ಕಾಲೇಜಿನ ಸಿಂಚನ ಜಿಲ್ಲಾ ಥ್ರೋಬಾಲ್ ನಲ್ಲಿ ಪ್ರಥಮ; ಟೈಕೊಂಡೋದಲ್ಲಿ ತನ್ಮಯಿ ಫಸ್ಟ್

ಮೈಸೂರು: 2023-24ನೇ ಸಾಲಿನ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ದಕ್ಷ ಕಾಲೇಜಿನ ವಿದ್ಯಾರ್ಥಿನಿಯರು ರಾಜ್ಯಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಸಾಧನೆ ಮೆರೆದಿದ್ದಾರೆ.

ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿನಿ ಸಿಂಚನ ಎನ್. ಥ್ರೋಬಾಲ್ ನಲ್ಲಿ ಗೆದ್ದು ರಾಜ್ಯವನ್ನು ಪ್ರತಿನಿಧಿಸಲಿದ್ದಾಳೆ. ಅದೇ ರೀತಿ, ಪ್ರಥಮ ಪಿಯು ವಿದ್ಯಾರ್ಥಿನಿ ತನ್ಮಯಿ ಆರ್. ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.

ಉಳಿದಂತೆ ಪ್ರಥಮ ಪಿಯು ವಿದ್ಯಾರ್ಥಿನಿ ಅನನ್ಯ ಆರ್. ಕರಾಟೆ ಸ್ಪರ್ಧೆಯಲ್ಲಿ ಮೂರನೇ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾಳೆ.
ಸಾಧನೆ ಮೆರೆದ ಕ್ರೀಡಾಪಟುಗಳನ್ನು ಕಾಲೇಜಿನ ಅಧ್ಯಕ್ಷರಾದ ಜಯಚಂದ್ರ ರಾಜು ಪಿ. ಕಾರ್ಯದರ್ಶಿಗಳಾದ ಸೋನಿಯಾ ಉಮಾಪತಿ, ವ್ಯವಸ್ಥಾಪಕ ನಿರ್ದೇಶಕರಾದ ಗೌತಮ್ ರಾಜು, ಅಭಿವೃದ್ಧಿ ನಿರ್ದೇಶಕರಾದ ರತ್ನಾಕರ್ ಶಾನ್ಭಾಗ್, ಪ್ರಾಂಶುಪಾಲರಾದ ಮೋಹನ್ ಸಿ.ಆರ್., ದೈಹಿಕ ಶಿಕ್ಷಣ ನಿರ್ದೇಶಕರಾದ ಶಶಿರಾಜ್ ಹಾಗೂ ಕಾಲೇಜಿನ ಬೋಧಕ-ಭೋದಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.