ಚಾಮರಾಜನಗರ: ರೋಟರಿ ಸಂಸ್ಥೆ ವತಿಯಿಂದ ಪ್ರತಿ ಮಾಹೆ ಮೊದಲ ಭಾನುವಾರ ನಡೆಯುವ ಕಣ್ಣಿನ ಉಚಿತ ತಪಾಸಣಾ ಶಿಬಿರ ಯಶಸ್ವಿಯಾಗಿ ನಡೆಯಿತು. 335 ಮಂದಿ ಕಣ್ಣಿನ ತಪಾಸಣೆಗೆ ಒಳಪಟ್ಟರೆ, ಕಣ್ಣಿನ ಪೊರೆಯುಳ್ಳ 170 ಮಂದಿಯನ್ನು ಶಸ್ತ್ರ ಚಿಕಿತ್ಸೆಗೆ ತಮಿಳುನಾಡಿ ಕೊಯಮತ್ತೂರಿನಲ್ಲಿರುವ ಅರವಿಂದ್ ಕಣ್ಣಾಸ್ಪತ್ರೆಗೆ ಕರೆದೊಯ್ಯಲಾಯಿತು.
ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ರೋಟರಿ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮ, ಅರವಿಂದ ಕಣ್ಣಿನ ಆಸ್ಪತ್ರೆ ಇವರ ಸಂಯುಕ್ತಾಶ್ರಯದಲ್ಲಿ ಶಿಬಿರ ನಡೆಯಿತು.
ರೋಟರಿ ಅಧ್ಯಕ್ಷ ಸಿ.ಎನ್. ಚಂದ್ರಪ್ರಭ ಜೈನ್ ಮಾತನಾಡಿ, ಕಣ್ಣಿನ ದೃಷ್ಠಿ ಎಲ್ಲರಿಗೂ ಮಹತ್ವದ್ದು, ಅದರಲ್ಲೂ ವಿಶೇಷವಾಗಿ ಮಹಿಳೆಯರು, ವಯೋವೃದ್ದರು ದೃಷ್ಟಿಯನ್ನು ಕಳೆದುಕೊಳ್ಳುತ್ತಿದ್ದಾರೆ. 45 ವರ್ಷದ ದಾಟುತ್ತಿದ್ದಂತೆ ಕಣ್ಣಿನ ಸಮಸ್ಯೆ ಉಲ್ಬನಿಸುತ್ತದೆ. ಇದರ ಬಗ್ಗ ಎಚ್ಚರಿಕೆ ವಹಿಸಬೇಕು. ಆಗಿದ್ದಂಗೆ ಕಣ್ಣಿನ ತಪಾಸಣೆ ಮಾಡಿಸಿಕೊಂಡು ಕನ್ನಡ ಹಾಗೂ ವೈದ್ಯರ ಸಲಹೆಗಳನ್ನು ಪಡೆದು ಚಿಕಿತ್ಸೆ ಪಡೆದು ಕೊಂಡರೆ ಕಣ್ಣಿನ ದೃಷ್ಟಿಯನ್ನು ಚೆನ್ನಾಗಿ ಇಟ್ಟುಕೊಳ್ಳಬಹುದು ಎಂದರು.
ಆರ್ಥಿಕವಾಗಿ ದುರ್ಬಲರಾಗಿದ್ದು ದಿನನಿತ್ಯ ಜೀವನದಲ್ಲಿ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಅವರಿಗೆ ಅನುಕೂಲ ಕಲ್ಪಿಸಲು ರೋಟರಿ ಸಂಸ್ಥೆಯು ಪ್ರತಿ ತಿಂಗಳು ಮೊದಲನೆಯ ಭಾನುವಾರ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಅಯೋಜಿಸಿದ್ದು, ಇದರ ಸದುಪಯೋಗವನ್ನು ಜಿಲ್ಲೆಯ ಜನರು ಪಡೆದುಕೊಳ್ಳಬೇಕು ಎಂದರು.
ಶಿಬಿರದಲ್ಲಿ ರೋಟರಿ ಕಾರ್ಯದರ್ಶಿ ಅಬ್ದುಲ್ ಅಜೀಜ್ (ದಿನಾ) ರೋಟರಿಯನ್‍ಗಳಾದ ಆರ್ ಪ್ರಕಾಶ್, ಎಸ್ ಸುರೇಶ್, ವಿ ಪ್ರಭಾಕರ್, ಆರ್. ಎಂ. ಸ್ವಾಮಿ, ಜಿ ಆರ್ ಅಶ್ವಥ್ ನಾರಾಯಣ್, ಸಿ. ಎ . ನಾರಾಯಣ್, ಶ್ರೀನಿವಾಸನ್, ರಾಮಸಮುದ್ರ ನಾಗರಾಜು, ಶ್ರೀನಿವಾಸ್ ಶೆಟ್ಟಿ , ಎಸ್‍ಆರ್‍ಎಸ್ ಶ್ರೀನಿವಾಸ್ , ಎಂ ಕಮಲ್ ರಾಜ್, ಬಿ ಕೆ ಮೋಹನ್ ಹಾಗೂ ಅರವಿಂದ ಕಣ್ಣಿನ ಆಸ್ಪತ್ರೆಯ ಪಿಆರ್‍ಓ ಬಿ ವಿಜಯಕಾಂತ್ ರೋಟರಿ ಮಾಜಿ ಅಧ್ಯಕ್ಷ ಕೆಎಂ.ಮಹದೇವಸ್ವಾಮಿ, ಕಾರ್ಯದರ್ಶಿ ಕಾಗಲವಾಡಿಚಂದ್ರು, ಪ್ರಭಾಕರ್, ಅಶೋಕ್, ಉಲ್ಲಾಸ್, ಪ್ರಕಾಶ್, ಬಿಕೆ ಮೋಹನ್, ಶ್ರೀನಿವಾಸ್, ಸಮಾಜ ಸೇವಕ ಡಾ. ಪರಮೇಶ್ವರಪ್ಪ, ಭವಾನಿ ಶಂಕರ್ ರಾವ್ ಮೊದಲಾಧವರು ಇದ್ದರು.