ಚಾಮರಾಜನಗರ: ನಗರದ 19 ನೇ ವಾರ್ಡ್ ನ ನಾಯಕರ ಬೀದಿಯಲ್ಲಿ ಕಾರ್ಮಿಕ ಇಲಾಖೆ, ಎಜುಪಾರ್ಕ್ ಸಂಸ್ಥೆ ಸಹಯೋಗದಲ್ಲಿ ನಡೆಯುತ್ತಿರುವ ಶಿಶು ಪಾಲನಾ ಕೇಂದ್ರಕ್ಕೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಶಿಶುಪಾಲನಾ ಕೇಂದ್ರವನ್ನು ಮುಚ್ಚು ಬಿಡುತ್ತಾರೆ. ಇದನ್ನು ಮುಚ್ಚದಂತೆ ಕ್ರಮಕೈಗೊಳ್ಳಬೇಕು ಎಂದು ಮನವಿ ಮೇರೆಗೆ ಶಿಶುಪಾಲನಾ ಕೇಂದ್ರ ಭೇಟಿ ನೀಡಲಾಗಿದೆ. ಈ ಕೇಂದ್ರದಲ್ಲಿ ೩೫ ಮಕ್ಕಳು ಇರಬೇಕು. ಆದರೆ ಇಲ್ಲಿ ೩೫ ಮಕ್ಕಳು ಇಲ್ಲ. ಇಲ್ಲಿಗೆ ಬರುವ ಮಕ್ಕಳಿಗೆ ಪುಡ್ ಕೊಟ್ಟಿಲ್ಲ. ಮಕ್ಕಳು ಕೂರಲು ಜಾಗ ಕಡಿಮೆ ಇದೆ. ಕೆಲಸ ಮಾಡುವ ಶಿಕ್ಷಕಿಗೆ ಸಂಬಳ ಕೂಡ ಕಡಿಮೆ ಕೊಡುವುದು ತಿಳಿದು ಬಂದಿದೆ. ಕಾರ್ಮಿಕ ಇಲಾಖೆಯ ಸರಿಯಾಗಿ ವೇತನ ನೀಡದಿರುವುದು ಒಂದು ದುರಂತವಾಗಿದೆ ಸಂಬAಧಪಟ್ಟ ಮೇಲಾಧಿಕಾರಿಗಳ ಜೊತೆಯಲ್ಲಿ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದರು. ಹಿರಿಯ ಕಾರ್ಮಿಕಾಧಿಕಾರಿ ವೀಣಾ, ರಾಜೇಶ್ ಇತರರು ಹಾಜರಿದ್ದರು.