ರೇನಾ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಘ ಪ್ರಗತಿಯತ್ತ : ಎ.ಎಸ್. ಮಹದೇವಸ್ವಾಮಿ ವಿಶ್ವಾಸ

ಚಾಮರಾಜನಗರ: ರೇನಾ ವಿವಿದೋದ್ದೇಶ ಸೌಹಾರ್ದ ಸಹಕಾರ ಸಂಘವು ಕಳೆದ ಮೂರ್ನಾಲ್ಕು ವರ್ಷಗಳಿಗಿಂತ ಈ ವರ್ಷÀ ಪ್ರಗತಿಯತ್ತ ಸಾಗುತ್ತಿದ್ದು, ಮುಂದಿನ ವರ್ಷಕ್ಕೆ ಷೇರುದಾರರಿಗೆ ಲಾಭಾಂಶವನ್ನು ವಿತರಣೆ ಮಾಡುವುದಾಗಿ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಎ.ಎಸ್. ಮಹದೇವಸ್ವಾಮಿ ತಿಳಿಸಿದರು.

ನಗರದ ಮೇಘ ಕಾಂಪ್ಲೆಕ್ಸ್‍ನಲ್ಲಿರುವ ರೇನಾ ವಿವಿದೊದ್ದೇಶಿತ ಸೌಹಾರ್ದ ಸಹಕಾರಿ ಸಂಘದ 2022-23ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಉದ್ಗಾಟಿಸಿ ಅವರು ಮಾತನಾಡಿದರು.

ಕಳೆದ ಮೂರು ವರ್ಷಗಳಿಗೆ ಹೋಲಿಕೆ ಮಾಡಿದರೆ ಸಂಘದಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ. ಬಹಳಷ್ಟು ಜನರು ಸಾಲ ಪಡೆದುಕೊಂಡವರು ಮರು ಪಾವತಿ ಮಾಡುತ್ತಿದ್ದಾರೆ. ಅಲ್ಲದೇ ಷೇರು ಪಡೆದುಕೊಂಡು ಸದಸ್ಯತ್ವವನ್ನು ನೀಡುತ್ತಿದ್ದೇವೆ. ಕಳೆದ 9 ತಿಂಗಳ ಅವಧಿಯಲ್ಲಿ ಲಾಭದತ್ತ ನಮ್ಮ ಸಂಘ ಮುನ್ನಡೆಯುತ್ತಿದೆ. ಮುಂದಿನ ವಾರ್ಷಿಕ ಸಭೆಯಲ್ಲಿ ಸದಸ್ಯರಿಗೆ ಷೇರು ಡಿವೆಂಡಿಟ್ ನೀಡುವ ವಿಶ್ವಾಸವನ್ನು ಅಧ್ಯಕ್ಷ ಮಹದೇವಸ್ವಾಮಿ ವ್ಯಕ್ತಪಡಿಸಿದರು.

ಯಾವುದೇ ಸಂಘವನ್ನು ಮುನ್ನಡೆಸಲು ಅತ್ಮವಿಶ್ವಾಸ ಮುಖ್ಯ. ಅಲ್ಲದೇ ಸದಸ್ಯರು ಹಾಗು ನಿರ್ದೇಶಕರು ಸಂಘ ನಮ್ಮದು ಎಂಬ ಭಾವನೆಯೊಂದಿಗೆ ಸಂಬಂಧವನ್ನು ವೃದ್ದಿಸಿಕೊಂಡರೆ ಇನ್ನು ಹೆಚ್ಚಿನಲಾಭ ಗಳಿಸಲು ಸಾಧ್ಯವಿದೆ. ಹೀಗಾಗಿ ನಿರ್ದೇಶÀಕರು ಹಾಗೂ ಸದಸ್ಯರು ಸಕ್ರಿಯಯವಾಗಿ ಸಂಘದ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಸಂಘದ ಉಪಾಧ್ಯಕ್ಷ ಸಿ. ಶಂಕರ್ ಮಾತನಾಡಿ, ಸಂಘವು ಅಧ್ಯಕ್ಷರು ಹಾಗೂ ಆಡಳಿತ ಮಂಡಲಿಯ ದೃಢ ನಿರ್ಧಾರದಿಂದ ಶಕ್ತಿಯುತವಾಗಿ ಬೆಳೆಯುತ್ತಿದೆ. ಇದನ್ನು ಮತ್ತಷ್ಟು ಅಭಿವೃದ್ದಿಪಡಿಸಲು ವಿವಿಧ ಯೋಜನೆಗಳನ್ನು ಆಳವಡಿಸಿಕೊಳ್ಳಬೇಕಾಗಿದೆ. ನಿಮ್ಮೇಲ್ಲರ ಸಹಕಾರ ಅತ್ಯಗತ್ಯವಾಗಿದೆ ಎಂದರು.

ನಿರ್ದೇಶಕರಾದ ಕೆ.ಎಂ. ಮಂಜುನಾಥ, ಕೆ.ಜಿ. ಪ್ರಕಾಶ್ ಮಾತನಾಡಿ, ಸಂಘ ಬಲಿಷ್ಠವಾದರೆ ಅದಲ್ಲಿರುವ ಎಲ್ಲರು ಸಹ ಬಲಿಷ್ಠವಾಗಿ ಬೆಳೆಯಲು ಸಾಧ್ಯವಿದೆ. ಉತ್ತರಕರ್ನಾಟಕ ಹಾಗೂ ಕರಾವಳಿ ಪ್ರದೇಶದಲ್ಲಿ ಸೌಹಾರ್ದ ಸಂಘಗಳು ಕೋಟಿಗಳನ್ನು ಮೀರಿ ವ್ಯವಹಾರ ಮಾಡುತ್ತಿದ್ದೆ. ಈ ನಿಟ್ಟಿನಲ್ಲಿ ನಮ್ಮ ಭಾಗದ ಸಂಘವನ್ನು ಬೆಳೆಸಲು ಎಲ್ಲರು ಕೈಜೋಡಿಸೋಣ ಎಂದರು.

ಮೈಸೂರು ವಿಭಾಗೀಯ ಸೌಹಾರ್ದ ಅಧಿಕಾರಿ ಚಂದ್ರಶೇಖರಯ್ಯ ಸನ್ಮಾನ ಸ್ವೀಕರಿಸಿ ಮಾತನಾಡಿ, ಸೌಹಾರ್ದ ಸಹಕಾರ ಸಂಘಗಳ ಬೆಳವಣಿಗೆಯಿಂದ ಸದಸ್ಯರ ಅಭಿವೃದ್ದಿ ಇದೆ. ಪರಸ್ಪರ ಸಹಕಾರ ಮತ್ತು ವಿಶ್ವಾಸವನ್ನುಟ್ಟು ಸಹಕಾರದ ಕಾಯ್ದೆಯ ಚೌಕಟ್ಟಿನಲ್ಲಿ ಮುನ್ನಡೆಯಾದರೆ, ಯಶಸ್ಸು ನಮ್ಮದಾಗುತ್ತದೆ. ರೇನಾ ಸಹಕಾರ ಸಂಘ ಅಭಿವೃದ್ದಿಯತ್ತ ಸಾಗಲಿ ಎಂದು ಆಶಿಸಿದರು.

ಸಭೆಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನುಷ ಪಿ.ಎಸ್. ವಾರ್ಷಿಕ ವರದಿಯನ್ನು ಮಂಡಿಸಿದರು. ನಿರ್ದೇಶಕರಾದ ಕೆ.ಜಿ. ಪ್ರಕಾಶ್, ಸಿ.ಎಸ್. ರೇಣುಕಾ ಪ್ರಸಾದ್, ಜಿ. ಸೋಮಣ್ಣ, ಕೆ.ಎಂ.ಮಂಜುನಾಥ್, ವೈ. ಅಕ್ಷಯ್, ಎಚ್.ಎಂ. ಮಹದೇವಸ್ವಾಮಿ, ಎನ್.ಸಿ. ಅಶ್ವಿನ್, ಶೋಭಾ ರವಿ, ಹಾಗೂ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *