ಅನ್ವೇಷಣಾ ಸಂಸ್ಥಾಪಕರ ದಿನದ ಕಾರ್ಯಕ್ರಮದಲ್ಲಿ ಸಿಸ್ಟರ್ ಜೀವನ್ ಕರೆ
ಬಿಳಿಗೆರೆ : ನಿಮ್ಮ ಸಾಮಥ್ರ್ಯ, ಪ್ರತಿಭೆಗಳನ್ನು ಗುರುತಿಸಿಕೊಂಡು ಅದರನುಸಾರ ನಿಮ್ಮ ಮುಂದಿನ ಗುರಿಗಳ ಕಡೆಗೆ ಸಾಗಿರಿ ಎಂದು ಸಿಸ್ಟರ್ ಜೀವನ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಅನ್ವೇಷಣಾ ಸಂಸ್ಥೆಯು ಇತ್ತೀಚೆಗೆ ಹಮ್ಮಿಕೊಂಡಿದ್ದ ಸಂಸ್ಥಾಪಕರ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು ನಿಮ್ಮಲ್ಲಿ ಪ್ರತಿಯೊಬ್ಬರಲ್ಲಿಯು ಒಂದೊಂದು ರೀತಿಯ ಪ್ರತಿಭೆ ಇದ್ದೇ ಇರುತ್ತದೆ. ಆ ಪ್ರತಿಭೆಯನ್ನು ನೀವು ಬಳಸಿಕೊಳ್ಳದಿದ್ದರೆ ನಿಮ್ಮ ಪ್ರತಿಭೆ ವ್ಯರ್ಥವಾಗುತ್ತದೆ. ಹೀಗಾಗಿ ಪ್ರತಿಭಾನುಸಾರ ನಿಮ್ಮ ನಿಮ್ಮ ಗುರಿಗಳನ್ನು ನಿರ್ಧರಿಸಿಕೊಳ್ಳಿ ಎಂದು ತಿಳಿಸಿದರು.
ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ರಾಷ್ಟ್ರ ಉತ್ತಮ ಉಪನ್ಯಾಸಕ ಪ್ರಶಸ್ತಿ ಪಡೆದಿರುವ ಜೀವಶಾಸ್ತ್ರ ಉಪನ್ಯಾಸಕರಾದ ಹೆಚ್.ಎನ್. ಗಿರೀಶ್ ಅವರು ಮತನಾಡುತ್ತಾನ ನಿಮ್ಮ ಗುರಿ ಯಾವಾಗಲೂ ಎತ್ತರದಲ್ಲಿರಬೇಕು. ಎಲ್ಲಾ ಸೌಲಭ್ಯಗಳೂ ಸಿಗುತ್ತಿರುವ ನೀವು ಅವುಗಳನ್ನು ಬಳಸಿಕೊಂಡು ನಿಮ್ಮ ಗುರಿ ಸಾಧನೆಯ ಕಡೆ ಮುಂದುವರೆಯಿರಿ. ನಿಮ್ಮ ತಂದೆತಾಯಿಗಳು ತಲೆ ತಗ್ಗಿಸುವಂತಹ ಯಾವುದೇ ಕೆಲಸವನ್ನು ಮಾಡಬೇಡಿ ಎಂದು ವಿದ್ಯಾಥಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಮುಖ್ಯಸ್ಥರಾದ ಹೆಚ್.ಕೆ.ಚಂದ್ರಮೋಹನ್ ರವರು ನಾವು ಹಿಡಿದ ಕೆಲಸ ಸಾಧಿಸಬೇಕಾದರೆ ಒಬ್ಬರೆ ಸಾಗಬೇಕು. ಬೇರೆಯವರ ಅಭಿಪ್ರಾಯಗಳನ್ನು ಸಂಗ್ರಹಿಸುತ್ತಾ ಕುರಬಾರದು.ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಮಕ್ಕಳಿಗೆ ಶ್ರಮದ ಜೊತೆ ಶ್ರದ್ಧೆಯು ಇರಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ರಾಷ್ಟ್ರ ಪ್ರಶಸ್ತಿ ವಿಜೇತರಾದ ಉಪನ್ಯಾಸಕ ಹೆಚ್. ಎನ್. ಗಿರೀಶ್ ಅವರನ್ನು ಸಂಸ್ಥೆಯ ಆದರದಿಂದ ಸನದಮಾನಿಸಿತು.
ಈ ಸಂದರ್ಭದಲ್ಲಿ ಸಂಸ್ಥಾಪಕರ ದಿನದ ಅಂಗವಾಗಿ ಹತ್ತನೇ ತರಗತಿ ವಿದ್ಯಾಥಿಗಳಿಗೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆ ಹಾಗೂ ಚರ್ಚಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳ ಹೆಸರನ್ನು ಹೇಳಲಾಯಿತು.
ಸಂಸ್ಥೆಯ ಅಧ್ಯಕ್ಷರಾದ ಗಿರೀಶ್ ಹೆಚ್.ಎನ್ ಅವರು ಪ್ರಾಸ್ತಾವಿಕ ಮಾತುಗಳನ್ನಡಿದರೆ, ಉಪಪ್ರಾಶುಂಪಾಲೆ ಆಶಾನಂದೀಶ್ ಸ್ವಾಗತ ಕೋರಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕರಾದ ನಂಜುಂಡಶೆಟ್ಟಿ, ಕಾರ್ಯದರ್ಶಿ ಹೆಚ್.ಸಿ. ಪ್ರಶಾಂತ್, ಖಜಾಂಚಿ ಸುಪ್ರಿಯಾ ಪ್ರಶಾಂತ್, ಉಪನ್ಯಾಸಕರು, ವಿದ್ಯಾರ್ಥಿಗಳು, ಪೋಷಕರು, ಕಛೇರಿ ಸಿಬ್ಬಂದಿ ಹಾಜರಿದ್ದರು.