ಚಾಮರಾಜನಗರ: ತಾಲೂಕಿನ ಮರಿಯಾಲದ ಹುಂಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 536ನೇ ಕನಕದಾಸರ ಜಯಂತಿಯನ್ನು ವಿಜೃಂಭನೆಯಿಂದ ಅಚರಣೆ ಮಾಡಲಾಯಿತು.

ಗ್ರಾಮದ ಹಿರಿಯ ಮುಖಂಡರಾದ ಎಂ.ಎಸ್. ಮಾದಯ್ಯ ಅವರ ಪುತ್ರ ಉದ್ಯಮಿ ಎಂ. ಗುರುಪ್ರಸಾದ್ ಅವರು ಕನಕದಾಸರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಮಕ್ಕಳಿಗೆ ಸಮವಸ್ತ್ರ, ಟೈ, ಬೆಲ್ಟ್, ಗುರುತಿನ ಕಾರ್ಡ್ ಹಾಗು ಸಿಹಿ ವಿತರಣೆ ಮಾಡಿದರು.
ಬಳಿಕ ಮಾತನಾಡಿದ ಅವರು, ಕನಕದಾಸರು ನಮ್ಮೆಲ್ಲರಿಗೂ ಸ್ಪೂರ್ತಿ, ತಮ್ಮ ಕೀರ್ತನೆಗಳ ಮೂಲಕ ಜಾತಿ ಪದ್ದತಿ, ಮೌಡ್ಯ ಹಾಗೂ ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಲು ಪ್ರಯತ್ನ ಮಾಡಿದರು. ಅವರ ಕೀರ್ತನೆಗಳು ಇಂದಿಗೂ ಸಹ ಹೆಚ್ಚು ಪ್ರಸ್ತುತವಾಗಿದೆ. ವಿದ್ಯಾರ್ಥಿಗಳಾದ ತಾವು ಕನಕದಾಸರ ತತ್ವ ಅದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಎಂ. ಬಿ. ಪ್ರಕಾಶ್, ಮುಖಂಡರಾದ ಮಾದೇವಸ್ವಾಮಿ ಬ್ಯಾಂಕ್ ಸಿದ್ದು, ಮಲ್ಲೇಶ್, ಶಂಭುಗೌಡ, ರಜನಿಕಾಂತ್, ರಜಿನಿ, ಬಾಲು, ಮಾದೇಗೌಡ, ಶಿಕ್ಷಕರಾದ ಮೀನಾ ಹಾಗೂ ದೀಪು, ಪ್ರಸಾದ್ ರವರು ಹಾಜರಿದ್ದರು.