ಪೌರಕಾರ್ಮಿಕರ ಭವನಕ್ಕೆ ಸರ್ಕಾರದಿಂದ 2ಎಕರೆ ಜಮೀನು ಮಂಜೂರು : ತಹಸೀಲ್ದಾರ್ ಬಸವರಾಜುಗೆ ಸನ್ಮಾನ

ಚಾಮರಾಜನಗರ: ಪೌರಕಾರ್ಮಿಕರ ಭವನ, ಸಫಾಯಿ ಕರ್ಮಚಾರಿ ಮಕ್ಕಳ ವಿದ್ಯಾರ್ಥಿ ನಿಲಯ, ಸಮುದಾಯ ಅಭಿವೃದ್ದಿಗಾಗಿ ತಾಲೂಕಿನ ಕಸಬಾ ಹೋಬಳಿ ಉತ್ತುವಳ್ಳಿ ಗ್ರಾಮದ ಸರ್ವೆ ನಂ. ೧೧೭ರಲ್ಲಿ ೨ ಎಕರೆ ಜಮೀನು ಮಂಜೂರು ಮಾಡಿದ ಪ್ರಯುಕ್ತ ಜಿಲ್ಲಾ ಸಫಾಯಿ ಕರ್ಮಚಾರಿ ವಿಚಕ್ಷಣ ಸಮಿತಿಯ ಸದಸ್ಯ ಸಿ.ಶಂಕರ ಅಂಕನಶೆಟ್ಟಿಪುರ ರವರು ತಹಸೀಲ್ದಾರ್ ಬಸವರಾಜು ಅವರನ್ನು ಸನ್ಮಾನಿಸಿದರು.

ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದಲ್ಲಿ ತಹಸೀಲ್ದಾರ್ ಬಸವರಾಜು ಅವರಿಗೆ ಭಾರಿಗಾತ್ರದ ಹೂವಿನ ಹಾರ ಹಾಕಿ, ಮೈಸೂರುಪೇಟೆ ತೊಡಿಸಿ, ಫಲತಾಂಬೂಲ ನೀಡಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಪೌರಕಾರ್ಮಿಕರ ಭವನ, ಸಫಾಯಿ ಕರ್ಮಚಾರಿ ಮಕ್ಕಳ ವಿದ್ಯಾರ್ಥಿ ನಿಲಯ, ಸಮುದಾಯ ಅಭಿವೃದ್ದಿಗಾಗಿ ಜಮೀನು ಮಂಜೂರು ಮಾಡಿಸಿಕೊಡುವಂತೆ ಜಿಲ್ಲಾ ಸಫಾಯಿ ಕರ್ಮಚಾರಿ ವಿಚಕ್ಷಣ ಸಮಿತಿಯ ಸದಸ್ಯ ಸಿ.ಶಂಕರ ಅಂಕನಶೆಟ್ಟಿಪುರ ಅವರು ಸಲ್ಲಿಸಿದ ಮನವಿಯನ್ನು ಪುರಸ್ಕರಿಸಿ ಸರ್ಕಾರ ೨ ಎಕರೆ ಜಮೀನು ಮಂಜೂರು ಮಾಡಿದೆ ಎಂದರು.

ಜಿಲ್ಲಾ ಸಫಾಯಿ ಕರ್ಮಚಾರಿ ವಿಚಕ್ಷಣ ಸಮಿತಿಯ ಸದಸ್ಯ ಸಿ.ಶಂಕರ ಅಂಕನಶೆಟ್ಟಿಪುರ ಮಾತನಾಡಿ, ಪೌರಕಾರ್ಮಿಕರ ಭವನ, ಸಫಾಯಿ ಕರ್ಮಚಾರಿ ಮಕ್ಕಳ ವಿದ್ಯಾರ್ಥಿ ನಿಲಯ, ಸಮುದಾಯ ಅಭಿವೃದ್ದಿಗಾಗಿ ಜಮೀನು ಮಂಜೂರು ಮಾಡಿಸಿಕೊಡುವಂತೆ ತಹಸೀಲ್ದಾರ್ ಅವರಲ್ಲಿ ಮನವಿ ಸಲ್ಲಿಸಲಾಗಿತ್ತು. ಸರ್ಕಾರ ಮನವಿಯನ್ನು ಪುರಸ್ಕರಿಸಿ ೨ ಎಕರೆ ಜಮೀನು ಮಂಜೂರು ಮಾಡಿರುವುದು ತುಂಭಾ ಸಂತಸವಾಗಿದ್ದು,ಇದು ಇಡೀ ರಾಜ್ಯದಲ್ಲಿಯೇ ಪ್ರಥಮವಾಗಿದ್ದು, ಪೌರಕಾರ್ಮಿಕರ ಭವನಕ್ಕೆ ಜಮೀನು ಮಂಜೂರು ಮಾಡಿಕೊಟ್ಟಿರುವುದು…ಸಂತಸದ ವಿಷಯವಾಗಿದೆ. ಸಮುದಾಯದ ಪರವಾಗಿ ತಾಲೂಕು ಆಡಳಿತ, ಜಿಲ್ಲಾಡಳಿತ, ಸರ್ಕಾರವನ್ನು ಈ ಮೂಲಕ ಅಭಿನಂದಿಸಲಾಗುವುದು. ಇದು ನನ್ನ ೨ ವರ್ಷದ ಪರಿಶ್ರಮ ಫಲವಾಗಿ ರಾಜ್ಯದಲ್ಲೇ ಪ್ರಥಮ ಬಾರಿಗೆ ಪೌರಕಾರ್ಮಿಕರ ಭವನ, ಸಫಾಯಿ ಕರ್ಮಚಾರಿ ಮಕ್ಕಳ ವಿದ್ಯಾರ್ಥಿ ನಿಲಯ, ಸಮುದಾಯ ಅಭಿವೃದ್ದಿಗಾಗಿ ಸರ್ಕಾರ ೨ ಎಕರೆ ಮಂಜೂರು ಮಾಡಿದೆ ಎಂದರು.

ಈ ಸಂದರ್ಭದಲ್ಲಿ ಯ.ಸಿ.ಕೃಷ್ಣ ಸ್ವಾಮಿನಾಥ್,ಮುರುಗೇಶ್ ಕದಂಬ ನಾ.ಅಂಬರೀಶ್, ಎಂ.ರಾಜೇಂದ್ರ, ಸೋಮವಾರಪೇಟೆ ಕುಮಾರ್, ಎಸ್.ವಿಜಯ, ಸಾಗರ್‌ತಿಲಕ್, ಪ್ರಕಾಶ್, ತೊಳಸಮ್ಮ, ಸುಮತಿ, ಸೋಮ, ರಾಕೇಶ್, ಮಂಜು, ರಾಜುಬಾಯಿ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *