ಯುವ ಜನಾಂಗಕ್ಕೆ ಅಂಬೇಡ್ಕರ್ ಜೀವನ ಚರಿತ್ರೆ ಮಾದರಿ : ಶಿಲ್ಪಾನಾಗ್

ಚಾ.ನಗರದಲ್ಲಿ ಸಂವಿಧಾನ ದಿನಾಚರಣೆ ಹಾಗೂ ಮಹಾನಾಯಕ ಧಾರಾವಾಹಿ ಕಲಾವಿದರಿಗೆ ಸನ್ಮಾನ
ಚಾಮರಾಜನಗರ: ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನ ಚರಿತ್ರೆ ಯುವ ಜನಾಂಗಕ್ಕೆ ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪನಾಗ್ ತಿಳಿಸಿದರು.

ನಗರದ ಪೇಟೆ ಪ್ರೈಮರಿ ಶಾಲೆ ಅವರಣದಲ್ಲಿ ಸಂವಿಧಾನ ಬಳಗ ಆಯೋಜನೆ ಮಾಡಿದ್ದ ಸಂವಿಧಾನ ದಿನಾಚರಣೆ ಹಾಗೂ ಮಹಾನಾಯಕ ಧಾರಾವಾಹಿ ಕಲಾವಿದರುಗಳು ಹಾಗೂ ಜೀ ಕನ್ನಡ ಸಂಪಾದಕರಾದ ಶ್ರೀ ರಾಘವೇಂದ್ರ ಹುಣಸೂರು ಅವರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮಹಾನಾಯಕ ಧಾರಾವಾಹಿಯ ಮೂಲಕ ಅಂಬೇಡ್ಕರ್ ಜೀವನ ಚರಿತ್ರೆ ತಿಳಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯವಾದದ್ದು, ಇಂತಹ ಧಾರಾವಾಹಿಗಳು ಯುವ ಜನತೆಗೆ ಸ್ಪೂರ್ತಿಯಾಗಿದೆ. ಅಂಬೇಡ್ಕರ್ ಜೀವನ ವೃತ್ತಾಂತವನ್ನು ಕೆಲವು ಘಟನಾವಳಿಗಳನ್ನು ಮಾತ್ರ ನಾವೆಲ್ಲರು ಪುಸ್ತಕಗಳನ್ನು ಓದಿ ತಿಳಿದುಕೊಂಡಿದ್ದೇವು. ಆದರೆ, ಮಹಾನಾಯಕ ಧಾರಾವಾಹಿಯ ಮೂಲಕ ಅಂಬೇಡ್ಕರ್ ಅವರ ಸಂಪೂರ್ಣ ಜೀವನ ಚರಿತ್ರೆಯನ್ನು ದೃಶ್ಯದ ಮೂಲಕ ದೇಶದ ಮೂಲೆ ಮೂಲೆಗಳಿಗೂ ತಲುಪುವಂತೆ ಜೀ ವಾಹಿನಿಯ ಅವರು ಮಾಡಿದ್ದಾರೆ. ಇಂದು ಅಂಬೇಡ್ಕರ್ ಅವರು ದೇಶದ ನಾಯಕರಲ್ಲ. ವಿಶ್ವದ್ಯಂತ ಪ್ರಜ್ವಲಿಸುವ ಸೂರ್ಯ ಅಗಿದ್ದಾರೆ. ಎಂದರು.

ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ ಪುರಸ್ಕøತರಾದ ಕಾರ್ಯಕ್ರಮದ ಆಯೋಜಕ ವೆಂಕಟರಮಣಸ್ವಾಮಿ( ಪಾಪು) ಸಂವಿಧಾನ ದಿನವನ್ನು ಬಹಳ ಅರ್ಥಫೂರ್ಣವಾಗಿ ಆಚರಣೆ ಮಾಡುವ ಉದ್ದೇಶದಿಂದ ಮಹಾನಾಯಕ ಧಾರಾವಾಹಿಯ ತಂಡವನ್ನು ಚಾ.ನಗರ ಜಿಲ್ಲೆಗೆ ಕರೆಸಬೇಕೆಂದು ಕಳೆದ ಮೂರು ತಿಂಗಳಿಂದ ನಾವು ಮುಂಬೈನಲ್ಲಿರುವ ಕಲಾವಿದರನ್ನು ಸಂಪರ್ಕ ಮಾಡಿ ಅವರನ್ನು ಚಾ.ನಗರಕ್ಕೆ ಕರೆ ತಂದಿದ್ದೇವೆ. ಅಂಬೇಡ್ಕರ್ ಅವರು ನಾವು ನೋಡಿಲ್ಲ. ಆದರೆ ಅವರಂತ ಪಾತ್ರ ಮಾಡುತ್ತಿರುವ ಕಲಾವಿದರನ್ನು ಗೌರವಿಸಬೇಕು. ಅವರಿಗೆ ಇನ್ನು ಹೆಚ್ಚಿನ ಉತ್ತೇಜನ ನೀಡಬೇಕು. ಅಂಭೇಡ್ಕರ್ ಅವರು ತಮ್ಮ ಜೀವನುದ್ದುಕ್ಕು ನೋವು, ಅಪಮಾನ, ಹಿಂಸೆಯನ್ನು ಅನುಭವಿಸಿ, ನನ್ನ ಜನ ಮುಂದೆ ನನ್ನಂಥೆ ಕಷ್ಟ ಅನುಭವಿಸುವುದು ಬೇಡ ಎಂದು ತೀರ್ಮಾನಿಸಿ, ಉನ್ನತ ವ್ಯಾಸಂಗ ಮಾಡಿ, ಸಂವಿಧಾನವನ್ನು ರಚನೆ ಮಾಡಿಕೊಡುವ ಮೂಲಕ ನಮ್ಮೆಲ್ಲರಿಗೂ ಸಂವಿಧಾನ ದತ್ತವಾದ ಹಕ್ಕುಗಳನ್ನು ಕಲ್ಪಿಸಿಕೊಟ್ಟರು. ಅವರು ಕಠಿಣ ಪರಿಶ್ರಮ ಫಲವಾಗಿ ನೀಡಿರುವ ಸಂವಿಧಾನವನ್ನು ರಕ್ಷಣೆ ಮಾಡುವ ಜೊತೆಗೆ ಮುಂದಿನ ಪೀಳಿಗೆಗೆ ಕೊಂಡೊಯ್ಯವ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಚಾಮರಾಜನಗರ ವಿಶ್ವ ವಿದ್ಯಾನಿಲಯದ ಉಪ ಕುಲಪತಿಗಳಾದ ಪ್ರೊ. ಎಂ.ಆರ್. ಗಂಗಾಧರ್ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅದರ್ಶಗಳನ್ನು ಜೀವನದಲ್ಲಿ ಸದಾ ಅಳವಡಿಸಿಕೊಳ್ಳಬೇಕು. ಮಹಾನಾಯಕ ಧಾರವಾಹಿಯ ಕಲಾವಿದರಿಗೆ ಧನ್ಯವಾದಗಳು ಎಂದರು.

ಸನ್ಮಾನ ಸ್ವೀಕರಿಸಿದ ಡಾ. ಬಿ.ಆರ್. ಅಂಬೇಡ್ಕರ್ ಪಾತ್ರಧಾರಿ ಅಥರ್ವ ಕರ್ವೆ ಮಾತನಾಡಿ, ಸಂವಿಧಾನ ಸಮರ್ಪಣೆ ದಿನ ಕಾರ್ಯಕ್ರಮಕ್ಕೆ ನನ್ನ ಮತ್ತು ತಂಡವನ್ನು ಆಹ್ವಾನಿಸಿ, ಸತ್ಕರಿಸಿದ್ದಾಗಿ ನಿಮ್ಮೆಲ್ಲರಿಗೂ ಚಿರಋಣಿಯಾಗಿರುವೆ. ಮಹಾನಾಯಕ ಧಾರಾವಾಹಿಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪಾತ್ರ ಮಾಡಲು ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ. ಅಂಬೇಡ್ಕರ್ ಬರೆದಿರುವ ಸಂವಿಧಾನದ ಆಶಯಗಳನ್ನು ಸರ್ವರಿಗೂ ತಿಳಿಸುವುದು ನಮ್ಮಲ್ಲರ ಕರ್ತವ್ಯವಾಗಿದೆ ಎಂದರು.

ಪ್ರೋ. ಎಚ್.ಎನ್. ರಾಜಶೇಖರ್ ಮಾತನಾಡಿ, ನವೆಂಬರ್ 26 ಸಂವಿಧಾನ ಸಮರ್ಪಣಾ ದಿನ. ಈ ದಿನ ಅತ್ಯಂತ ಪವಿತ್ರವಾಗಿದ್ದು, ನರೇಂದ್ರಮೋದಿ ಅವರು ಪ್ರಧಾನಿಯಾದ ಮೇಲೆ ನ. 26 ರನ್ನು ಸಂವಿಧಾನ ದಿನ ವೆಂದು ಘೋಷಣೆ ಮಾಡಿದರು. ಈ ಹಿಂದೆ ಇದು ಕಾನೂನು ದಿನವಾಗಿ ಆಚರಣೆಯಾಗಲ್ಪಡುತ್ತಿತ್ತು. ಭಾರತ ನಾಯಕರಲ್ಲಿ ಅಗ್ರಗಣ್ಯ ಸ್ಥಾನ ಪಡೆದವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರು. ಅವರ ಜನ್ಮ ದಿನೋತ್ಸವವನ್ನು ವಿಶ್ವ ಸಂಸ್ಥೆಯು ವಿಶ್ವ ಜ್ಞಾನ ದಿನವನ್ನಾಗಿ ಆಚರಣೆ ಮಾಡುತ್ತಿದೆ ಎಂದರು.

ಸರ್ಕಾರಿ ಮೆಡಿಕಲ್ ಕಾಲೇಜಿನ ಡೀನ್ ಡಾ. ಎಚ್.ಜಿ. ಮಂಜುನಾಥ್ ಮಾತನಾಡಿದರು.

ಸನ್ಮಾನ : ವೇದಿಕೆಯಲ್ಲಿ ರಾಮ್‍ಜೀ ಸತ್ಪಾಲ್ ಪಾತ್ರಧಾರಿ ಜಗನ್ನಾಥ್ ನಿವಗುಣೆ, ಡಾ. ಬಿ.ಆರ್. ಅಂಬೇಡ್ಕರ್ ಪಾತ್ರಧಾರಿ ಆಥರ್ವ ಕರ್ವೆ ಅವರಿಗೆ ಬೆಳ್ಳಿ ಗಧೆ ನೀಡಿ, ರಾಮಾಬಾಯಿ ಪಾತ್ರಧಾರಿ ಕು. ನಾರಾಯಣಿ ವರ್ಣೆ ಅವರಿಗೆ ಬೆಳ್ಳಿ ಕಿರೀಟವನ್ನು ತೊಡಿಸಿ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ತಿ. ನರಸೀಪುರದ ಬುದ್ದ ವಿಹಾರದ ಬೌದ್ದ ಬಿಕ್ಕು ಬೋಧಿರತ್ನ ಬಂತೇಜಿ, ಸಂವಿಧಾನ ಬಳಗದ ಅಧ್ಯಕ್ಷ ಎಸ್. ಜಯಕಾಂತ್ ಚಾಲುಕ್ಯ, ಭಾರತೀಯ ಬೌದ್ದ ಮಹಾಸಭಾ ಉಪಾಧ್ಯಕ್ಷ ಮಹೇಂದ್ರ ಮಾಂಕಾಳೆ, ರಾಮಚಂದ್ರಪ್ಪ, ಕಾಳಿಚರಣ್, ಇತರರು ಇದ್ದರು.

Leave a Reply

Your email address will not be published. Required fields are marked *