ಚಾಮರಾಜನಗರ: ಕಠಿಣ ವಿದ್ಯಾಭ್ಯಾಸ ಮಾಡಿದರೆ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿದೆ ಎಂದು ಚಾಮರಾಜನಗರ ವಿಶ್ವವಿದ್ಯಾಲಯ ಕುಲಪತಿ ಡಾ.ಎಂ.ಆರ್.ಗಂಗಾಧರ್ ತಿಳಿಸಿದರು.

ನಗರದ ಜೋಡಿ ರಸ್ತೆಯಲ್ಲಿರುವ ಜೆಎಸ್ಎಸ್ ಶಿಕ್ಷಣ ಮಹಾವಿದ್ಯಾಲಯ ಬಿಎಡ್ ಕಾಲೇಜ್. ವಿದ್ಯಾರ್ಥಿ ಸಂಘದ ಸಮರೋಪ ಸಮಾರಂಭ ಹಾಗೂ ಅತಿಮ ಬಿಎಡ್ ಪ್ರ.ಶಿಕ್ಷಣಾರ್ಥಿಗಳಿಗೆ ಏರ್ಪಡಿಸಿದ ಬೀಳ್ಕೊಡುಗೆ ಸಮಾರಂಭವನ್ನು ಚಾಲನೆ ನೀಡಿ ಮಾತನಾಡಿದ ಅವರು, ಜೆಎಸ್ಎಸ್ ಶಿಕ್ಷಣ ಸಂಸ್ಥೆ, ರಾಜ್ಯ ಅಂತ ರಾಜ್ಯ, ದೇಶದ ವಿವಿಧ ಭಾಗಗಳಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಕೊಟ್ಟಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮೈಸೂರು ವಿಶ್ವವಿದ್ಯಾಲಯ ಗಣಕ ವಿಜ್ಞಾನಿ ವಿಭಾಗ ಪ್ರಾಧ್ಯಾಪಕ. ಡಾ, ಸುರೇಶ್ ಮಾತನಾಡಿ, ಪ್ರಶಿಕ್ಷಣಾರ್ಥಿಗಳು. ಎರಡು ವರ್ಷಗಳಿಂದ ನುರಿತ ಉಪನ್ಯಾಸಕರಿಂದ ಉತ್ತಮ ವಿದ್ಯಾಭ್ಯಾಸ ಕಲ್ತಿದ್ದೀರಿ, ಮುಂದೆ ನೀವು ಶಿಕ್ಷಕರಾಗಿ ಶಾಲೆಗಳಿಗೆ ಹೋದಾಗ ವಿದ್ಯಾರ್ಥಿಗಳಿಗೆ ನಗುಮುಖದಿಂದ ಉತ್ತಮ ವಿದ್ಯಾಭ್ಯಾಸ ಕಲಿಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸುವ ರೀತಿ ಬೋಧನೆ ಮಾಡಬೇಕು ಎಂದು ಸಲಹೆ ನೀಡಿದರು.
ಜೆಎಸ್ಎಸ್ ಶಿಕ್ಷಣ ಮಹಾವಿದ್ಯಾಲಯ. ಕಾಲೇಜಿನ ಪ್ರಾಂಶುಪಾಲ, ಪ್ರೊ, ಡಾ ಕೆ ಸಿ, ಬಸವಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ. ನಮ್ಮ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ಸಾವಿರಾರು ಮಂದಿ. ಜಿಲ್ಲೆ ಹೊರ ಜಿಲ್ಲೆ ರಾಜ್ಯ ಅಂತ ರಾಜ್ಯಗಳಲ್ಲಿ. ಶಿಕ್ಷಕರಾಗಿ ಉತ್ತಮ ಸೇವೆ ಮಾಡುತ್ತಿದ್ದಾರೆ. ಇಲ್ಲಿ ವಿದ್ಯಾಭ್ಯಾಸ ಜೊತೆಗೆ ಭಾರತೀಯ ಸಂಸ್ಕೃತಿ ಬಿಂಬಿಸುವ ಕಾರ್ಯಕ್ರಮಗಳನ್ನು ಹೇಳಿಕೊಡಲಾಗುತ್ತಿದೆ ಎಂದು ತಿಳಿಸಿದರು.
ಜೆ ಎಸ್ ಎಸ್ ಸಾರ್ವಜನಿಕ ಸಂಪರ್ಕ ಅಧಿಕಾರಿ ಆರ್ ಎಂ ಸ್ವಾಮಿ, ಕಾಲೇಜಿನ ಉಪನ್ಯಾಸಕ ರಾದ, ಎಸ್ ಎನ್ ರಾಜು, ಕೆಎಂ ಯೋಗೇಶ್, ಕೆಎಸ,ಸಿದ್ದರಾಜು, ಕೆಕೆ ಶಿವರಾಜ್ ಅರಸ್. ಸುರೇಶ ಡಿಎಸ್, ನಾಗರಾಜು, ಎನ್ ಎಂ ಮಲ್ಲೇಶ್, ಶ್ರೀಧರ್, ಸದಾನಂದ, ಶಿವಕುಮಾರ್, ಲಕ್ಷ್ಮಿ, ಗೀತಾ, ಹಾಜರಿದ್ದರು.