ಚಾಮರಾಜನಗರ: ನಗರದ ದೇವಾಂಗ ೨ನೇ ಬೀದಿಯಲ್ಲಿರುವ ಕನ್ನಡ ಗುಂಪಿನ ದೇವಾಂಗ ಜನಾಂಗ ಟ್ರಸ್ಟ್ಗೆ ಸೇರಿದ ಶ್ರೀ ರಾಮಲಿಂಗ ಚೌಡೇಶ್ವರೀ ಅಮ್ಮನವರ ದೇವಸ್ತಾನದಲ್ಲಿ ೬೫ನೇ ವರ್ಷದ ವರ್ಧಂತಿ ಮಹೋತ್ಸವವು ಮಂಗಳವಾರ ವಿಜೃಂಭಣೆಯಿ0ದ ನೆರವೇರಿತು.
ಬೆಳಿಗ್ಗೆ ದೇವಸ್ಥಾನದಲ್ಲಿ ಪುಣ್ಯಾಹ, ನವಗ್ರಹ ಪೂಜಾ, ಹೋಮ, ಹವನ ನಡೆದು ಮಧ್ಯಾಹ್ನ ಮಹಾ ಮಂಗಳಾರತಿ ನಡೆಯಿತು. ವಿಶೇಷವಾಗಿ ಚೌಡೇಶ್ವರೀ ಅಮ್ಮನವರು, ರಾಮಲಿಂಗೇಶ್ವರ ಹಾಗೂ ವೆಂಕಟರಮಣಸ್ವಾಮಿ ದೇವರಿಗೆ ಬಗೆ ಬಗೆಯ ಹೂವಿನ ಅಲಂಕಾರ ಮಾಡಲಾಗಿತ್ತು,
ಈ ಪೂಜಾ ಕಾರ್ಯಕ್ರಮಕ್ಕೆ ಮೈಸೂರು, ಕೊಳ್ಳೇಗಾಲ, ಹನೂರು, ವೆಂಕಟಯ್ಯನ ಛತ್ರ, ರಾಮಸಮುದ್ರ, ಬೊಮ್ಮಲಾಪುರ, ಹರದನಹಳ್ಳಿ ಸೇರಿದಂತೆ ವಿವಿಧ ಭಾಗಗಳಿಂದ ನೂರಾರು ಸಂಖ್ಯೆ ಭಕ್ತರು ಭಾಗವಹಿಸಿ ದೇವರ ದರ್ಶನ ಪಡೆದು ಪುನೀತರಾದರು. ಹಾಗೂ ನೆರೆದಿದ್ದ ಭಕ್ತಾಧಿಗಳಿಗೆ ಪ್ರಸಾದ ಮತ್ತು ಅನ್ನ ಸಂತರ್ಪಣೆ ಮಾಡಲಾಯಿತು, ಇದೇ ವೇಳೆ ಮಕ್ಕಳಿಂದ ಭರತ ನಾಟ್ಯ, ಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು, ರಾತ್ರಿ ರಾಮಲಿಂಗ ಚೌಡೇಶ್ವರೀ ಉತ್ಸವ ಮೂರ್ತಿಯನ್ನು ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಯಜಮಾನರಾದ ಸಿ.ಬಿ.ಬಂಗಾರು ಸಿ.ಬಿ, ಗೋವಿಂದರಾಜು, ಎನ್.ನಾಗೇಂದ್ರ, ವೆಂಕಟಯ್ಯನ ಛತ್ರದ ಯ,ವೆಂಕಟೇಶ್, ಮುಖಂಡರಾದ ಸಿ.ಕೆ. ಗುಣಶೇಖರ, ಸಿ.ಬಿ. ಶ್ರೀನಿವಾಸ್, ಸಿ.ಬಿ. ವೆಂಕಟೇಶ್, ನಾರಾಯಣ, ನಾಗರಾಜು, ಕಾಂತರಾಜು, ಗಣೇಶ್, ಗೋಪಾಲ್, ಸಿ. ನಾಗರಾಜು, ಅರ್ಚಕರಾದ ಮುರಳಿಕೃಷ್ಣ, ಕೇಶವಮೂರ್ತಿ, ರವಿ, ಅನಂತು, ರಂಗಸ್ವಾಮಿ (ಪಾಪು), ಚಂದ್ರಶೇಖರ (ಬೋಜ) ಬಟ್ಟೆ ಕೃಷ್ಣ, ಯುವಕರ ಸಂಘದ ಜಿ.ಸಂತೋಷ್, ಪ್ರಜ್ವಲ್, ಪ್ರಕಾಶ್, ನವೀನ್, ಪುರುಷೋತ್ತಮ, ಲಕ್ಮಿಕಾಂತ, ಟೈಲರ್ ಚಂದ್ರು, ಮಹಿಳಾ ಸಂಘದ ಪದಾಧಿಕಾರಿಗಳಾದ ತ್ರೀವೇಣಿ, ಕನಕಲಕ್ಮೀ, ರಾಜಲಕ್ಮೀ, ಲಾವಣ್ಯ, ಭಾರತಿ, ಪ್ರೇಮ ಸೇರಿದಂತೆ ಮೊದಲಾದವರು ಇದ್ದರು.