ಹಿಂದುಸ್ಥಾನ್ ಕಾಲೇಜಿನಲ್ಲಿ 79ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ

ಮೈಸೂರಿನ ಹಿಂದುಸ್ಥಾನ್ ಕಾಲೇಜಿನಲ್ಲಿ 79ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಸಿ.ಎಫ್.ಟಿ.ಆರ್.ಐ.ನ ನಿವೃತ್ತ ವಿಜ್ಞಾನಿಗಳಾದ ಡಾ. ಸೌಭಾಗ್ಯ ಎಸ್.ಬಿ ಮೇಡಂ ಅವರು ಭಾಗವಹಿಸಿ ಧ್ವಜಾರೋಹಣ ನೆರವೇರಿಸಿದರು, ಕಾಲೇಜಿನ ಪ್ರಾಂಶುಪಾಲರಾದ ಡಾ. ಸಿ.ಜೆ. ಪ್ರಿಯಾ ಮೇಡಂ ಅವರು ಅಧ್ಯಕ್ಷತೆ ವಹಿಸಿದ್ದರು. ಮಾನವ ಸಂಪನ್ಮೂಲ ಮತ್ತು ಮುಖ್ಯ ನಿರ್ವಾಹಕರಾದ ಸುಜಿಮೋನ್ ಜೋಸೆಫ್ ಅವರು, ಜನರಲ್ ಮ್ಯಾನೇಜರ್, ತಾಂತ್ರಿಕ ದೃಷ್ಟಿಕೋನ ಕಾರ್ಯನಿರ್ವಹಣಾ ಅಧಿಕಾರಿಗಳಾದ ಜರ್ನೈಲ್ ಸಿಂಗ್ ಸಿಧು ಅವರು, ಬೋಧಕರು, ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು‌.

Leave a Reply

Your email address will not be published. Required fields are marked *