ವಿದ್ಯುತ್ ಉಪಕೇಂದ್ರ ನಿರ್ಮಾಣಕ್ಕೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಗುದ್ದಲಿಪೂಜೆ

ಚಾಮರಾಜನಗರ: ನಗರಸಭೆ ವ್ಯಾಪ್ತಿಯ ಸೋಮವಾರ ಪೇಟೆ (ಗಾಳಿಪುರ) ಬಡಾವಣೆಯಲ್ಲಿ ನಿರ್ಮಾಣವಾಗಲಿರುವ 10.50 ಕೋಟಿ ರೂ.ವೆಚ್ಚದ 66/11 ಕೆವಿ ವಿದ್ಯುತ್ ಉಪಕೇಂದ್ರಕ್ಕೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಗುದ್ದಲಿಪೂಜೆ ನೆರವೇರಿಸಿದರು.

ಇದೇವೇಳೆ ಅವರು ಮಾತನಾಡಿ,” ವಿದ್ಯುತ್ ಉಪಕೇಂದ್ರ ನಿರ್ಮಾಣದಿಂದ ನಗರದ ಸೋಮವಾರಪೇಟೆ, ಗಾಳಿಪುರ, ಸಿಮ್ಸ್ ಕಾಲೇಜು, ಆಸ್ಪತ್ರೆ, ಮೂಡ್ಲುಪುರ, ಯಡಪುರ, ಮಲ್ಲಯ್ಯನಪುರ, ತಾವರೆಕಟ್ಟೆಮೋಳೆ ಗ್ರಾಮಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಕೆಯಾಗಲಿದೆ. ಸಂಬಂಧಪಟ್ಟ ಕಾಮಗಾರಿ ಗುತ್ತಿಗೆದಾರರು ತ್ವರಿತಗತಿಯಲ್ಲಿ ಕಾಮಗಾರಿ ಆರಂಭಿಸಬೇಕು ಎಂದು ಸೂಚನೆ ನೀಡಿದರು.

ಕೆಪಿಟಿಸಿಎಲ್ ಬೃಹತ್ ಕಾಮಗಾರಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್, ಪ್ರಭಾರ ಸಿವಿಲ್ ಎಇಇ, ಎಸ್‍ಎಂಎಸ್ ನಿರ್ಮಾಣ ಸಂಸ್ಥೆಯ ಗುತ್ತಿಗೆದಾರರು ಹಾಜರಿದ್ದರು.

Leave a Reply

Your email address will not be published. Required fields are marked *