ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಕಾಂಗ್ರೆಸ್ ಘೋಷಣೆ ಮಾಡಲಿ : ಮೂಡ್ನಾಕೂಡು ಪ್ರಕಾಶ್ ಸವಾಲು

ಚಾಮರಾಜನಗರ: ದಲಿತ ಹಿರಿಯ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ ಅವರು 50 ವರ್ಷದ ರಾಜಕೀಯ ಕಾರ್ಯಕ್ರಮ ಮಾಡಲು ಮುಂದಾಗಿರುವ ದಲಿತರ ನಾಯಕರು ಹಾಗೂ ಜಿ.ಎನ್. ನಂಜುಂಡಸ್ವಾಮಿ ಅದೇ ಸಮಾವೇಶದಲ್ಲಿ ಅವರ ಹಿರಿತನವನ್ನು ನೋಡಿ ವೇದಿಕೆಯಲ್ಲಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಲಿ ಎಂದು ಬಿಜೆಪಿ ಎಸ್ಪಿ ಮೋರ್ಚಾ ಜಿಲ್ಲಾಧ್ಯಕ್ಷ ಮೂಡ್ನಾಕೂಡು ಪ್ರಕಾಶ್ ಸವಾಲು ಹಾಕಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಪತ್ರಿಕಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 135 ಕ್ಷೇತ್ರಗಳಲ್ಲಿ ಗೆಲ್ಲಲು ದಲಿತರು ಹೆಚ್ಚಿನ ಮತಗಳನ್ನು ಕಾಂಗ್ರೆಸ್ ಹಾಕಿದ್ದೇ ಕಾರಣ. ಅವರು ಸಿದ್ದರಾಮಯ್ಯ , ಡಿ.ಕೆ. ಶಿವಕುಮಾರ್ ಅವರನ್ನು ನೋಡಿ ಮತ ನೀಡಲಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಪಕ್ಷ ಬಹುಮತ ಬಂದರೆ ಅವರೇ ಮುಖ್ಯಮಂತ್ರಿ ಆಗುತ್ತಾರೆ ಎಂಬ ಏಕೈಕ ಕಾರಣದಿಂದ ದಲಿತರು ಒಗ್ಗಟ್ಟಿನಿಂದ ಮತ ನೀಡಿದ್ದರು.

ಆದರೆ, ಹೈಕಮಾಂಡ್ ಅವರಿಗೆ ಸಿಎಂ ಪದವಿಯನ್ನು ನೀಡಲಿಲ್ಲ. ರಾಜ್ಯ ಹಾಗೂ ರಾಷ್ಟೀಯ ಮಟ್ಟದ ಕಾಂಗ್ರೆಸ್ ನಾಯಕರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಜೋಕರ್ ರೀತಿಯಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಅವರನ್ನು ಅನ್ನು ತೋರಿಸಿ ಇತರರಿಗೆ ಅಧಿಕಾರ ನೀಡುವ ಪರಿಪಾಠ ಹಿಂದಿನಿಂದಲು ಬೆಳೆದು ಬಂದಿದೆ ಎಂದರು.

ಹೀಗಾಗಿ ಜಿ.ಎನ್. ನಂಜುಂಡಸ್ವಾಮಿ ಅವರು ಚಾ.ನಗರದಲ್ಲಿ ಖರ್ಗೆ 50 ಸಂಭ್ರಮ ಕಾರ್ಯಕ್ರಮದಲ್ಲಿ ಈ ವಿಚಾರವನ್ನು ಪ್ರಬಲವಾಗಿ ಮಂಡಿಸಿ, ಚಾಮರಾಜನಗರದಿಂಲೇ ಅವರು ಪ್ರಧಾನಿ ಅಭ್ಯರ್ಥಿಯಾಗಿ ಘೋಷನೆಯಾಗಲಿ. ದೇಶದ ಪ್ರವಾಸ ಮಾಡಲಿ ಎಂಬದನ್ನು ಮಂಡಿಸಬೇಕು. ಅದು ಬಿಟ್ಟು ಲೋಕಸಭಾ ಚುನಾವಣೆ ಇನ್ನೇನು ಹತ್ತಿರ ಬರುತ್ತಿದೆ ಎಂಬ ಕಾರಣಕ್ಕೆ ಅವರನ್ನು ವೈಭಕರೀಸುವ ನಾಟಕ ಸಾಕು. ಕಾಂಗ್ರೆಸ್ ಪಕ್ಷ ದಲಿತರ ಮತಗಳನ್ನು ಪಡೆದು ಅವರಿಗೆ ವಂಚನೆ ಮಾಡುತ್ತಲೇ ಬಂದಿದೆ ಎಂದು ಕಿಡಿಕಾರಿದರು.

ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿಗಳಾದ ರೇವಣ್ಣ, ಪದ್ಮ, ಎಸ್ಸಿ ಮೋರ್ಚಾ ಹನೂರು ತಾಲೂಕು ಘಟಕದ ಅಧ್ಯಕ್ಷ ರಾಜಶೇಕರ್, ಮುಖಂಡ ಹೊಂಗನೂರು ಮಹದೇವಸ್ವಾಮಿ ಇದ್ದರು.

Leave a Reply

Your email address will not be published. Required fields are marked *