ಬಿ.ವೈ.ವಿಜಯೇಂದ್ರ ಹುಟ್ಟುಹಬ್ಬ : ಶ್ರೀಚಾಮರಾಜೇಶ್ವರಸ್ವಾಮಿಗೆ ವಿಶೇಷಪೂಜೆ
ಚಾಮರಾಜನಗರ: ಶಾಸಕರಾದ ಬಿ.ವೈ ವಿಜಯೇಂದ್ರ ಅವರ ಹುಟ್ಟುಹಬ್ಬದ ಅಂಗವಾಗಿ ಅವರ ಅಭಿಮಾನಿ ಬಳಗದಿಂದ ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ವಿಜಯೇಂದ್ರ ಅಭಿಮಾನಿ ಬಳಗದ ಮೂಡ್ಲುಪುರ ನಂದೀಶ್ ಅವರ ನೇತೃತ್ವದಲ್ಲಿ ನಗರದ ಜೋಡಿರಸ್ತೆಯಲ್ಲಿರುವ ಮೂಡಲಧ್ವನಿ ವೃದ್ದಾಶ್ರಮದಲ್ಲಿ ವೃದ್ದರಿಂದ ಕೇಕ್ ಕತ್ತರಿಸುವ ಮೂಲಕ ವಿಜಯೇಂದ್ರ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು. ನಂತರ ವೃದ್ದರಿಗೆ ಉಪಹಾರ ವ್ಯವಸ್ಥೆ ಮಾಡಲಾಯಿತು. ನಂತರ ಶ್ರೀಚಾಮರಾಜೇಶ್ವರ ದೇವಸ್ಥಾನದಲ್ಲಿ ವಿಜಯೇಂದ್ರ ಅವರ ಹೆಸರಿನಲ್ಲಿ ಆರ್ಚನೆ ಮಾಡಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಕಾರ್ಯಕ್ರಮದ ನೇತೃತ್ವ ವಹಿಸಿದ ಮೂಡ್ಲುಪುರ ನಂದೀಶ್ ಮಾತನಾಡಿ, ಜನಪ್ರಿಯ ಶಾಸಕರಾದ ವಿಜಯೇಂದ್ರ ಅವರಿಗೆ ಶ್ರೀಚಾಮರಾಜೇಶ್ವರ, ಶ್ರೀಚಾಮುಂಡೇಶ್ವರಿ ಹೆಚ್ವು ಆರೋಗ್ಯ, ಆಯಸ್ಸು ಕರುಣಿಸಲಿ ಮುಂದಿನದಿನಗಳಲ್ಲಿ ರಾಜ್ಯ ಮುಖ್ಯಮಂತ್ರಿಯಾಗಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಶಿವರಾಜ್ ಸಿದ್ದಯ್ಯನಪುರ, ಶ್ರೀನಾಥ್, ಶಿವು, ಮಹೇಶ್ ಕುಮಾರ್, ನಾಗಮಲ್ಲೇಶ್, ಮಹದೇವಸ್ವಾಮಿ, ಮಹೇಶ್, ನಿರೇಶ್, ಸಚಿ, ಪ್ರಸಾದ್ ಡೈರಿ, ಜಯಂತ್, ಮೋಹನ್, ಮಲ್ಲು ಇತರರು ಹಾಜರಿದ್ದರು.