ಗಣರಾಜ್ಯೋತ್ಸವ ದಿನ

ಜನವರಿ ಬಂತೆಂದರೆ ಎಳ್ಳು ಬೆಲ್ಲದೊಂದಿಗೆ ಸಕ್ಕರೆಯಂತ ಮಾತುಗಳು ಎಲ್ಲೆಲ್ಲೂ ಜೇನ್ನೊಣ ದಂತೆ ಹಾರಾಡುತ್ತಿರುವ ಬೆನ್ನಲ್ಲೆ ಭಾರತೀಯರ ಮೈಮನದಲ್ಲಿ ಮತ್ತೊಂದು ಸಂತೋಷ, ಸಂಭ್ರಮದ ಜತೆಗೆ ಪ್ರಜಾಪ್ರಭುತ್ವದ ಪ್ರತೀಕ ದಂತೆ ನಮ್ಮನ್ನು ಆವಾಹಿಸಿಕೊಂಡು ಕಾದು ಕೂರುವುದೇ ಗಣರಾಜ್ಯೋ ತ್ಸವ. ವರ್ಷದ ಪ್ರಪ್ರಥಮ ರಾಷ್ಟ್ರೀಯ ಉತ್ಸವವಾಗಿ ಆಚರಿಸಲ್ಪಡುವ ಮಾನಸಿಕವಾಗಿ ಒಂದಾಗುವಿಕೆಯ ದ್ಯೋತಕವೇ ಗಣರಾಜ್ಯೋತ್ಸವ.

ಅಖಂಡ ಭಾರತ ಮಾತೆಗೆ ಕಿರೀಟದಂತೆ ಗರಿಗೆದರಿ ನಮ್ಮದೇ ಒಂದು ಸಂವಿಧಾನದ ರೂಪು ರೇಷೆ ಅಸ್ತಿತ್ವಕ್ಕೆ ಬಂದು ಜಾರಿಯಾದ ಜ. 26 (1950ನೇ ಇಸವಿ) ರಂದು ಪ್ರಜಾಪ್ರಭುತ್ವ ವ್ಯವಸ್ಥೆಯ ಹಿರಿಮೆ ಮೆರೆದ ದಿನ. ಬ್ರಿಟಿಷರ ಕಪಿಮುಷ್ಟಿಯಲ್ಲಿ ಬಂಧಿಯಾಗಿದ್ದ ಭಾರತ ಮಾತೆ ಹಲವರ ರಕ್ತಪಾತ, ಮತ್ತೆ ಮತ್ತೆ ಕೆಲವರ ದೃಢ ಸಂಕಲ್ಪ ಸಿದ್ದಿಯಿಂದ 1947 ಆ.15 ರಂದು ವಿಮುಕ್ತಿಗೊಂಡಳು. ಅನಂತರ ಎಲ್ಲಾ ಸಂಕೋಲೆ ಗಳಿಂದ ಹೊರ ಬಂದ ಭಾರತಕ್ಕೆ ಹೊಸ ಸರ್ಕಾರ ಸ್ಥಾಪನೆ, ಆಧುನಿಕ ಸಂಸದೀಯ ಪ್ರಜಾ ತಂತ್ರವನ್ನು ಅಳವಡಿಸಿಕೊಂಡಂತೆ ನೂತನ ಕಾನೂನು, ನೀತಿ ನಿಯಮಗಳನ್ನು ಅಸ್ತಿತ್ವಕ್ಕೆ ತರಲು ಇಡೀ ಭಾರತಕ್ಕೆ ಅನ್ವಯವಾಗುವಂತೆ ನಮ್ಮದೇ ಸ್ವಂತ ಸಂವಿಧಾನ ರಚನೆಗೆ ಪೂರ್ವವೇದಿಕೆ ನಿರ್ಮಾಣಗೊಂಡಿತು.

‘ಭಾರತ 1947 ಆಗಸ್ಟ್ 15ರಂದು ಸ್ವತಂತ್ರವಾದ ನಂತರ ಆ.29ರಂದು ಡಾ.ಅಂಬೇಡ್ಕರ್ ಅವರ ನೇತೃತ್ವದಲ್ಲಿ ಕರಡು ಸಮಿತಿ ನೇಮಕವಾಯಿತು. ಈ ಸಮಿತಿಯು ಸಂವಿಧಾನದ ಕರಡನ್ನು ಸಿದ್ದಪಡಿಸಿ 1947 ನ.4ರಂದು ಶಾಸನ ಸಭೆಯಲ್ಲಿ ಮಂಡಿಸಿತು. 1949 ನ.26ರಂದು ಅಂಗೀಕರಿಸಲ್ಪಟ್ಟು ಪರಿಶೀಲನೆ ಮತ್ತು ತಿದ್ದುಪಡಿಗಳ ನಂತರ 1950 ಜ.26ರಂದು ಭಾರತ ಸಂವಿಧಾನ ಜಾರಿಗೆ ಬಂದಿತು.

ಭಾರತ ಸ್ವಾತಂತ್ರ್ಯ ಚಳವಳಿಯಲ್ಲಿ 1930 ಜ.26 ರಂದು ಲಾಹೋರ್‌ನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಈನಿರ್ಧಾರ ತೆಗೆದುಕೊಂಡು ಭಾರತ ರಾಷ್ಟ್ರೀಯ ಕಾಂಗ್ರೆಸ್‌ ‘ಪೂರ್ಣ ಸ್ವರಾಜ್ಯ’ ಘೋಷಣೆ ಹೊರ ಹಾಕಿದರು. ಈ ಕಾರಣಕ್ಕಾಗಿ ಭಾರತ ಸಂವಿಧಾನವನ್ನು ಈ ದಿನ ದಂದೇ ಜಾರಿಗೆ ತರಲಾಯಿತು. ಅಂದರೆ ಅಂದು ಭಾರತವು ಗಣ ರಾಜ್ಯವಾಯಿತು. ಹಾಗಾದರೆ ಗಣ ರಾಜ್ಯವೆಂದರೆ ‘ಯಾವುದೇ ದೇಶ ದಲ್ಲಿ ಪ್ರಜೆಗಳನ್ನು ಆಳುವ ಸರ್ಕಾರ ವನ್ನು ನಿರ್ಧರಿಸುವ ಶಕ್ತಿ ಅಂತಿಮ ವಾಗಿ ಅದೇ ಪ್ರಜೆಗಳ ಕೈಯಲ್ಲಿರುವ ಸರ್ಕಾರದ ವ್ಯವಸ್ಥೆ ಹೀಗಾಗಿ ಈ ದಿನವನ್ನು ಸುವರ್ಣಾಕ್ಷರದಲ್ಲಿ ಬರದಿಡಬೇ ಕಾದ ದಿನ. ಏಕೆಂದರೆ ಜನರಿಂದ ಪ್ರತಿನಿಧಿಸಲ್ಪಡುವ ಜನಪ್ರತಿನಿಧಿಗಳ ಸರ್ಕಾರದ ಶಾಸನಬದ್ಧ ಆಡಳಿತ ವ್ಯವಸ್ಥೆಯಲ್ಲಿ ದೇಶವನ್ನು ಸರ್ವ ಸ್ವತಂತ್ರ ಸಾರ್ವಭೌಮ ಗಣರಾಜ್ಯ ಎಂದು ಒಮ್ಮತದಿಂದ ಮೊಳಗಿದೆ ಸುದಿನವಾಗಿದೆ.

ಅಂದಿನಿಂದ ಜ26 ಭಾರತೀಯರ ಹೃನ್ಮನ ಗಳಲ್ಲಿ ಪುಳಕದ ಹೊನ್ನೊಳೆ ತೊರೆಯಾಗಿ ಹರಿಯುವ ಗಣರಾಜ್ಯೋತ್ಸವ ಕಾಂತಿ ಪುಟಿಯುತ್ತಿದೆ. ಎಲ್ಲಾ ಕಡೆ ಸಂಭ್ರಮದ ಛಾಯೆ ಅನುರಣಿಸುತ್ತದೆ. ಮುಖ್ಯವಾಗಿ ಮದುವಣಗಿತ್ತಿಯಂತೆ ಅಲಂಕೃತಗೊಳ್ಳುವುದು ದೇಶದ ರಾಜಧಾನಿ ದೆಹಲಿ. ಅಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಕವಾಯಿತು ಮುಖ್ಯ ಆಕರ್ಷಣ ಕೇಂದ್ರವಾಗಿದ್ದು, ಇದನ್ನು ನೋಡಲು ಜನ ಕಾದು ಕೂತಿರುತ್ತಾರೆ. ಅಂದಿನ ಕಾರ್ಯ ಕ್ರಮಕ್ಕೆ ಯಾವುದಾದರೂ ವಿದೇಶದ ಗಣ್ಯಾತಿಗಣ್ಯರನು, ಮುಖ್ಯಅತಿಥಿಗಳನ್ನಾಗಿ ಆಹ್ವಾನಿಸಿ( ಇದು ವರೆಗೂ 33 ದೇಶಗಳ ಅತಿಥಿಗಳು ಭಾಗವಹಿಸಿದ್ದಾರೆ) ಅವರ ಸಮ್ಮುಖದಲ್ಲಿ ದೇಶದ ಮಿಲಿಟರಿ ಹಾಗೂ ಸಾಂಸ್ಕೃತಿಕ ಶಕ್ತಿಯ ಪ್ರದರ್ಶನ ಮಾಡಲಾಗುತ್ತದೆ.

ಈ ನಡುವೆ ದೆಹಲಿಯ ರಾಜಪಥ ಮಾರ್ಗದಲ್ಲಿ ಸಾವಿರಾರು ಪ್ರೇಕ್ಷಕರ ವೀಕ್ಷಿಸಿ ಗಣರಾಜ್ಯೋತ್ಸವವನ್ನು ಸಾಕ್ಷೀಕರಿಸುತ್ತಾರೆ. ರಾಷ್ಟ್ರಪತಿ ಭವನದ ಬಳಿಯ ರೈಸಿನಾ ಹಿಲ್ನಿಂದ ಆರಂಭವಾಗುವ ಈ ಮೆರವಣಿಗೆ ಇಂಡಿಯಾ ಗೇಟ್‌ನ ಮೂಲಕ ಸಾಗಿ ಐತಿಹಾಸಿಕ ಕೆಂಪುಕೋಟೆಯನ್ನು ಸೇರುತ್ತದೆ. ಮೂರು ಸೇನೆಗಳ ವಿವಿಧ ವಿಭಾಗಗಳ ಯೋಧರು ಸಮವಸ್ತ್ರ, ಪದಕಗಳನ್ನು ಧರಿಸಿ ಮಹಾದಂಡ ನಾಯಕರಾದ ರಾಷ್ಟ್ರಪತಿಗಳಿಗೆ ಗೌರವ ವಂದನೆ ಸಲ್ಲಿಸುತ್ತಾರೆ. ಜತೆಗೆ ಈ ಬಾರಿಥೈಲ್ಯಾಂಡ್‌ನ ಪ್ರಧಾನಿ ಪೈಟಾಂಗ್‌ಟಾರ್ನ್ ಶಿನಾವಾತ್ರಾ (Paetongtarn Shinawatra) ಅವರುರಾಷ್ಟ್ರಪತಿಗಳೊಂದಿಗೆ ಕಾರ್ಯಕ್ರಮ ವೀಕ್ಷಿಸುವರು, ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ನೃತ್ಯ ತಂಡಗಳು ವಿವಿಧ ರಾಜ್ಯದ ಸ್ತಬ್ಧ ಚಿತ್ರಗಳು, ಜಾನಪದ ತಂಡಗಳು ಭಾಗವಹಿಸು ತ್ತವೆ. ಸಾಹಸ, ಸಮಯ ಪ್ರಜ್ಞೆ ಶೌರ ಮೆರೆದ ವ್ಯಕ್ತಿಗಳಿಗೆ, ಮಕ್ಕಳಿಗೆ ‘ರಾಷ್ಟ್ರೀಯ ಶೌರ್ಯ ಪ್ರಶಸ್ತಿ’ ನೀಡಲಾಗುತ್ತದೆ. ಕರ್ನಾಟಕದಲ್ಲಿ ಮುಖ್ಯಮಂತ್ರಿ ಪದಕ, ಆಯಾ ರಾಜ್ಯದಲ್ಲಿ ಗಣನೀಯ ಸೇವೆ ಸಲ್ಲಿಸಿದ ಪೊಲೀಸರಿಗೆ ನೀಡಲಾ ಗುತ್ತದೆ. ಅದೇ ರೀತಿ ರಾಜ್ಯಗಳಲ್ಲೂ ಕವಾಯಿತು, ಪೊಲೀಸ್ ಬ್ಯಾಂಡು, ಸಾಂಪ್ರದಾಯಿಕ ನೃತ್ಯ ಮೆರವಣಿಗೆ ನಡೆದು ರಾಜ್ಯಪಾಲರು ಗೌರವ ವಂದನೆ ಸ್ವೀಕರಿಸುತ್ತಾರೆ. ಅಂದು ದೇಶಕ್ಕಾಗಿ ಹೋರಾಡಿದ ವೀರ ಪುರುಷರು, ಮಹಾತ್ಮರು, ಮಹಾನ್ ನಾಯಕರು ಸಂವಿಧಾನ ಜಾರಿಗೆ ಬರಲು ಅವಿರತವಾಗಿ ಶ್ರಮಿಸಿದ ನಾಯಕರ ಗುಣಗಾನವನ್ನು ಮಾಡ ಲಾಗುತ್ತದೆ. ಉಪನ್ಯಾಸ ಭಾಷಣ ಮಾಡುತ್ತಾರೆ. ಸಿಹಿ ವಿತರಣೆ ಮಾಡಿ ಬೀಳ್ಕೊಡುತ್ತಾರೆ.

ಗಣರಾಜ್ಯವಾಗಿ ಭಾರತಕ್ಕೆ 77 ವಸಂತಗಳು ಉರುಳಿದ್ದು, ಏನೇನು ಸಾಧನೆ ಮಾಡಿದ್ದೇವೆ? ಪ್ರಗತಿಯ ಜಾರು ಬಂಡಿಯಲ್ಲಿ ಏಳು ಬೀಳುಗಳ ತತ್ತರ ಹೇಗೆ ಸಂಭವಿಸುತ್ತಿದೆ? ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾರತದ ನಡಿಗೆ ಹೇಗೆ ಸಾಗುತ್ತಿದೆಂದು? ಒಮ್ಮೆ ದೃಷ್ಟಿ ಹಾಯಿಸಿದಾಗ ಭಾರತವು ಯಾವ ಸ್ತರದಲ್ಲಿ ತನ್ನ ಇರುವಿಕೆಯನ್ನು ಗುರುತಿಸಿಕೊಂಡಿದೆ ಎಂಬ ಅಂಶ ತಿಳಿದಾಗ ದೇಶದ ಮನಗಳಿಗೆ ಆತಂಕವನ್ನು ತಂದೊಡ್ಡುತ್ತದೆ. ಇಂದು ಜಗತ್ತಿನ ಮುಂದುವರೆದ ದೇಶಗಳೊಂದಿಗೆ ಸರಿ ಸಮಾನವಾಗಿ ನಿಲ್ಲಬಲ್ಲ ತಾಕತ್ತು ನಮಗಿದೆ. ಅದನ್ನು ತಕ್ಕ ಮಟ್ಟಿಗೆ ಸಾಧಿಸಿದ್ದೇವೆಯಾದರೂ, ಮಾಹಿತಿ ತಂತ್ರಜ್ಞಾನದ ಜಾಲದಲ್ಲಿ ಕ್ಷಿಪ್ರಗತಿಯಾಗಿ ಮುನ್ನುಗ್ಗುತ್ತಿದ್ದರೂ ಅದು ಹೇಳಿಕೊಳ್ಳುವಷ್ಟು ಸಾಧನೆಯಾಗುತ್ತಿಲ್ಲ.
2026ರ ಭಾರತದ 77ನೇ ಗಣರಾಜ್ಯೋತ್ಸವದ ಪ್ರಮುಖ ವಿಶೇಷತೆಗಳು: ಪ್ರಧಾನಿ ನರೇಂದ್ರ ಮೋದಿ ಗೌರವ ಸಲ್ಲಿಸಿ, ಇಂಡಿಯಾ ಗೇಟ್‌ನಲ್ಲಿರುವ ಅಮರ್ ಜವಾನ್ ಜ್ಯೋತಿಯನ್ನು ಬೆಳಗಿ ಈ ಮೆರವಣಿಗೆ ಪ್ರಾರಂಭವಾಗುತ್ತದೆ. ಸೇನೆ, ನೌಕಾಪಡೆ ಮತ್ತು ವಾಯುಪಡೆ ಸೇರಿದಂತೆ ಮಿಲಿಟರಿ ನಿಯೋಗಗಳು ಸಿಂಕ್ರೊನೈಸ್ಡ್ ರಚನೆಗಳಲ್ಲಿ ಮೆರವಣಿಗೆ ನಡೆಸುತ್ತವೆ. ಇದರ ನಂತರ ಫೈಟರ್ ಜೆಟ್‌ಗಳು ಮತ್ತು ಹೆಲಿಕಾಪ್ಟರ್‌ಗಳ ಪ್ರಭಾವಶಾಲಿ ಫ್ಲೈಪಾಸ್ಟ್ ನಡೆಯುತ್ತದೆ. ಈ ಮೆರವಣಿಗೆಯ ಪ್ರಮುಖ ಮುಖ್ಯಾಂಶಗಳಲ್ಲಿ ಒಂದು ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಪ್ರತಿನಿಧಿಸುವ ರಾಜ್ಯ ಸ್ತಬ್ಧಚಿತ್ರಗಳ ಪ್ರಸ್ತುತಿ. ಈ ಸ್ತಬ್ಧಚಿತ್ರಗಳು ಪ್ರತಿಯೊಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ವಿಶಿಷ್ಟ ಸಂಸ್ಕೃತಿ, ಇತಿಹಾಸ ಮತ್ತು ಸಾಧನೆಗಳನ್ನು ಪ್ರದರ್ಶಿಸುತ್ತವೆ.ಗಣರಾಜ್ಯೋತ್ಸವದ ಮೆರವಣಿಗೆ ಜನವರಿ 26ರಂದು ಬೆಳಿಗ್ಗೆ 10: 30ಕ್ಕೆ ಪ್ರಾರಂಭವಾಗಲಿದೆ. ಇದಲ್ಲದೆ, ಸುಮಾರು 10,000 ರೂ. ವಿಶೇಷ ಅತಿಥಿಗಳನ್ನು ಸಹ ಭವ್ಯ ಕಾರ್ಯಕ್ರಮವನ್ನು ವೀಕ್ಷಿಸಲು ಆಹ್ವಾನಿಸಲಾಗಿದೆ.ಗಣರಾಜ್ಯೋತ್ಸವದ ಮೆರವಣಿಗೆ ಭಾರತದ ರಾಜಧಾನಿ ನವದೆಹಲಿಯ ಕರ್ತವ್ಯ ಪಥದಲ್ಲಿ ನಡೆಯಲಿದೆ. ಈ ರಸ್ತೆ ಇಂಡಿಯಾ ಗೇಟ್‌ನಿಂದ ರಾಷ್ಟ್ರಪತಿಗಳ ಅಧಿಕೃತ ನಿವಾಸವಾದ ರಾಷ್ಟ್ರಪತಿ ಭವನದವರೆಗೆ ವ್ಯಾಪಿಸಿದೆ.

ಮುಖ್ಯ ಅತಿಥಿ: 2026ರ ಗಣರಾಜ್ಯೋತ್ಸವಕ್ಕೆ ಥೈಲ್ಯಾಂಡ್‌ನ ಪ್ರಧಾನಿ ಪೈಟಾಂಗ್‌ಟಾರ್ನ್ ಶಿನಾವಾತ್ರಾ (Paetongtarn Shinawatra) ಅವರು ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ.
ಥೀಮ್ (ಧ್ಯೇಯವಾಕ್ಯ): ಈ ಬಾರಿಯ ಆಚರಣೆಯು ಮುಖ್ಯವಾಗಿ “ವಿಕಸಿತ ಭಾರತ” (ಗಿiಞsiಣ ಃhಚಿಡಿಚಿಣ) ಮತ್ತು “ಭಾರತ – ಪ್ರಜಾಪ್ರಭುತ್ವದ ಜನನಿ” ಎಂಬ ವಿಷಯಗಳ ಮೇಲೆ ಕೇಂದ್ರೀಕೃತವಾಗಿದೆ.
ಮಹಿಳಾ ಸಬಲೀಕರಣ: ಕಳೆದ ವರ್ಷದಂತೆಯೇ ಈ ಬಾರಿಯೂ ಪೆರೇಡ್‌ನಲ್ಲಿ ಮಹಿಳಾ ಸೈನ್ಯದ ತುಕಡಿಗಳು ಮತ್ತು ಸಾಂಸ್ಕೃತಿಕ ಪ್ರದರ್ಶನಗಳಲ್ಲಿ ಮಹಿಳೆಯರ ಹೆಚ್ಚಿನ ಭಾಗವಹಿಸುವಿಕೆಗೆ ಆದ್ಯತೆ ನೀಡಲಾಗಿದೆ.
ತಂತ್ರಜ್ಞಾನ ಪ್ರದರ್ಶನ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಆಖಆಔ) ಮತ್ತು ಭಾರತೀಯ ಸೇನೆಯು ದೇಶೀಯವಾಗಿ ತಯಾರಿಸಿದ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಡ್ರೋನ್ ತಂತ್ರಜ್ಞಾನವನ್ನು ಪ್ರದರ್ಶಿಸಲಿವೆ.
ಸ್ತಬ್ಧಚಿತ್ರಗಳು: ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸ್ತಬ್ಧಚಿತ್ರಗಳು ತಮ್ಮ ಪ್ರಾದೇಶಿಕ ಸಂಸ್ಕೃತಿ ಮತ್ತು ಅಭಿವೃದ್ಧಿಯನ್ನು ಬಿಂಬಿಸಲಿವೆ.
ಗಣರಾಜ್ಯ ಭಾರತದಲ್ಲಿ ಒಗ್ಗೂಡಿದ ಮೈನಸ್ಸುಗಳ ಭಾರತೀಯತೆ ಮೇಲ್ನೋಟಕ್ಕೆ ಕಾಣಿಸಿಕೊಂಡು ನಾವೆಲ್ಲ ವಿಶಾಲ ಭಾವನೆಯಿಂದ ಉಸಿರಾಡುತ್ತಿದ್ದೇವೆ ಎಂದು ಅಂದು ಕೊಂಡರು. ಅಂತರಂಗದಲ್ಲಿ ಸ್ವಾರ್ಥದಲ್ಲಿ ಸಂಕುಚಿತ ಮನೋ ಭಾವ, ಸಣ್ಣತನದ ಭಾವನೆ ನುಸುಳಿ ಧರ್ಮಾಂದತೆ, ಮತಾಂದತೆ, ಜಾತೀಯತೆಯಂತಹ ಭಾವಗಳು, ಉಲ್ಬಣಗೊಳ್ಳಲು ಕಾವೇರುತ್ತಿವೆ. ಓ ನನ್ನ ಚೇತನ, ಆಗು ನೀ ಅನಿಕೇತನ!, ಕಸವರವೆಂಬುದು ನೆರೆ ಸೈರಿಸ ಲಾರ್ಪೊಡೆಪರ ವಿಚಾರಮಂ, ಪರಧರ್ಮಮಂ ಎಂಬ ಕವಿವಾಣಿಗಳು ಅರ್ಥವಂತಿಕೆ ಕಳೆದುಕೊಳ್ಳುತ್ತಿವೆ. ನಿಜವಾದ ಗಣರಾಜ್ಯದ ಆಚರಣೆ ನೈಜತೆಯಿಂದ ಕೂಡಿರಬೇಕಾದರೆ ಗ್ರಾಮಗಳ ಗಣರಾಜ್ಯವಾಗಬೇಕು. ಹಳ್ಳಿಯಿಂದ ದಿಲ್ಲಿ ಎಂಬ ಮಾತನ್ನುಸರ್ಕಾರಗಳುಪರಿಗಣಿಸಿಗ್ರಾಮೀಣಜನತೆಯಸಂಕಷ್ಟಗಳಕಡೆಗಮಹರಿಸಿಅವರನೋವನ್ನುಆಲಿಸುವಮನಸ್ಥಿತಿಗೆಸಾಕ್ಷಿಯಾಗಬೇಕಾಗಿದೆ, ಗಾಂಧೀಜಿಯವರುಕಂಡಗ್ರಾಮ ಸ್ವರಾಜ್ಯದಕನಸನ್ನುನನಸುಮಾಡುವನಿಟ್ಟಿನಲ್ಲಿಕ್ರಮಕೈಗೊಳ್ಳಬೇಕಾಗಿದೆ.ಯಾವಾಗ ಗ್ರಾಮಗಳು ಸ್ವಾವಲಂಬಿಯಾಗಿ ಸ್ವರಾಜ್ಯವಾಗುತ್ತವೋ ಆಗ ದೇಶವು ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಮುದ್ರೆಯನ್ನು ಒತ್ತಲು ಸಾಧ್ಯವಾಗುತ್ತದೆ. ಸತ್ಯವಾದ ಗಣರಾಜ್ಯೋತ್ಸವದ ಆಚರಣೆಗೂ ಕಳೆ ಬಂದು ಅನುಸರಣೆಗೆ ಸಾಧ್ಯವಾಗುತ್ತದೆ. ಆಗ ಹಬ್ಬವಾಗಿ ಉತ್ಸವವಾಗಿ ಪರಿವರ್ತನೆಯಾಗುತ್ತದೆ .

ಗಣರಾಜ್ಯೋತ್ಸವದ ಮೆರವಣಿಗೆ ಜನವರಿ 26ರಂದು ಬೆಳಿಗ್ಗೆ 10: 30ಕ್ಕೆ ಪ್ರಾರಂಭವಾಗಲಿದೆ. ಇದಲ್ಲದೆ, ಸುಮಾರು 10,000 ರೂ. ವಿಶೇಷ ಅತಿಥಿಗಳನ್ನು ಸಹ ಭವ್ಯ ಕಾರ್ಯಕ್ರಮವನ್ನು ವೀಕ್ಷಿಸಲು ಆಹ್ವಾನಿಸಲಾಗಿದೆ.ಗಣರಾಜ್ಯೋತ್ಸವದ ಮೆರವಣಿಗೆ ಭಾರತದ ರಾಜಧಾನಿ ನವದೆಹಲಿಯ ಕರ್ತವ್ಯ ಪಥದಲ್ಲಿ ನಡೆಯಲಿದೆ. ಈ ರಸ್ತೆ ಇಂಡಿಯಾ ಗೇಟ್‌ನಿಂದ ರಾಷ್ಟ್ರಪತಿಗಳ ಅಧಿಕೃತ ನಿವಾಸವಾದ ರಾಷ್ಟ್ರಪತಿ ಭವನದವರೆಗೆ ವ್ಯಾಪಿಸಿದೆ.

ಗಣರಾಜ್ಯೋತ್ಸವ
ರಾಮನಾದರೇನು?
-ರಹೀಮನಾದರೇನು,
ಹೆಸರು ಹಲವು ಇರುವವು
ಗುರುತಿನಲ್ಲಿ ಕರೆಯಲು, ಜೀವನ ಸಾಗಿಸಲು

ಮನುಷ್ಯ ಧರ್ಮವಿದು ಒಂದೇ,
ಭಾಷೆ ಬೇರೆಯಾದರೂ ಹೃದಯದಿ
ಮೂಡಿದ ಕಾರುಣ್ಯದ ಭಾವವಿದು ಒಂದೇ,
ಊರು ನೂರಾರು ಆದರೇನು ಬದುಕುವ ನೆಲ ಒಂದೇ,

ರೂಪ ಪ್ರದೀಪದಿ ಬೇಕುಗಳು ಅಗಣಿತವಾದರೇನು
ಕಾಣುವ ಬೆಳಕಿದು ಒಂದೇ,
ಅವ ಬಿಳಿಯ ಇವ ಕರಿಯ ಆದರೇನು
ಇಲ್ಲಿ ಒಡಲೊಳಗೆ ಹರಿಯುವ ರಕ್ತದ ಬಣ್ಣವಿದು ಒಂದೇ,

ಹೆತ್ತ ತಾಯಿ ಬೇರೆ ಬೇರೆಯಾಗಿ ಹತ್ತಾರು
ಹೆಸರಲಿ ಕರೆಯಬಹುದು ಹೊತ್ತ ಭೂಮಿ ಒಂದೇ,
ನೋವೊಂದೇ ನಲಿವೊಂದೇ ಕುಡಿಯುವ ಜಲವೊಂದೇ,
ಉಸಿರಾಟಕೆಒದಗಿಬರುವಗಾಳಿಯೊಂದೆ

ಎರಡು ಕಣ್ಣಿದ್ದರು ನೋಟ ಒಂದೇ,
ಎರಡು ಕಾಲಿದ್ದರು ನಡಿಗೆ ಒಂದೇ,
ಜಾತಿ ಸಾವಿರವಿದ್ದರು ತಣ್ಣಗೆ ಬೆಳಗೋ ಜ್ಯೋತಿ ಒಂದೇ,
ಇರುಳಿಗೆಚಂದ್ರಹಗಲಿಗೆರವಿಯೊಂದೆ

ಆಚಾರ-ವಿಚಾರಗಳು, ನಡೆ-ನುಡಿಯ ದೀಪ್ತಿಗಳು,
ಹಬ್ಬ ಹರಿದಿನಗಳು,
ಸಂಪ್ರದಾಯ- ಸಂಸ್ಕ್ರತಿಗಳು ಭಿನ್ನ
ವಿಭಿನ್ನವಾದರೇನು ಭಾರತ ನಮಗೊಂದೇ,

ತಾಯಿ ಗರ್ಭದಿಂದ ಭೂಗರ್ಭದವರೆಗೆ
ಸಾಗುವ ಈ ಬದುಕು ಬೆಳಕು
ಆರಿದ ಮೇಲೆ
ಸೇರುವ ಸ್ಮಶಾನದ ನೆಲ ಒಂದೇ,
ಭಾವೈಕ್ಯತೆಯ ನಾಡಿನಲ್ಲಿ
ದ್ವೇಷವ ಸಂಹರಿಸಿಬಾಂಧವ್ಯದಿ ಗುಂಪುಗೂಡಿ
ಅಕ್ಕರೆಯ ಒಲುಮೆಯಲ್ಲಿ ನಲಿದು ಬಾಳುವುದೇ ನಿಜದ ಗಣರಾಜ್ಯೋತ್ಸವ

-ಪರಮೇಶ ಕೆ.ಉತ್ತನಹಳ್ಳಿ,
ಕನ್ನಡ ಸಹಾಯಕ ಪ್ರಾಧ್ಯಾಪಕ,
ಹಿಂದೂಸ್ಥಾನ್ಕಾಲೇಜು ಹಾಗೂ
ಹವ್ಯಾಸಿ ಬರಹಗಾರ, ಮೈಸೂರು.

Leave a Reply

Your email address will not be published. Required fields are marked *