ಚಾಮರಾಜನಗರ: ಸಮೀಪದ ಹರದನಹಳ್ಳಿ ಗ್ರಾಮದ ನಾಡ ಕಚೇರಿಯಲ್ಲಿ ಕಂದಾಯ ಮತ್ತು ಪಿಂಚಣಿ ಅದಾಲತ್ ಕಾರ್ಯಕ್ರಮ ನಡೆಸಲಾಯಿತು.
ತಹಸೀಲ್ದಾರ್ ಐ.ಈ.ಬಸವರಾಜು ಅವರ ಅಧ್ಯಕ್ಷತೆಯಲ್ಲಿ ನಡೆದ ಅದಾಲತ್ ಕಾರ್ಯಕ್ರಮದಲ್ಲಿ ಪೌತಿ ಖಾತೆ, ಕ್ರಯದಂತೆ ಖಾತೆ, ವಿಲ್‍ನಂತೆ ಖಾತೆ ಹಾಗೂ ತಿದ್ದುಪಡಿ ಸೇರಿದಂತೆ ಒಟ್ಟು 28 ಅರ್ಜಿಗಳು ಸ್ವೀಕೃತವಾಯಿತು.

ನಂತರ ತಹಸೀಲ್ದಾರ್ ಐ.ಈ.ಬಸವರಾಜು ಮಾತನಾಡಿ, ಸರ್ಕಾರದ ಈ ಯೋಜನೆಯನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು. ನಂತರ ಪಿಂಚಣಿ ಯೋಜನೆ ಫಲಾನುಭವಿಗಳಿಗೆ ಮಂಜೂರಾತಿ ಆದೇಶವನ್ನು ನೀಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಕಚೇರಿಯ ಆರ್‍ಆರ್‍ಟಿ ಶಿರಸ್ತೇದಾರ್ ವಿನು, ಹರದನಹಳ್ಳಿ ನಾಡ ಕಚೇರಿಯ ಉಪ ತಹಸೀಲ್ದಾರ್ ಪಿ.ಜಿ.ಮಹದೇವಪ್ಪ, ರಾಜಸ್ವ ನಿರೀಕ್ಷಕರಾದ ಗುರುಸಿದ್ದಪ್ಪಚಾರ್ ಸೇರಿದಂತೆ ಎಲ್ಲಾ ಗ್ರಾಮಗಳ ಆಡಳಿತಾಧಿಕಾರಿಗಳು, ಗ್ರಾಮ ಸಹಾಯಕರು, ಸಾರ್ವಜನಿಕರು ಹಾಜರಿದ್ದರು.
