ಪರಿಸರ ಚೆನ್ನಾಗಿದ್ದರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು : ನಗರಸಭೆ ಆಯುಕ್ತ ರಾಮದಾಸ್

ಪಿಎಂಶ್ರೀ ಕೇಂದ್ರೀಯ ವಿದ್ಯಾಲಯ ವಿದ್ಯಾರ್ಥಿಗಳಿಂದ ಶ್ರಮದಾನ

ಚಾಮರಾಜನಗರ: ನಮ್ಮ ಸುತ್ತಮುತ್ತ ಪರಿಸರ ಚೆನ್ನಾಗಿದ್ದರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದೆಂದು ನಗರಸಭೆ ಆಯುಕ್ತ ರಾಮದಾಸ್ ತಿಳಿಸಿದರು.

ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನ ಮುಂಭಾಗದಲ್ಲಿರುವ ಉದ್ಯಾನವನದಲ್ಲಿ ತಾಲೂಕಿನ ಮಾದಪುರ ಗ್ರಾಮದ ಪಿಎಂ ಶ್ರೀ ಕೇಂದ್ರೀಯ ವಿದ್ಯಾಲಯ ವಿದ್ಯಾರ್ಥಿಗಳಾಗುವ ಶಿಕ್ಷಕರಿಂದ ಹಬ್ಬಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮವನ್ನು ಚಾಲನೆ ನೀಡಿ ಮಾತನಾಡಿದರು.

ವಿದ್ಯಾರ್ಥಿಗಳು ತಮ್ಮ ಜನ್ಮ ದಿನಾಚರಣೆ ಹಾಗೂ ರಾಷ್ಟೀಯ ಹಬ್ಬಗಳಲ್ಲಿ. ತಮ್ಮ ಶಾಲಾ ಕಾಲೇಜು ಸುತ್ತಮುತ್ತ ಸ್ವಚ್ಛತೆ ಮಾಡಿ ಗಿಡ ನೆಡುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪಿಎಂ ಶ್ರೀ ಕೇಂದ್ರ ವಿದ್ಯಾಲಯ ಶಿಕ್ಷಕಿ, ಅಭಿಲಾಶ್ ಕೆ ವಿ ಮಾತನಾಡಿ. ನಮ್ಮ ಶಾಲೆಗೆ ಕೇಂದ್ರ ಸರ್ಕಾರ ಪ್ರಶಸ್ತಿ ನೀಡುವ ಹಿನ್ನೆಲೆ. ಮಹಾತ್ಮ ಗಾಂಧೀಜಿಯವರ ಕನಸು ನನಸಾಗಲು. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದ್ದೇವೆ ಎಂದು ತಿಳಿಸಿದರು.
ನಂತರತಾಯಿ ಭುವನೇಶ್ವರಿ ವಿಗ್ರಹ ಹಾಗೂ ಸುತ್ತಮುತ್ತಲ ಪ್ರದೇಶದ ಸ್ವಚ್ಛತೆ ಕಾರ್ಯಕ್ರಮ ನಡೆಯಿತು.
ಪಿ ಎಮ್ ಶ್ರೀ ಕೇಂದ್ರ ವಿದ್ಯಾಲಯ ಪ್ರಾಂಶುಪಾಲ, ದೇವಿಂದ್ರರ್ ಸಿಂಗ್, ಜಿಲ್ಲಾ ನಗರ ಅಭಿವೃದ್ಧಿ ಕೋಶ ನಿರ್ದೇಶಕಿ, ಎಂ ವಿ ಸುಧಾ, ಆರೋಗ್ಯ ಅಧಿಕಾರಿ. ಎ ಆರ್ ಗಿರಿಜಾ. ಮಂಜುನಾಥ್. ಸಮಾಜ ಸೇವಕಿ ಪುಷ್ಪಲತಾ. ಕನ್ನಡ ಚಳುವಳಿಗಾರ ‌ ಸಿಎ ಮಾದೇವ ಶೆಟ್ಟಿ. ನಾಗರಾಜು. ಜಗದೀಶ್. ರಾಧಾಕೃಷ್ಣ. ಮಹದೇವ ನಾಯಕ. ಶಿಕ್ಷಕರಾದ. ಹೇಮಂತ್, ರಾಜೇಶ್, ಪೃಥ್ವಿ, ಶಾಂತಕುಮಾರಿ. ಸೇರಿದಂತೆ ಶಾಲೆಯ ಎಲ್ಲಾ ಶಿಕ್ಷಕರು. ಸಂಘ ಸಂಸ್ಥೆ ಪದಾಧಿಕಾರಿಗಳು. ವಿದ್ಯಾರ್ಥಿಗಳು ಹಾಜರಿದ್ದರು.

Leave a Reply

Your email address will not be published. Required fields are marked *