ರೈತರ ಹೋರಾಟಕ್ಕೆ ಸಂಪೂರ್ಣ ಬೆಂಬಲ, ರಾಜ್ಯ ಸರ್ಕಾರ ನೀರು, ವಿದ್ಯುತ್ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲ
ಚಾಮರಾಜನಗರ: ಮಖ್ಯಮಂತ್ರಿ ಸಿದ್ದರಾಮಯ್ಯನವರ ರಾಜ್ಯ ಸರ್ಕಾರ ಒಂದುತರ ಬಂಡೆ ಸರ್ಕಾರವಾಗಿದ್ದು, ನೀರು, ವಿದ್ಯುತ್ ಪೊರೈಕೆಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಎನ್.ಮಹೇಶ್ ಆರೋಪಿಸಿದರು.
ನಗರದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರುಸೇನೆ, ರಾಜ್ಯ ಕಬ್ಬು ಬೆಳೆಗಾರರ ಸಂಘ ಮತ್ತು ವಿದ್ಯುತ್ ಪಂಪ್ ಸೆಟ್ ಬಳಕೆದಾರರು ವಿದ್ಯುತ್ ಧೋರಣಿಯನ್ನು ಖಂಡಿಸಿ ೫ ದಿನವು ನಡೆಸುತ್ತಿರುವ ಅನಿರ್ದಿಷ್ಠಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ಅವರು ಭಾಗವಹಿಸಿ ಬೆಂಬಲ ಸೂಚಿಸಿ ಮಾತನಾಡಿದರು. ರಾಜ್ಯ ಸರ್ಕಾರ ಕೃಷಿ ೧೦ ಗಂಟೆ ವಿದ್ಯುತ್ ನೀಡಬೇಕು ಅಲ್ಲದೆ ಸರ್ಕಾರವೇ ಪ್ರತಿದಿನ ಕೃಷಿ ಪಂಪ್‌ಸೆಟ್‌ಗಳಿಗೆ ೭ ಗಂಟೆ ವಿದ್ಯುತ್ ಕೊಡುವುದಾಗಿ ಆದೇಶ ಮಾಡಿತು ಅದು ಉಲ್ಲಂಘನೆಯಾಗಿದೆ. ವಿದ್ಯುತ್ ಕಣ್ಣಮುಚ್ಚಾಲೆಯಿಂದ ಆಹಾರ ಉತ್ಪಾದನೆ ಮೇಲೆ ದುಷ್ಷಪರಿಣಾಮ ಬೀರತ್ತದೆ. ಆಹಾರ ಉತ್ಪಾದನೆ ಕೊರತೆಯಾಗುತ್ತದೆ. ಇವೆಲ್ಲವೂ ಗೊತ್ತಿದ್ದರೂ ಕೂಡ ಸರ್ಕಾರ ಎಚ್ಚರಗೊಂಡಿಲ್ಲದಿದ್ದರುವುದು ವಿಷಾಧಕರ ಸಂಗತಿ ಎಂದು ದೂರಿದರು.
ಕಾವೇರಿ ನೀರು ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಎಷ್ಟು ಸೋತಿದೆಯೋ ಅಷ್ಟೇ ಸೋಲು ವಿದ್ಯುತ್ ವಿಚಾರದಲ್ಲೂ ಆಗಿದೆ. ಇದೊಂತರ ಬಂಡೆ ಸರ್ಕಾರ. ಎಷ್ಠೆ ತಲೆ ಚಚ್ಚಿಕೊಂಡರು ತಲೆಗೆ ಏಟು ಬೀಳುತ್ತೆ. ಈ ಬಂಡೆ ಸರ್ಕಾರವಾಗಲು ಕಾರಣ ಏನುಗೊತ್ತೆ ? ರಾಜ್ಯದ ಮಹಾಜನತೆ ೧೩೬ ಸೀಟನ್ನು ಗೆಲ್ಲಿಸಿಕೊಟ್ಟಿದ್ದಾರೆ ಆ ಮದ ಕಾಂಗ್ರೆಸ್‌ನವರಿಗೆ ಏರಿದೆ ಅದಕ್ಕೆ ರೈತರ ಸಮಸ್ಯೆ ಅರ್ಥವಾಗುತ್ತಿಲ್ಲ. ಪ್ರಕೃತಿ ವಿಕೋಪಗಳು ಆಗಬಹುದು, ಬಿಡಬಹುದು ಎಂಬುದರ ಬಗ್ಗೆ ಚಿಂತನೆ ಮಾಡುತ್ತಿಲ್ಲ. ಮಳೆಯ ಅಭಾವವಾಗುತ್ತದೆ, ಬರಗಾಲ ಬರುತ್ತದೆ ಎಂದು ತಜ್ಞರು ಮೇ, ಜೂನ್ ನಲ್ಲಿ ಹೇಳಿದರು. ರಾಜ್ಯ ಸರ್ಕಾರ ಸಿದ್ದತೆ ಮಾಡಿಕೊಳ್ಳಬೇಕಿತ್ತು. ಮುನ್ನೆಚ್ಚರಿಕೆ ವಹಿಸಲಿಲ್ಲ ಈಗ ಸಿದ್ದತೆ ಮಾಡಿಕೊಳ್ಳಲು ಹೊರಟಿದ್ದಾರೆ. ಆದುದ್ದರಿಂದ ಇಂದಿನ ಎಲ್ಲ ಸಮಸ್ಯೆಗಳಿಗೂ ಸರ್ಕಾರವೇ ಕಾರಣವಾಗಿದೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯ ಸರ್ಕಾರ ಒಂದು ಸಾವಿರ ಮೆಗಾವ್ಯಾಟ್ ಅಲ್ಲ ೨ ಸಾವಿರ ಮೆಗಾವ್ಯಾಟ್‌ನ್ನು ಎಲ್ಲಿಂದಾದರೂ ಖರೀದಿಸಿ ನುಡಿದಂತೆ ಕೃಷಿ ಪಂಪ್‌ಸೆಟ್ ೭ ಗಂಟೆ ವಿದ್ಯುತ್ ನೀಡಬೇಕು ಎಂದು ಆಗ್ರಹಿಸಿದರು.
ಪೂರ್ಣ ಬಹುಮತದ ಸರ್ಕಾರ ಬೇಡ : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶ, ರಾಜ್ಯಕ್ಕೆ ಪೂರ್ಣ ಬಹುಮತ ಕೊಡೊದು ಅಪಾಯ. ನಮ್ಮ ದೇಶದಲ್ಲಿ ಪೂರ್ಣ ಬಹುಮತವನ್ನ ಯಾವ ಪಕ್ಷಕ್ಕು ಕೊಡಬಾರದು.
ಅಗತ್ಯಕ್ಕೆ ತಕ್ಕಷ್ಟು ಮಾತ್ರ ಬಹುಮತ ಇದ್ದರೆ ಜನತೆ ಹೇಳಿದಂಗೆ ಕೇಳ್ತಾರೆ ಇಲ್ಲ ಅಂದರೆ ಇಂದಿನ ರಾಜ್ಯ ಸರ್ಕಾರ ಪರಿಸ್ಥಿತಿ ಆಗುತ್ತದೆ. ಜನರ ಸಮಸ್ಯೆ ಬಗೆಹರಿದೋದಿಲ್ಲ ಎಂದರು.
ಧರಣಿಯಲ್ಲಿ ವಕೀಲ ರಾಜೇಂದ್ರ , ಸೋಮಣ್ಣ ಉಪ್ಪಾರ್, ಪರ್ವತ್ ರಾಜು, ಹೊನ್ನೂರು ಪ್ರಕಾಶ್, ಹಳ್ಳಿಕೆರೆಹುಂಡಿ ಭಾಗ್ಯರಾಜ್, ನಾಗರಾಜು, ಮಹದೇವಪ್ಪ, ಮಹೇಶ್ ಕುಮಾರ್, ನಾಗೇಂದ್ರ, ಹಾಲಹಳ್ಲಿಮಹೇಶ್, ಮಲ್ಲು, ಸಂತೋಷ್, ದಯಾನಂದ ಇತರರು ಭಾಗವಹಿಸಿದ್ದರು