ಮದ್ದೂರು, ಬಂಡೀಪುರ ಚೆಕ್‍ಪೋಸ್ಟ್ ಬಳಿ ದಾಖಲೆ ಇಲ್ಲದ 4,98,500 ರೂ. ಹಣ ವಶ

ಚಾಮರಾಜನಗರ: ಲೋಕಸಭಾ ಸಾರ್ವತ್ರಿಕ ಚುನಾವಣಾ ಸಂಬಂಧ ಕಾರ್ಯನಿರ್ವಹಿಸುತ್ತಿರುವ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮದ್ದೂರು ಹಾಗೂ ಬಂಡೀಪುರ ಚೆಕ್‍ಪೋಸ್ಟ್‍ಗಳಲ್ಲಿ ದಾಖಲೆಗಳಿಲ್ಲದೆ ಸಾಗಾಣಿಕೆ ಮಾಡುತ್ತಿದ್ದ ಒಟ್ಟು 4,98,500 ರೂ. ಗಳನ್ನು ಎಸ್.ಎಫ್.ಟಿ ತಂಡದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಮದ್ದೂರು ಚೆಕ್‍ಪೋಸ್ಟ್‍ನಲ್ಲಿ ಬೆಳಿಗ್ಗೆ 8.45 ಗಂಟೆ ಸಮಯದಲ್ಲಿ ಕೇರಳದಿಂದ ಬರುತ್ತಿದ್ದ ಕೆಎಲ್-77 ಡಿ 1539 ಸಂಖ್ಯೆಯ ಅಶೋಕ ಲೈಲ್ಯಾಂಡ್ ಲಘು ಗೂಡ್ಸ್ ವಾಹನದಲ್ಲಿ ಮಹಮ್ಮದ್ ಸಾದಿಕ್ ಮತ್ತು ಲೀನಿಸ್ ಎಂಬುವವರಿಂದ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 94,0000 ರೂ. ಗಳನ್ನು ಮತ್ತು ಬೆಳಿಗ್ಗೆ 9.30 ಗಂಟೆ ಸಮಯದಲ್ಲಿ ಕೇರಳದಿಂದ ಬರುತ್ತಿದ್ದ ಕೆಎಲ್-33 ಕೆ 4656 ಸಂಖ್ಯೆಯ ಮಹೇಂದ್ರ ಬೋಲ್ಯಾರೋ ವಾಹನದಲ್ಲಿ ಮೋಹನ್ ಪಿ.ಕೆ ಬಿನ್ ಕುಂನು ಎಂಬುವವರಿಂದ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 1,00,000 ಸಾವಿರ ರೂ. ಗಳನ್ನು ಎಸ್.ಎಫ್.ಟಿ ತಂಡದ ಅಧಿಕಾರಿ ಡಿ.ಎಂ. ಗುರುಮಲ್ಲೇಶ್ ತಂಡದವರು ಜಪ್ತಿ ಮಾಡಿದ್ದಾರೆ.

ಬಂಡೀಪುರ ಚೆಕ್‍ಪೋಸ್ಟ್‍ನಲ್ಲಿ ಬೆಳಿಗ್ಗೆ 8.30 ಗಂಟೆ ಸಮಯದಲ್ಲಿ ಕೇರಳದಿಂದ ಬರುತ್ತಿದ್ದ ಕೆಎಲ್-77 ಎ 0444 ಸಂಖ್ಯೆಯ ಅಶೋಕ ಲೈಲ್ಯಾಂಡ್ ಲಘು ಗೂಡ್ಸ್ ವಾಹನದಲ್ಲಿ ರಫೀಕ್ ಬಿನ್ ಕೋಯ ಎಂಬುವವರಿಂದ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 1,06,0000 ರೂ. ಗಳನ್ನು ಎಸ್.ಎಫ್.ಟಿ ತಂಡದ ಅಧಿಕಾರಿ ಎಂ.ಪಿ. ಶಿವಸ್ವಾಮಿ ತಂಡದವರು ಜಪ್ತಿ ಮಾಡಿದ್ದಾರೆ.

ಬಂಡೀಪುರ ಚೆಕ್‍ಪೋಸ್ಟ್‍ನಲ್ಲಿ ಬೆಳಿಗ್ಗೆ 10.30 ಗಂಟೆ ಸಮಯದಲ್ಲಿ ಕೇರಳದಿಂದ ಬರುತ್ತಿದ್ದ ಕೆಎಲ್-55 ಎಎ 9548 ಸಂಖ್ಯೆಯ ಟಾಟಾ ಗೂಡ್ಸ್ ವಾಹನದಲ್ಲಿ ದಿನೇಶ್ ಬಿನ್ ಚಂದ್ರನ್ ಎಂಬುವವರಿಂದ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 94,500 ಸಾವಿರ ರೂ. ಗಳನ್ನು ಮತ್ತು ಬೆಳಿಗ್ಗೆ 11 ಗಂಟೆ ಸಮಯದಲ್ಲಿ ಕೇರಳದಿಂದ ಬರುತ್ತಿದ್ದ ಕೆಎಲ್-36 ಕೆ 4073 ಸಂಖ್ಯೆಯ ಟಾಟಾ ಗೂಡ್ಸ್ ವಾಹನದಲ್ಲಿ ಕಿಶೋರ ಬಿನ್ ಶ್ರೀಧರನ್ ಎಂಬುವವರಿಂದ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 1,04,0000 ರೂ. ಗಳನ್ನು ಎಸ್.ಎಫ್.ಟಿ ತಂಡದ ಅಧಿಕಾರಿ ಎಸ್. ಮಂಜುನಾಥ್ ತಂಡದವರು ಜಪ್ತಿ ಮಾಡಿದ್ದಾರೆ.

ಹಣ ಸಾಗಣೆ ಮಾಡುತ್ತಿದ್ದ ಬಗ್ಗೆ ವಿಚಾರಣೆ ಮಾಡಿದ ವೇಳೆ ಸ್ಪಷ್ಟ, ಸಮಂಜುಸ ಉತ್ತರ ದೊರೆಯದ ಹಿನ್ನೆಲೆಯಲ್ಲಿ ಹಣ ವಶಕ್ಕೆ ಪಡೆದು ಗುಂಡ್ಲುಪೇಟೆ ಉಪ ಖಜಾನೆಯಲ್ಲಿ ಇರಿಸಲಾಗಿದೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಶಿಲ್ಪಾ ನಾಗ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *