ಚಾ.ನಗರದಲ್ಲಿ ಸಂವಿಧಾನ ದಿನಾಚರಣೆ ಅಂಗವಾಗಿ ಪ್ರಜಾಪ್ರಜಾಪ್ರಭುತ್ವ ಮತ್ತು ಸಾಮರಸ್ಯ ಸಮಾಜ ಕುರಿತ ಚಿಂತನ ಸಭೆ
ದಸರಾ ಅಂಬಾರಿ ಆನೆ ಅರ್ಜುನ್ ವೀರ ಮರಣ ಹಿನ್ನೆಲೆ ಶ್ರದ್ದಾಂಜಲಿ ಅರ್ಪಿಸಿದ ಸಭೆ
ಚಾಮರಾಜನಗರ: ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದುಕೊಟ್ಟಿರುವ ಸಂವಿಧಾನ ನಮ್ಮ ದೇಶದ ಧರ್ಮ ಗ್ರಂಥವಾಗಿದೆ ಎಂದು ನಿವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಆರ್.ರಾಜು ಹೇಳಿದರು
ನಗರದ ವರನಟ ಡಾ.ರಾಜ್ ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಸರ್ವೋದಯ ಸಾಮರಸ್ಯ ವೇದಿಕೆಯ ವತಿಯಿಂದ ಮಂಗಳವಾರ ಸಂವಿಧಾನ ದಿನಾಚರಣೆ ಅಂಗವಾಗಿ ಪ್ರಜಾಪ್ರಭುತ್ವ ಮತ್ತು ಸಾಮರಸ್ಯ ಸಮಾಜ ಕುರಿತು ಚಿಂತನ ಸಭೆಯಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯದ ಬಳಿಕ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಹಾಗೂ ಸಾವಿರಾರು ಜಾತಿಗಳು. ನೂರಾರು ಪಂಥಗಳು ಹಾಗೂ ಅನೇಕ ಧರ್ಮಗಳನ್ನು ಹೊಂದಿರುವ ಭಾರತಕ್ಕೆ ಉತ್ಕøಷ್ಠವಾದ ಸಂವಿಧಾನದ ಅವಶ್ಯಕತೆ ಬಹಳ ಇತ್ತು. ಈ ಜವಾಬ್ದಾರಿಯನ್ನು ತೆಗೆದುಕೊಂಡ ಡಾ. ಬಿ.ಆರ್. ಅಂಬೇಡ್ಕರ್ ಅವರು ಎಲ್ಲಾ ದೇಶಗಳ ಸಂವಿಧಾನವನ್ನು ಪರಾರ್ಮಶೆ ಮಾಡಿ, ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಒಪ್ಪುವಂತೆ ಸಂವಿಧಾನವನ್ನು ನೀಡಿದರು. ಕಳೆದ 70 ವರ್ಷಗಳಿಂದ ದೇಶದ ಸಂವಿಧಾನದ ಅಡಿಯಲ್ಲಿ ಆಡಳಿತ ನಡೆಯುತ್ತಿದ್ದ, ಶೋಷಿತರು, ಬಡವರು ಹಾಗು ಅಶಕ್ತರ ಪರವಾಗಿರುವ ಸಂವಿಧಾನ ಅವರ ಉದ್ದಾರಕ್ಕಾಗಿ ಶ್ರಮಿಸುತ್ತಿದೆ. ಇಂಥ ಸಂವಿಧಾನ ನಮ್ಮ ದೇಶದ ಮೂಲ ಧರ್ಮ ಗ್ರಂಥವಾಗಿದೆ. ಅಲ್ಲದೇ ಮಹಿಳೆಯರು ಮತ್ತು ಸಮಾಜದ ಕಟ್ಟಕಡೆಯ ವ್ಯಕ್ತಿಗು ಸಹ ನ್ಯಾಯವನ್ನು ಕಲ್ಪಿಸುವ ಮೂಲಕ ಸಂವಿಧಾನ ದಿನದಿಂದ ದಿನಕ್ಕೆ ತನ್ನ ಪ್ರಖರತೆಯನ್ನು ಹೆಚ್ಚಿಸಿಕೊಳ್ಳುತ್ತಿದೆ ಎಂದರು.
ಹಿಂದುಗಳಿಗೆ ಭಗವ್ಗಗೀತೆ, ಕ್ರೈಸ್ತರಿಗೆ ಬೈಬಲ್ ಹಾಗೂ ಮುಸ್ಲಿಂರಿಗೆ ಕುರಾನ್ ಧರ್ಮ ಗ್ರಂಥವಾಗಿದ್ದು, ಭಾರತೀಯರಾದ ನಮಗೆ ಸರ್ವಶೇಷ್ಟವಾದ ಸಂವಿಧಾನವೇ ಧರ್ಮ ಗ್ರಂಥವಾಗಿದೆ. ಅಂಬೇಡ್ಕರ್ ಅವರು ಎಲ್ಲರಿಗೂ ಮತದಾನದ ಹಕ್ಕು ನೀಡುವ ಮೂಲಕ ಸಮಾನತೆಯನ್ನು ಕಲ್ಪಿಸಿದರು. ಈ ಹಿಂದೆ ತೆರಿಗೆದಾರರು, ಜಮೀನು ಹೊಂದಿರರುವರು, ಹಾಗೂ ಪದವೀಧರರಿಗೆ ಮಾತ್ರ ಮತದಾನದ ಹಕ್ಕು ನೀಡಲಾಗುತ್ತಿದೆ. ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗಕ್ಕೆ ಹೆಚ್ಚಿನ ಅದ್ಯತೆಯನ್ನು ನೀಡಲಾಗಿದೆ. ಇಂಥ ಸಂವಿದಾನವನ್ನು ರಕ್ಷಣೆ ಮಾಡುವ ಜೊತೆಗೆ ಅದರ ಮೂಲ ಆಶಯಕ್ಕೆ ಧಕ್ಕೆಯಾಗದಂತೆ ತಿದ್ದುಪಡಿಗಳನ್ನು ಮಾಡಬೇಕಾಗಿದೆ ಎಂದರು.
ದಲಿತ ರಾಜಕಾರಣೆಗಳಲ್ಲಿ ಧ್ರುವನಾರಾಯಣ್ ನಿಧನರಾಗಿದ್ದು, ಹಾಲಿ ಸಂಸದರಾದ ವಿ.ಶ್ರೀನಿವಾಸಪ್ರಸಾದ್ ಅವರ ರಾಜಕೀಯ ನಿವೃತ್ತಿ ಘೋಷಣೆ ಮಾಡುತ್ತಿದ್ದಾರೆ ಇಂತಹ ಸಂದರ್ಭದಲ್ಲಿ ಎರಡನೇಯ ದರ್ಜೆ ನಾಯಕತ್ವ ಬೆಳೆಸುವುದು ನಮ್ಮೇಲ್ಲರ ಜವಾಬ್ದಾರಿಯಾಗಿದೆ. ಅರಣ್ಯ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದು, ಕಳೆದ 16 ವರ್ಷಗಳ ಕಾಲ ಚಾಮರಾಜನಗರ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಿದ್ದೇನೆ. ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ಜನರ ನಾಡಿಮಿಡಿತ ಅವರ ದುಃಖ ದುಮ್ಮನಗಳು ಚೆನ್ನಾಗಿ ಬಲ್ಲೆ. ಈ ನಿಟ್ಟಿನಲ್ಲಿ ಜಿಲ್ಲೆಯ ಅಭಿವೃದ್ದಿಗೆ ನನ್ನ ಸೇವೆಯನ್ನು ಮುಡುಪಿಗಿಟ್ಟಿದ್ದೇನೆ. ದಲಿತ ರಾಜಕಾರಣಿಗಳಲ್ಲಿ ನಾಯಕತ್ವ ಜನಸಾಮಾನ್ಯರ ಮೂಲಕ ಹುಟ್ಟಬೇಕು. ನಾಯಕತ್ವ ಬೆಳೆಸಿಕೊಳ್ಳಬೇಕು ಒಬ್ಬ ನಾಯಕನಿಗೆ ದಾರಿ ಗೊತ್ತಿರಬೇಕು. ಜನರನ್ನು ಜತೆಗೆ ಕರೆದೊಯ್ಯವ ಗುಣ ಇರಬೇಕು. ಇಂಥ ಯುವ ಪೀಳಿಗೆಯನ್ನು ಗುರುತಿಸಿ ನಾಯಕತ್ವ ಬೆಳೆಸಿಕೊಂಡರೆ ಸಮಸಮಾಜ ನಿರ್ಮಾಣ ಸಾಧ್ಯ ಎಂದು ಎಂದರು.
ಸಾಹಿತಿ, ರಂಗಕರ್ಮಿ ಕೆ. ವೆಂಕಟರಾಜು ಮಾತನಾಡಿ, ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಒಪ್ಪುವಂತ ಸಂವಿಧಾನ ನೀಡಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಮಾನತೆ, ಭಾತೃತ್ವದಕ್ಕೆ ಹೆಚ್ಚಿನ ಅದ್ಯತೆ ನೀಡಿದ್ದರು. ಅವರ ಆಶಯದಂತೆ ಆಡಳಿತ ನಡೆಸುವ ಮೂಲಕ ಸಂವಿಧಾನ ಮೂಲ ಉದ್ದೇಶ, ತತ್ವ ಸಿದ್ದಾಂತಗಳಿಗೆ ಬದ್ದರಾಗಿ ಸಂವಿಧಾನವನ್ನು ರಕ್ಷಣೆ ಮಾಡುವ ಜೊತೆಗೆ ಸಮಾಜದಲ್ಲಿ ತುಳಿದಕ್ಕೊಳದವರು ಹಾಗೂ ಅಭದ್ರತೆವುಳ್ಳರಿಗೆ ಅಸರೆಯಾದಾಗ ಮಾತ್ರ ಅಭಿವೃದ್ದಿ ಪರ ಸರ್ಕಾರಗಳು ನಿಲುವು ಸಂವಿಧಾನ ಬದ್ದವಾಗಿರಬೇಕಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶೈಲಕುಮಾರ್ ಮಾತನಾಡಿ, ಸಾಮರಸ್ಯ ದೀಪವನ್ನು ಹಚ್ಚಿದಾಗ ಎಲ್ಲರಿಗೂ ಬೆಳಕು ನೀಡುವಂತಹ ವಾತಾವರಣವನ್ನು ನಾವು ಕಲ್ಪಿಸಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನ ಜ್ಯೊತಿ ಪ್ರಜ್ವಲಿಸಿ ಎಲ್ಲರಿಗೂ ಬೆಳಕು ನೀಡುವ ಜೊತೆಗೆ ಅವರ ಬದುಕು ಬದಲಿಸುವ ಶಕ್ತಿಯನ್ನು ಹೊಂದಿದೆ ಎಂದರು.
ನಗರದ ವಿರಕ್ತಮಠದ ಚನ್ನಬಸವಸ್ವಾಮಿಜೀ ಸಾನಿಧ್ಯ ವಹಿಸಿ ಮಾತನಾಡಿ, ಬಸವಣ್ಣ ಅವರ ಅನುಭವ ಮಂಟಪದ ಆಶಯದಂತೆ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನವನ್ನು ರಚನೆ ಮಾಡಿ ಸಾಮಾಜಿಕ ನ್ಯಾಯ ಕಲ್ಪಿಸಿಕೊಟ್ಟರು. ಸಂಸತ್ ಸಹ 12ನೇ ಶತಮಾನದ ಅನುಭವ ಮಂಟಪನ್ನು ಹೋಲುತ್ತದೆ ಎಂದರು.
ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯ ಆರ್. ಎಂ. ರಾಜಪ್ಪ, ಮಾಜಿ ಅಧ್ಯಕ್ಷ ಸುರೇಶ್ ನಾಯಕ, ಮುಖಂಡರಾದ ಬಸವರಾಜು, ಜಿ. ರಾಜಪ್ಪ, ಮಂಜುಳ, ಮಲ್ಲಣ್ಣ, ತೊರಹಳ್ಳಿ ಕುಮಾರ್, ಎಪಿಎಂಸಿ ಅಧ್ಯಕ್ಷ ಮನೋಜ್ ಕುಮಾರ್, ಕೂಡ್ಲೂರು ಶ್ರೀಧರಮೂರ್ತಿ, ಆಲೂರುಮಲ್ಲು, ಸಿ.ಎಂ.ಕೃಷ್ಣಮೂರ್ತಿ, ಸಿ.ಕೆ. ಮಂಜುನಾಥ್ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.