2 ಕೋಟಿ ರೂ.ವೆಚ್ಚದ ರಸ್ತೆ,ಅಭಿವೃದ್ದಿ ಕಾಮಗಾರಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಭೂಮಿಪೂಜೆ

ಚಾಮರಾಜನಗರ: ಗ್ರಾಮೀಣ ರಸ್ತೆಗಳು ಮತ್ತು ಸಂಪರ್ಕ ರಸ್ತೆಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು,ರಸ್ತೆಗಳು ಗ್ರಾಮೀಣ ಅಭಿವೃದ್ದಿಯ ಪ್ರತೀಕವಾಗಿದೆ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.

ಲೋಕೋಪಯೋಗಿ ಇಲಾಖೆ ವತಿಯಿಂದ 2 ಕೋಟಿ ರೂ ವೆಚ್ಚದಲ್ಲಿ ತಾಲ್ಲೂಕಿನ ಬೇಡರಪುರ ಕ್ರಾಸ್ ನಿಂದ ಬೆಂಡರವಾಡಿ, ಆಯ್ದ ಭಾಗಗಳಸಂಪರ್ಕ ರಸ್ತೆ ಅಭಿವೃದ್ದಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು

.ನಂತರ ಮಾತನಾಡಿದ ಅವರು, ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಲ್ಲಿ ರಸ್ತೆ. ಕುಡಿಯುವ ನೀರು,ಸಮುದಾಯ ಭವನ,ಸೇರಿದಂತೆ ನಾಗರೀಕರ ಬೇಡಿಕೆಗೆ ಪೂರಕವಾಗುವಂತೆ ಹಲವು ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ವಿವಿಧ ಯೋಜನೆಗಳಡಿ ಅನುದಾನ ಮಂಜೂರುಮಾಡಿಸಿ, ಸಿಸಿ ರಸ್ತೆ,ಚರಂಡಿಗಳನ್ನು ನಿರ್ಮಿಸಲಾಗುತ್ತಿದೆಗುಣಮಟ್ಟವನ್ನು ಕಾಯ್ಧುಕೊಳ್ಳುವಂತೆ ಸಂಬಂಧಿಸಿದ ಗುತ್ತಿಗೆದಾರರಿಗೆ ಶಾಸಕರು ಸೂಚಿಸಿದರು.

ಗ್ರಾ.ಪಂ ಅಧ್ಯಕ್ಷ .ಮಲ್ಲೇಶ್, ಸದಸ್ಯರಾದ ಮಹದೇವಸ್ವಾಮಿ, ಮಲ್ಲು,ಚಂದ್ರು,ಎಸ್,ಡಿ,ಎಂ,ಸಿ ಅಧ್ಯಕ್ಷ ಮಹೇಶ್, ಮುಖಂಡರಾದ ಮಲ್ಲಪ್ಪ, ಶಿವಮಲ್ಲು, ನಾರಾಯಣ್, ಮಲ್ಲೇಶ್, ಶಿವರಾಜು, ಎಸ್‍ಪಿಕೆ ಉಮೇಶ್, ಸೇರಿದಂತೆ ಗ್ರಾಮದ ಮುಖಂಡರು ಗ್ರಾಮಸ್ಥರು ಹಾಜರಿದ್ದರು.

ಚಾಮರಾಜನಗರತಾಲ್ಲೂಕಿನ ಬೇಡರಪುರ ಗ್ರಾಮಕ್ಕೆ ಸಂಪರ್ಕಿಸುವ ಬೆಂಡರವಾಡಿ ಸಂಪರ್ಕ ರಸ್ತೆ ಅಭಿವೃದ್ದಿ ಕಾಮಗಾರಿಗೆ ಶಾಸಕ ಸಿ,ಪುಟ್ಟರಂಗಶಟ್ಟಿ ಭೂಮಿಪೂಜೆ ನೆರವೇರಿಸಿದರು.

Leave a Reply

Your email address will not be published. Required fields are marked *