ಚಾಮರಾಜನಗರ: ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಸಿ. ಪುಟ್ಟರಂಗಶೆಟ್ಟಿ ಅವರು ಹುಟ್ಟುಹಬ್ಬವನ್ನು ತಾಲೂಕಿನ ವೆಂಕಟಯ್ಯನಛತ್ರ ಸರ್ಕಲ್ ನಲ್ಲಿ ಅವರ ಅಭಿಮಾನಿಗಳು ಬಹಳ ವಿಜೃಂಭಣೆಯಿಂದ ಆಚರಣೆ ಮಾಡಿದರು.
ವೆಂಕಟಯ್ಯನ ಛತ್ರದ ಅರಳಿಮರದ ಸರ್ಕಲ್ನಲ್ಲಿ ಶಾಸಕ ಪುಟ್ಟರಂಗಶೆಟ್ಟರ ಬೃಹತ್ ಫೆಕ್ಸ್ ಅಳವಡಿಸಿ, ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ. ಸಾಯಂಕಾಲ ವೆಂಕಟಯ್ಯನಛತ್ರ ಹಾಗೂ ಹೊಸೂರು ಗ್ರಾಮಸ್ಥರು ಕೇಕ್ ಕತ್ತರಿಸಿ, ಹುಟ್ಟು ಹಬ್ಬದ ಶುಭ ಕೋರಿ, ಬಳಿಕ ಸಾರ್ವಜನಿಕರಿಗೆ ಸಿಹಿ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಹೊಸೂರು ಜಗದೀಶ್, ಸರಳ ಸಜ್ಜನಿಕೆ ವ್ಯಕ್ತಿತ್ವವುಳ್ಳ ಸಾಮಾಜಿಕ ಹರಿಕಾರರು, ಬಡವರ ಬಂಧು ಶಾಸಕ ಪುಟ್ಟರಂಗಶೆಟ್ಟರು ನಾಲ್ಕನೇ ಬಾರಿ ಶಾಸಕರಾಗಿ ಕ್ಷೇತ್ರದ ಅಭಿವೃದ್ದಿಗೆ ದುಡಿಯುತ್ತಿದ್ದು, ಮುಂದಿನ ದಿನಗಳಲ್ಲಿ ಅವರಿಗೆ ಸಿಎಂ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಚಿವರಾಗುವ ಅವಕಾಶವನ್ನು ಭಗವಂತ ಕರುಣಿಸಲಿ. ಉನ್ನತ ಸ್ಥಾನ ಮಾನ ದೊರೆತು ಇನ್ನು ಹೆಚ್ಚಿನ ಸೇವೆ ಜಿಲ್ಲೆಯ ಜನರಿಗೆ ಹಾಗೂ ಕ್ಷೇತ್ರಕ್ಕೆ ದೊರಕುವಂತಾಗಲಿ ಎಂದು ಶುಭ ಕೋರಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಸೋಮಣ್ಣ, ಎಪಿಎಂಸಿ ನಿರ್ದೇಶಕ ಸೋಮೇಶ್, ಗ್ರಾ.ಪಂ. ಉಪಾಧ್ಯಕ್ಷ ಮಂಜುನಾಥ, ಸದಸ್ಯರಾದ ರಂಗಸ್ವಾಮಿ, ಬಂಗಾರನಾಯಕ, ಶೇಖರ್ ಪಿ., ಕೆಂಪರಾಜು, ಬಂಗಾರು, ಶಿವಮಲ್ಲು, ಚಿಕ್ಕಣ್ಣ, ಗೋವಿಂದಶೆಟ್ಟಿ, ವೆಂಕಟೇಶ, ಎಪಿಎಂಸಿ ಸದಸ್ಯ ಸೋಮೇಶ, ಮುಖಂಡರಾದ ಚಿಕ್ಕಮೋಳೆ ಮಹೇಶ್, ಶಾಂತಪ್ಪ, ರವಿ ಬಿಸಲವಾಡಿ, ಕುಮಾರ್, ಹೊಸೂರು ರವಿ, ಲೋಕೇಶ್. ಮಹದೇವ್, ಗೋವಿಂದು, ರಂಗಸ್ವಾಮಿ, ವೆಂಕಟಯ್ಯನಛತ್ರ, ಮತ್ತು ಹೊಸೂರು ಗ್ರಾಮಸ್ಥರು ಇದ್ದರು.