ಸಂಸತ್‍ನಲ್ಲಿ ಪ್ರಧಾನಿ ಮೋದಿ ಮಹಿಳಾ ಮೀಸಲಾತಿ ಮಂಡನೆ: ಚಾಮರಾಜೇಶ್ವರಸ್ವಾಮಿಗೆ ಈಡುಗಾಯಿ ಒಡೆದು ವಿಜಯೋತ್ಸವ

ಚಾಮರಾಜನಗರ: ದೆಹಲಿ ನೂತನ ಸಂಸತ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಮಹಿಳೆಯರಿಗೆ ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ಶೇ. 33 ರಷ್ಟು ಮೀಸಲಾತಿ ನೀಡುವ ಮಸೂದೆಯನ್ನು ಮಂಡನೆ ಮಾಡಿ, ಅನುಮೋದನೆ ಪಡೆದುಕೊಂಡು ಸುಸಂದರ್ಭವನ್ನು ಜಿಲ್ಲಾ ಬಿಜೆಪಿ ಘಟಕದಿಂದ ಸಂಭ್ರಮಾಚರಣೆ ಮಾಡಲಾಯಿತು.

ನಗರದ ಶ್ರೀ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನದ ಮುಂದೆ ಬಿಜೆಪಿ ಜಿಲ್ಲಾಧ್ಯಕ್ಷ ಜಿ. ನಾರಾಯಣ ಪ್ರಸಾದ್ ನೇತೃತ್ವದಲ್ಲಿ ಸಮಾವೇಶಗೊಂಡು ಬಿಜೆಪಿ ಮಹಿಳಾ ಹಾಗು ಎಲ್ಲಾ ಘಟಕಗಳ ಪದಾಧಿಕಾರಿಗಳು ಮಹಿಳಾ ಮೀಸಲಾತಿ ಜಾರಿ ಮಾಡಿದ ಬಿಜೆಪಿ ಸರ್ಕಾರದ ಪರವಾಗಿ ಜಯ ಘೋಷ ಹಾಕಿದರು. ಮಹಿಳಾ ಮೀಸಲಾತಿ ನೀಡುವಲ್ಲಿ ರಾಜಕೀಯ ಇಚ್ಚಾಶಕ್ತಿ ಪ್ರದರ್ಶನ ಮಾಡಿದ ಬಿಜೆಪಿ ಸರ್ಕಾರದ ಪರವಾಗಿ ಘೋಷಣೆಗಳನ್ನು ಕೂಗಿದರು.

ಬಳಿಕ ಮಹಿಳಾ ಪದಾಧಿಕಾರಿಗಳು ದೇವಸ್ಥಾನದ ಮುಂದೆ ಈಡುಗಾಯಿ ಹೊಡೆದರು. ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಜಿ. ನಾರಾಯಣ ಪ್ರಸಾದ್, 1996ರಿಂದ ಮಹಿಳೆಯರಿಗೆ ಶೇ. 33 ರಷ್ಟು ಮೀಸಲಾತಿ ನೀಡುವ ಬಗ್ಗೆ ಚರ್ಚೆಗಳು ನಡೆಯುತ್ತಿತ್ತು. ಆದರೆ, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಹಾಗು ಅದರ ಮಿತ್ರ ಪಕ್ಷಗಳು ಅಧಿಕಾರ ನಡೆಸಿದ ಸಂದರ್ಭಗಳಲ್ಲಿ ಈ ಮುಸೂದೆಯನ್ನು ಮಂಡಿಸಲು ಅವಕಾಶ ನೀಡುತ್ತಿರಲಿಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ನೇತೃತ್ವ ಬಿಜೆಪಿ ಸರ್ಕಾರ ನುಡಿದಂತೆ ನಡೆದುಕೊಂಡಿದೆ. ಹೊಸ ಸಂಸತ್ ಭವನದಲ್ಲಿ ಪ್ರಥಮ ಭಾರಿಗೆ ನಡೆದ ಅಧಿವೇಶನದಲ್ಲಿ ವಿದೇಯಕವನ್ನು ಮಂಡನೆ ಮಾಡಿ, ಅನುಮೋದನೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ.

ಈ ದಿನವನ್ನು ಭಾರತದ ಮಹಿಳೆಯರ ಪಾಲಿಗೆ ಸುದಿನವಾಗಿದೆ. ಸುವರ್ಣಾಕ್ಷರದಲ್ಲಿ ಬರೆದಿಡುವ ದಿನವಾಗಿದೆ. ಶೇ. 33 ರಷ್ಟು ಮೀಸಲಾತಿಯನ್ನು ರಾಜಕೀಯ ಕ್ಷೇತ್ರಗಳಲ್ಲಿ ನೀಡುವ ಮೂಲಕ ಇನ್ನು ಮುಂದೆ ಸಂಸತ್ ಹಾಗು ವಿಧಾನಸಭೆಗಳಲ್ಲಿ ಶೇ. 33 ರಷ್ಟು ಮಹಿಳಾ ಪ್ರತಿನಿಧಿಗಳು ಆಯ್ಕೆಯಾಗಿ ಬರಲಿದ್ದಾರೆ. ಇದು ಬಿಜೆಪಿ ಹಾಗು ಪ್ರಧಾನಿ ನರೇಂದ್ರ ಮೋದಿ ಅವರಿಂದ ಮಾತ್ರ ಸಾಧ್ಯವಾಗಿದೆ ಎಂದು ನಾರಾಯಣ ಪ್ರಸಾದ್ ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ನಾಗಶ್ರೀ ಪ್ರತಾಪ್, ಕೆರಹಳ್ಳಿ ಮಹದೇವಸ್ವಾಮಿ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಎಚ್.ಎಂ. ಬಸವಣ್ಣ, ಮಹಿಳಾ ಮೋರ್ಚಾ ಅಧ್ಯಕೆÀ್ಷ ಮಲೆಯೂರು ಕಮಲಮ್ಮ, ಪ್ರಧಾನ ಕಾರ್ಯದರ್ಶಿ ಎಂ. ಶೈಲಜಾ, ಉಪಾಧ್ಯಕ್ಷೆ ಮಮತಾ ಬಾಲಸುಬ್ರಮಣ್ಯ, ಖಜಾಂಚಿ ವನಜಾಕ್ಷಿ, ಭುಜಗನಪುರ ರತ್ನÀಮ್ಮ, ಮಹೇಶ್ವರಿ, ದಾಕ್ಷಿಯಿಣಿ, ನೂರೊಂದುಶೆಟ್ಟಿ, ಎಸ್. ಬಾಲಸುಬ್ರಮಣ್ಯ, ಮೂಡ್ನಾಕೂಡು ಪ್ರಕಾಶ್, ಶಿವಣ್ಣ, ಮಹದೇವನಾಯಕ, ಶಿವು ವಿರಾಟ್, ಯೋಗಹಂಸ ಬಾಲರಾಜು, ಟಗರಪುರ ರೇವಣ್ಣ, ಹೊಸಮಾಲಂಗಿ ಮಹದೇವಸ್ವಾಮಿ ಮೊದಲಾದವರು ಇದ್ದರು.

Leave a Reply

Your email address will not be published. Required fields are marked *