ಗಣೇಶ್ ಪ್ರಸಾದ್ ಮಾತನಾಡಿದರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಡಾ. ಸಿ. ಸೋಮಶೇಖರ್ ನುಡಿನಮನ ಸಲ್ಲಿಸಿದರು.
ವೇದಿಕೆಯಲ್ಲಿ ನಗರ ಮಠದ ಶ್ರೀ ಚನ್ನಬಸವಸ್ವಾಮೀಜಿ, ಮಾಜಿ ಶಾಸಕರಾದ ಎನ್. ಮಹೇಶ್, ಎಸ್. ಬಾಲರಾಜು, ಜಿ.ಪಂ.ಮಾಜಿ ಅಧ್ಯಕ್ಷ ಎಸ್. ಮಹದೇವಯ್ಯ, ನಗರಸಭಾ ಸದಸ್ಯೆ ಕುಮುದಾ ಕೇಶವಮೂರ್ತಿ, ಆರ್.ಎಂ.ಸ್ವಾಮಿ, ಬಿ.ಕೆ. ರವಿಕುಮಾರ್, ಪ್ರಾಂಶುಪಾಲ ಸಿದ್ದರಾಜು, ದೊಡ್ಡರಾಯಪೇಟೆ ಗಿರೀಶ್, ಸಿದ್ದಮಲ್ಲಪ್ಪ ಮೊದಲಾಧವರು ಇದ್ದರು.