ಸಂಘದ ಬಲವರ್ಧನೆ ಹಾಗು ಗುತ್ತಿಗೆದಾರರ ಹಿತ ಕಾಯಲು ಬದ್ದ : ಚನ್ನಯ್ಯ

ಚಾಮರಾಜನಗರ: ಚಾಮರಾಜನಗರ ತಾಲೂಕು ಎಸ್ಸಿ, ಎಸ್ಟಿ ಗುತ್ತಿಗೆದಾರರ ಸಂಘದ ನೂತನ ಅಧ್ಯಕ್ಷರಾಗಿ ಕರಿನಂಜನಪುರ ಚನ್ನಯ್ಯ ಹಾಗೂ ಕಾರ್ಯದರ್ಶಿಯಾಗಿ ನಲ್ಲೂರು ಮಹದೇವಸ್ವಾಮಿ ಇಂದು ಅವಿರೋಧವಾಗಿ ಆಯ್ಕೆಯಾದರು.

ನಗರದ ಸಂಘದ ಕಚೇರಿಯಲ್ಲಿ ಜಿಲ್ಲಾ ಎಸ್ಸಿ,ಎಸ್ಟಿ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಎಂ.ಎಸ್.ಮಾದಯ್ಯ ಹಾಗೂ ತಾಲೂಕು ಸಂಘದ ಅಧ್ಯಕ್ಷ ಗೌರವಾಧ್ಯಕ್ಷರಾದ ಹರದನಹಳ್ಳಿ ಬಂಗಾರು ಅವರ ನೇತೃತ್ವದಲ್ಲಿ ನಡೆದ ಸಂಘದ ವಾರ್ಷಿಕ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಸಂಘದ ಅಧ್ಯಕ್ಷರಾಗಿ ಕರಿನಂಜನಪುರ ಚನ್ನಯ್ಯ, ಉಪಾಧ್ಯಕ್ಷರಾಗಿ ಗುಳಿಪುರ ದೊರೆಸ್ವಾಮಿ, ಕಾರ್ಯದರ್ಶಿಯಾಗಿ ನಲ್ಲೂರು ಮಹದೇವಸ್ವಾಮಿ, ಖಜಾಂಚಿಯಾಗಿ ಕೋಡಿಉಗನೆ ಪುರುಷೋತ್ತಮ್, ನಿರ್ದೇಶಕರಾದ ಸಿ.ಕೆ. ರವಿಕುಮಾರ್, ಸಿದ್ದಯ್ಯನಪುರ ಗೋವಿಂದರಾಜು, ಎಚ್.ಎಚ್. ನಾಗರಾಜು, ರಾಮಸಮುದ್ರದ ಎಂ. ನಾಗಬಸವಣ್ಣ, ಸಿದ್ದಯ್ಯನಪುರ ಹನುಮಂತು, ವೆಂಕಟೇಶ್, ಕೆಂಪನಪುರ ಮಣಿಕಂಠನಾಯಕ, ಕೆರಹಳ್ಳಿ ಸುಕುಮಾರ್, ನಲ್ಲೂರು ಡಿ. ನಾರಾಯಣಸ್ವಾಮಿ, ಗೂಳಿಪುರ ನಂಜುಂಡಸ್ವಾಮಿ ಅವರು ನೇಮಕ ಮಾಡಲಾಯಿತು.

ಎಸ್ಸಿ,ಎಸ್ಟಿ ಗುತ್ತಿಗೆದಾರರ ಹಿತ ಕಾಯಲು ಬದ್ದ : ಸರ್ಕಾರ ಯೋಜನೆಗಳನ್ನು ಎಸ್ಸಿ, ಎಸ್ಟಿ ಸಮುದಾಯದ ಗುತ್ತಿಗೆದಾರರಿಗೆ ಕಲ್ಪಿಸುವ ಜೊತೆಗೆ ತಾಲೂಕಿನನಲ್ಲಿ ಸಂಘಟನಾತ್ಮಕವಾಗಿ ಸಂಘವನ್ನು ಮುನ್ನಡಸೋಣ. ಸಂಘದ ಎಲ್ಲಾ ಸದಸ್ಯರು ಹಾಗೂ ಪದಾಧಿಕಾರಿಗಳ ವಿಶ್ವಾಸದೊಂದಿಗೆ ಗುತ್ತಿಗೆ ಕಾಮಗಾರಿಗಳು ಎಲ್ಲಾ ಅರ್ಹ ಗುತ್ತಿಗೆದಾರರಿಗೆ ದೊರೆಯುವಂತೆ ಮಾಡುವುದು ಹಾಗೂ ಸಂಘದ ಅಭಿವೃದ್ದಿ ಜೊತೆಗೆ ಸಮುದಾಯವನ್ನು ಮುನ್ನಡೆಸುವ ಮೂಲಕ ಮಾದರಿ ಸಂಘವನ್ನಾಗಿ ಮಾಡಲು ಎಲ್ಲರು ಸಹಕಾರ ನೀಡಬೇಕು. ಎಸ್ಸಿ, ಎಸ್ಟಿ ತಾಲೂಕು ಸಂಘದ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲ ಪದಾಧಿಕಾರಿಗಳು ಹಾಗು ಸದಸ್ಯರಿಗೆ ನನ್ನ ಅಭಾರಿಯಾಗಿದ್ದೇನೆ ಎಂದು ಚನ್ನಯ್ಯ ತಿಳಿಸಿದರು.
ಸಭೆಯಲ್ಲಿ ಸಂಘ ಸದಸ್ಯರು ಹಾಗೂ ಪದಾಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *