ಸ್ನೇಹ ಬಳಗದಿಂದ ವಿಶ್ವಕರ್ಮ ಜಯಂತೋತ್ಸವ ಅಚರಣೆ

ಚಾಮರಾಜನಗರ: ಕಾಯಕ ಸಮಾಜಗಳ ಅಭಿವೃದ್ದಿಗಾಗಿ ವಿಶೇಷ ಯೋಜನೆಗಳನ್ನು ಪ್ರಕಟಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ವರ್ಗದಲ್ಲಿರುವ ಕಾಯಕ ಸಮಾಜಗಳಿಗೆ ವೃತ್ತಿ ಬದುಕು ಹಸನುಗೊಳಿಸಲು ಮುಂದಾಗಿದ್ದಾರೆ ಎಂದು ಡಾ. ಎನ್.ಎಸ್. ಮೋಹನ್ ತಿಳಿಸಿದರು.

ನಗರದ ಬಿ. ರಾಚಯ್ಯ ಜೋಡಿ ರಸ್ತೆಯಲ್ಲಿರುವ ಡಾ. ಎನ್.ಎಸ್. ಮೋಹನ್ ಸ್ನೇಹ ಬಳಗದ ವತಿಯಿಂದ ನಡೆದ ಭಗವಾನ್ ವಿಶ್ವಕರ್ಮ ಜಯಂತೋತ್ಸವ ಕಾರ್ಯಕ್ರಮದಲ್ಲಿ ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ರ್ಪಾಚನೆ ಮಾಡಿ ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ 9 ವರ್ಷಗಳ ಅವಧಿಯಲ್ಲಿ ದೇಶವನ್ನು ಅಭಿವೃದ್ದಿ ಪಥದತ್ತ ಮುನ್ನಡೆಸುತ್ತಿದ್ದಾರೆ. ಅವರ ಅಶಯದಂತೆ ಎಲ್ಲಾ ಕಾಯಕ ಸಮಾಜಗಳನ್ನು ಅಭಿವೃದ್ದಿಪಡಿಸಿ, ವೃತ್ತಿ ಕೌಶಲ್ಯವನ್ನು ಹೆಚ್ಚಿಸುವ ಜೊತೆಗೆ ಅವರ ಜೀವನ ಮಟ್ಟವನ್ನು ಸುಧಾರಿಸುವ ಯೋಜನೆಯನ್ನು ಜಾರಿಮಾಡಿದ್ದಾರೆ. ಪಿಎಂ ವಿಶ್ವಕರ್ಮ ಯೋಜನೆಯಡಿಯಲ್ಲಿ ಬಹಳಷ್ಟು ಕಾಯಕ ಸಮಾಜದ ವೃತ್ತಿ ಭಾಂದವ್ಯರಿಗೆ ಸಾಲ ಸೌಲಭ್ಯ, ವೃತ್ತಿ ತರಬೇತಿ, ಘಟಕಗಳ ಸ್ಥಾಪನೆಗೆ ಹೆಚ್ಚಿನ ಅದ್ಯತೆ, ಕನಿಷ್ಟ 1 ಲಕ್ಷದಿಂದ ಗರಿಷ್ಟು 5 ಲಕ್ಷದ ವರೆಗೆ ಸಾಲ ನೀಡುವುದು. ಅವರು ಅವಂಬಿಸಿರುವ ವೃತ್ತಿಗೆ ಸಂಬಂಧಪಟ್ಟಂತೆ ನೈಪುಣ್ಯತೆ ತರಬೇತಿ ನೀಡಿ, ಅವರನ್ನು ಮತ್ತಷ್ಟು ಪ್ವಕತೆಯಲ್ಲಿ ವೃತ್ತಿಯನ್ನು ಮುಂದುವರಿಸಲು ಅವಕಾಶ ಕಲ್ಪಿಸುವ ಬಹಳಷ್ಟು ಯೋಜನೆಗಳು ಇಲ್ಲಿ ಅಡಕವಾಗಿದೆ. ಎಲ್ಲರು ಸಹ ಇ-ಶ್ರಮ ಕಾರ್ಡಗಳನ್ನು ನೊಂದಾಯಿಸಿಕೊಂಡು ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದರು.

ವಿಶ್ವಕರ್ಮ ಸಮಾಜ ರಾಜ್ಯ ಉಪಾಧ್ಯಕ್ಷ ಎಚ್.ಆರ್.ರಂಗಪ್ಪ ಮಾತನಾಡಿ, ವಿಶ್ವಕರ್ಮ ಸಮಾಜದ ಅಭ್ಯುದಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು. ಸೆ. 17 ರ ವಿಶ್ವಕರ್ಮ ಜಯಂ ತೋತ್ಸವದಂದು ಪಿಎಂ. ಸ್ವಧಾರ ಯೋಜನೆಯನ್ನು ಪ್ರಕಟಿಸಿದ್ದಾರೆ. ಈ ಯೋಜನೆಯಡಿಯಲ್ಲಿ ವಿವಿಧ ಕಸುಬುಗಳಲ್ಲಿ ನಿರತರಾಗಿರುವ ಕಾಯಕ ಸಮಾಜಗಳಿಗೆ ಹೆಚ್ಚಿನ ಅದ್ಯತೆ ದೊರೆಯಲಿದೆ. ಕಾಯಕ ಸಮಾಜದಡಿಯಲ್ಲಿ ಎಲ್ಲಾ ವರ್ಗದ ಜನರು ಬರುತ್ತಿದ್ದು. ಯಾವುದೇ ಜಾತಿ, ವರ್ಗ ಬೇದವಿಲ್ಲದೇ ಕಸುಬಿನ ಆಧಾರದಲ್ಲಿ ಸಣ್ಣ ಸಣ್ಣ ಸಮಾಜಗಳಾದ ಮಡಿವಾಳ, ಸವಿತಾ ಸಮಾಜ, ಈಡಿಗ ಸಮಾಜ, ಜೋಗಿ, ಸೇರಿದಂತೆ ಅನೇಕ ಸಮಾಜದವರು ಒಗ್ಗಟ್ಟಿನಿಂದ ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಿ ಸವಲತ್ತು ಪಡೆದುಕೊಳ್ಳಲು ಅವಕಾಶವಿದೆ ಎಂದರು.

ಬಿಜೆಪಿ ಹಿಂದುಳಿದ ವರ್ಗಗಳ ನಗರ ಅಧ್ಯಕ್ಷ ಎಸ್. ನಂದೀಶ್ ವಿಶ್ವಕರ್ಮ ಮಾತನಾಡಿ, ಡಾ. ಮೋಹನ್ ಸ್ನೇಹ ಬಳಗವು ವಿಶ್ವಕರ್ಮ ಪೂಜಾ ಮಹೋತ್ಸವ ಕಾರ್ಯಕ್ರಮವನ್ನು ಆಯೋಜನೆ ಎಲ್ಲರನ್ನು ಆಹ್ವಾನಿಸಿ, ಕೇಂದ್ರದ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವ ಸಾರ್ಥಕವಾದ ಕೆಲಸ ಮಾಡುತ್ತಿದ್ದಾರೆ. ಇಂಥ ಸಮಾಜ ಮುಖಿಯುವಳ್ಳವರು ಹೆಚ್ಚಾಗಬೇಕಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪುಕೋಟೆಯ ಮುಂದೆ ನಿಂತು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುವಾಗ ಸೆ. 17 ರಂದು ವಿಶ್ವಕರ್ಮಜಯಂಯೋತ್ಸವ ಕಾರ್ಯಕ್ರಮದಲ್ಲಿ 15 ಸಾವಿರ ಕೋಟಿ ರೂ.ಗಳನ್ನು ಕಾಯಕ ಸಮಾಜಕ್ಕೆ ನೀಡುವುದಾಗಿ ಘೋಷಣೆ ಮಾಡಿರುವುದು ಎಲ್ಲಾ ಕಾಯಕ ಸಮಾಜಗಳ ಬಲವರ್ಧನೆಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಜಿಲ್ಲಾ ಕೇಂದ್ರದಲ್ಲಿ ವಿಶ್ವಕರ್ಮ ಸಮುದಾಯ ಭವನ ನಿರ್ಮಾಣ ಹಾಗೂ, ವಿಶ್ವಕರ್ಮ ಸಮಾಜದ ರುದ್ರಭೂಮಿ ಮಂಜೂರಾತಿಯನ್ನು ಡಾ. ಮೋಹನ್ ಅವರ ಮುಖಾಂತರ ಸಂಸದರಿಗೆ ಮನವಿ ಮಾಡಿಕೊಂಡು ಇದನ್ನು ಶೀಘ್ರ ಮಂಜುರಾತಿ ಮಾಡಿಕೊಡುವಂತೆ ಒತ್ತಾಯಿಸಿದರು.
ಸ್ನೇಹ ಬಳಗದ ಅಧ್ಯಕ್ಷ ಕೆ.ಆರ್. ಲೋಕೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಡಾ. ಮೋಹನ್ ಅವರು ಸ್ನೇಹ ಬಳಗದ ಜಿಲ್ಲಾ ಕೇಂದ್ರದಲ್ಲಿ ಸಕ್ರಿಯವಾಗಿ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಈಗಾಗಲೇ ಅನೇಕ ಆರೋಗ್ಯ ತಪಾಸಣೆ ಶಿಬಿರ, ಸ್ವಚ್ಚತಾ ಅಭಿಯಾನ , ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿದೆ. ವಿಶ್ವಕರ್ಮ ಜಯಂತೋತ್ಸವ ಅಚರಣೆ ಮೂಲಕ ಕಾಯಕ ಸಮಾಜಗಳಿಗೆ ಶಕ್ತಿ ತುಂಬುವ ಕೆಲಸ ಇದಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಯೋಜನೆಗಳು ಸಮರ್ಪಕವಾಗಿ ಅರ್ಹರಿಗೆ ತಲುಪಿಸುವ ಜವಾಬ್ದಾರಿ ಸ್ನೇಹ ಬಳಗದದ್ದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಕಾಡಹಳ್ಳಿ ಕುಮಾರ್, ಹಿರಿಬೇಗೂರು ಸೋಮಶೇಖರ್, ಪಣ್ಯದಹುಂಡಿ ರಾಜು, ಜಯರಾಮಶೆಟ್ಟಿ, ಕುಮಾರ್, ಹಾಪ್‍ಕಾಮ್ಸ್ ಉಪಾಧ್ಯಕ್ಷೆ ಶೃತಿ ಕುಮಾರಸ್ವಾಮಿ, ಎಸ್. ಬಾಲಸುಬ್ರಮಣ್ಯ, ಶಂಭುವಿಶ್ವಕರ್ಮ, ಕಬ್ಬಹಳ್ಳಿ ಮಹೇಶ್ ಮೊದಲಾದವರುಇದ್ದರು.

Leave a Reply

Your email address will not be published. Required fields are marked *