ಯುವ ಸಂಘಗಳ ನವೀಕರಣಕ್ಕೆ ಅವಕಾಶ

ಚಾಮರಾಜನಗರ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ 2011-12ನೇ ಸಾಲಿನಿಂದಿಚೆಗೆ ಇಲಾಖೆಯಲ್ಲಿ ಸಂಯೋಜನೆಗೊಂಡು ಇದುವರೆಗೂ ನವೀಕರಣ ಆಗದೇ ಇರುವ ಯುವಕ ಯುವತಿ ಸಂಘಗಳು ನವೀಕರಣಗೊಳಿಸಿಕೊಳ್ಳಲು ಡಿಸೆಂಬರ್ 30ರವರೆಗೂ ಅವಕಾಶ ಕಲ್ಪಿಸಲಾಗಿದೆ.

ಸಂಬಂಧಪಟ್ಟ ದಾಖಲೆಗಳೊಂದಿಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೆಶಕರ ಕಚೇರಿಯಲ್ಲಿ ನವೀಕರಣ ಮಾಡಿಸಿಕೊಳ್ಳಬಹುದು. ನವೀಕರಿಸದಿದ್ದಲ್ಲಿ ಆಸಕ್ತಿ ಇಲ್ಲವೆಂದು ಪರಿಗಣಿಸಿ ಸಂಘವನ್ನು ಅನರ್ಹಗೊಳಿಸಲಾಗುವುದು. ಇಲಾಖೆಯಿಂದ ಯಾವುದೇ ಸೌಲಭ್ಯ ನೀಡಲಾಗುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂ.ಸಂ: 08226-224932, ಮೊ.ಸಂ: 9880211027, 9844160841 ಸಂಪರ್ಕಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *