ಭಗತ್‍ಸಿಂಗ್ ಯುವಸೇನೆ ವತಿಯಿಂದ ನೂತನ ಕ್ಯಾಲೆಂಡರ್ ಬಿಡುಗಡೆ

ಚಾಮರಾಜನಗರ: ತಾಲೂಕಿನ ಚಂದಕವಾಡಿಯ ಶ್ರೀ ಲಕ್ಷ್ಮಿದೇವಿ ಅಮ್ಮನವರ ದೇವಸ್ಥಾನದ ಆವರಣದಲ್ಲಿ ಭಗತ್ ಸಿಂಗ್ ಯುವ ಸೇನೆ ವತಿಯಿಂದ ನೂತನ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.

ಯುವಜನ ಸೇವೆ ಹಾಗೂ ಕ್ರೀಡಾ ಇಲಾಖೆಯ ಯುವ ಸ್ಪಂದನ ಕೇಂದ್ರದ ಯುವ ಸಮಾಲೋಚಕಿ ಮಾದಲಾಂಬಿಕ ರವರು ಮಾತನಾಡಿ ಸಮಾಜಕ್ಕೆ ಸೇವೆ ಮಾಡುವ ಮನೋಭಾವನೆ ರೂಪಿಸಿಕೊಳ್ಳಬೇಕು. ಪ್ರತಿಯೊಬ್ಬರು ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಯುವ ಸಂಘಗಳು ಸಮಾಜಮುಖಿ ಕಾರ್ಯಗಳಿಗೆ ಬದ್ಧರಾಗಬೇಕು ಎಂದರು.

ಶಾಖಾ ಅಂಚೆ ಕಚೇರಿ ಪೆÇೀಸ್ಟ್ ಮಾಸ್ಟರ್ ಪ್ರೇಮ ಬೆಳಗಾವಿ ಮಾತನಾಡಿ, ಸಮಾಜಮುಖಿ ವಿಚಾರಗಳಲ್ಲಿ ಸದ್ಗುಣ , ಮಾನವೀಯ ಮೌಲ್ಯಗಳು ನಿಷ್ಪಕ್ಷಪಾತವಾಗಿದ್ದರೆ ಅವುಗಳಿಂದ ಜನರಲ್ಲಿ ಸಮಾನತೆ ,ವಿಶ್ವಾಸಯುತ್ತ ಸಮ ಸಮಾಜ ನಿರ್ಮಾಣ ಸಾಧ್ಯ ಎಂದರು.
ಭಗತ್ ಸಿಂಗ್ ಯುವ ಸೇನೆ ಅಧ್ಯಕ್ಷ ಕಾಂತರಾಜು, ಮಲ್ಲೇಶ್, ಮಹದೇವಗೌಡ, ಕಾಳಮ್ಮ, ಮಹೇಶ್ ರಾಚ್ಚಪ್ಪ ಇತರರಿದ್ದರು.

Leave a Reply

Your email address will not be published. Required fields are marked *