ಪಿಯು ವಿಭಾಗ ಜಿ.ಪಂ. ಅಧೀನಕ್ಕೆ ಒಳಪಡುವುದು ಬೇಡ : ಪ್ರಾಂಶುಪಾಲರ ಸಂಘ ಮನವಿ

ಚಾಮರಾಜನಗರ: ಪದವಿ ಪೂರ್ವ ಶಿಕ್ಷಣ ಇಲಾಖೆಯನ್ನು ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ಸೇರಿಸುವುದು ಸರಿಯಲ್ಲ. ಕಾಲೇಜು ಶಿಕ್ಷಣ ಇಲಾಖೆಯ ಅಧೀನದಲ್ಲಿದ್ದರೆ, ಗುಣಮಟ್ಟದ ಶಿಕ್ಷಣ ಮಕ್ಕಳಿಗೆ ನೀಡಲು ಸಾಧ್ಯವಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ತಿಳಿಸಿದರು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜು ಕ್ರೀಡಾಕೂಟ ಉದ್ಗಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಜಿಲ್ಲೆಯ ವಿವಿಧ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಅಧ್ಯಾಪಕರ ಕುಂದು ಕೊರತೆಗಳನ್ನು ಅಲಿಸಿ ಅವರು ಮಾತನಾಡಿದರು.

ರಾಜ್ಯ ಸರ್ಕಾರ ಪ್ರೌಢ ಶಾಲಾ ಶಿಕ್ಷಣದ ಜೊತೆಗೆ ಪದವಿ ಪೂರ್ವ ಶಿಕ್ಷಣವನ್ನು ಜಿಲ್ಲಾ ಪಂಚಾಯಿತಿ ಅಧೀನಕ್ಕೆ ಒಳಪಡಿಸಲು ಮುಂದಾಗಿದೆ. ಇದು ಸರಿಯಾದ ಕ್ರಮವಲ್ಲ. ಪ್ರಾಂಶುಪಾಲರು ಜಿಲ್ಲಾ ಪಂಚಾಯಿತಿ ಅಧೀನಕ್ಕೆ ಒಳಪಟ್ಟರೆ ಸಮಸ್ಯೆ ಜಾಸ್ತಿಯಾಗುತ್ತದೆ. ಜಿ.ಪಂ. ಸದಸ್ಯರಿಗೂ ಸಹ ಭಾದ್ಯರಾಗÀಬೇಕಾಗುತ್ತದೆ. ಈ ಸುತ್ತೋಲೆಯನ್ನು ಜಾರಿಯಾಗದಂತೆ ನೋಡಿಕೊಳ್ಳಬೇಕೆಂಬ ಮನವಿಗೆ ಸ್ಪಂದಿಸಿ ಮಾತನಾಡಿದ ಅವರು, ಇದೊಂದು ಅವೈಜ್ಞಾನಿಕ ತೀರ್ಮಾನವಾಗಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆಯನ್ನು ಜಿ.ಪಂ. ಅಧೀನಕ್ಕೆ ನೀಡಿ. ಐಎಎಸ್ ಅಫೀಸರ್‍ಗಳು ಏನು ಮಾಡಲು ಹೊರಡಿದ್ದಾರೆ ಎಂದು ಪ್ರಶ್ನೆ ಮಾಡಿದರು.

ಈ ಬಗ್ಗೆ ಶಿಕ್ಷಣ ಸಚಿವರು ಹಾಗು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಇಂಥ ಆದೇಶಗಳು ಬೇಡ. ಗುಣಮಟ್ಟದ ಶಿಕ್ಷಣಕ್ಕಾಗಿ ಶಿಕ್ಷಣ ಇಲಾಖೆಯನ್ನು ಇತರೇ ಇಲಾಖೆಗೆ ಹೊಂದಾಣಿಕೆ ಮಾಡುವುದು ಸರಿಯಲ್ಲ. ಇದು ಅನುಷ್ಠಾನವಾಗುವುದು ಕಷ್ಟ ಎಂದು ಮರಿತಿಬ್ಬೇಗೌಡ ತಿಳಿಸಿದರು.

ಮುಖ್ಯಮಂತ್ರಿಗಳಾದ ಕನ್ನಡ ರಾಜ್ಯೋತ್ಸವದಂದು ಸರ್ಕಾರಿ ಶಾಲೆಗಳಿಗೆ ವಿದ್ಯುತ್ ಹಾಗೂ ನೀರು ಉಚಿತವಾಗಿ ನೀಡುವುದಾಗಿ ತಿಳಿಸಿದ್ದಾರೆ. ಆದರಂತೆ ಪ್ರೌಢಶಾಲೆಯ ಒಟ್ಟಿಗೆ ಇರುವ ಪದವಿ ಪೂರ್ವ ಕಾಲೇಜುಗಳಿಗೆ ಈ ಯೋಜನೆ ವ್ಯಾಪ್ತಿಗೆ ಸೇರಿಸಿಕೊಡಿ. ಬಹಳ ಒಳ್ಳೆಯದಾಗುತ್ತದೆ. ನಮ್ಮ ಮಕ್ಕಳು ಸಹ ಉಚಿತ ವಿದ್ಯುತ್ ಹಾಗೂ ನೀರಿನ ವ್ಯವಸ್ಥೆಯನ್ನು ಕಲ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಪ್ರೌಢಶಾಲೆಯ ಒಟ್ಟಿಗೆ ಇದ್ದರು ಮಲತಾಯಿ ಧೋರಣೆ ಸರಿಯಲ್ಲ ಎಂದು ಪ್ರಾಂಶುಪಾಲರೊಬ್ಬರು ಮನವಿ ಮಾಡಿದರು.

ಮತ್ತೊಬ್ಬರು ಬಹಳಷ್ಟು ಕಾಲೇಜುಗಳು ಆರಂಭಗೊಂಡು ವರ್ಷಗಳೇ ಕಳೆದಿವೆ. ಇನ್ನು ಸಹ ಅನುದಾನದಡಿಗೆ ಸೇರ್ಪಡೆಯಾಗಿಲ್ಲ. ಇದರಿಂದ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆಧ್ಯಾಪಕರು ಹಾಗು ಪ್ರಾಂಶುಪಾಲರಿಗೆ ವಯೋಮಿತಿ ಹೆಚ್ಚಾಗಿ ಕಡಿಮೆ ಸಂಬಳದಲ್ಲಿ ನಿವೃತ್ತಿಯಾಗುತ್ತಿದ್ದಾರೆ. ಇದನ್ನು ಸರಿಪಡಿಸಿ, ಅನುದಾನಕ್ಕೆ ಒಳಪಡಿಸಿ ಎಂಬಂತೆ ಅನೇಕ ಸಮಸ್ಯೆಗಳ ಕುರಿತು ವಿದಾನ ಪರಿಷತ್ ಸದಸ್ಯರಿಗೆ ಪ್ರಾಂಶುಪಾಲರು ಹಾಗೂ ಅಧ್ಯಾಪಕರ ವೃಂದವರು ತಿಳಿಸಿದರು.

ಈ ಸಂದರ್ಭದಲ್ಲಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಂಜುನಾಥ್ ಪ್ರಸನ್ನ, ಪ್ರಾಂಶಪಾಲರ ಸಂಘದ ಅಧ್ಯಕ್ಷ ಸೋಮಣ್ಣ, ಹಾಗೂ ಸಂಘದ ಪದಾಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *