ವಿವಿಧ ಭೋಧಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಚಾಮರಾಜನಗರ: ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕೇಂದ್ರ ಸರ್ಕಾರದ ಮಿಷನ್ ವಾತ್ಸಲ್ಯ-2022ರ ಮಾರ್ಗಸೂಚಿಯನ್ವಯಡಿ ಚಾಮರಾಜನಗರ ಜಿಲ್ಲೆಯಲ್ಲಿರುವ ಬಾಲಕರ ಹಾಗೂ ಬಾಲಕಿಯರ ಸರ್ಕಾರಿ ಬಾಲಮಂದಿರಗಳಲ್ಲಿರುವ ನಿವಾಸಿ ಮಕ್ಕಳಿಗೆ ಇಂಗ್ಲೀಷ್, ವಿಜ್ಞಾನ ಗಣಿತ ಹಾಗೂ ಪಠ್ಯೇತರ ಚಟುವಟಿಕೆಗಳಾದ ಸಂಗೀತ, ಕ್ರಾಪ್ಟ್, ಕಲಾ ವಿಷಯಗಳಿಗೆ ಬೋಧಕರ ನೇಮಕ್ಕಾಗಿ ಅರ್ಜಿ ಆಹ್ವಾನಿಸಿದೆ.

ಇಂಗ್ಲೀಷ್ ಭೋದಕರ 2 ಹುದ್ದೆ ಖಾಲಿ ಇದ್ದು, ಬಿ.ಎ ಪದವಿ ಅಥವಾ ಎಂಎ ಪದವಿ (ಐಚ್ಛಿಕ ಭಾಷೆ ಇಂಗ್ಲೀಷ್) ಜೊತೆಗೆ ಬಿಎಡಿ ಪದವಿ ಹೊಂದಿರಬೇಕು. ಗಣಿತ ಮತ್ತು ವಿಜ್ಞಾನ ಭೋದಕರ 2 ಹುದ್ದೆ ಖಾಲಿ ಇದ್ದು, ಬಿಎಸ್ಸಿ ಪದವಿ ಅಥವಾ ಎಂಎಸ್ಸಿ ಪದವಿ (ಐಚ್ಛಿಕ ಭಾಷೆ ಗಣಿತ ಮತ್ತು ವಿಜ್ಞಾನ) ಜೊತೆಗೆ ಬಿಎಡಿ ಪದವಿ ಹೊಂದಿರಬೇಕು. ಸಂಗೀತಾ/ಕ್ರಾಪ್ಟ್/ಕಲಾ ಭೋದಕರ 2 ಹುದ್ದೆ ಖಾಲಿ ಇದ್ದು, ಸಂಗೀತಾ, ಕ್ರಾಪ್ಟ್, ಕಲಾ ವಿಷಯಗಳಲ್ಲಿ ಪದವಿ ಹೊಂದಿರಬೇಕು.

ಅರ್ಹ ಅಭ್ಯರ್ಥಿಗಳು ಮೂಲ ದಾಖಲಾತಿಯೊಂದಿಗೆ ಅರ್ಜಿಯನ್ನು ಚಾಮರಾಜನಗರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಚೇರಿಗೆ (ದೂ.ಸಂ. 08226-222354) ಡಿಸೆಂಬರ್ 11ರ ಸಂಜೆ 5.30 ಗಂಟೆಯೊಳಗೆ ಸಲ್ಲಿಸಬೇಕು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *