
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಹೆಮ್ಮೆಯ ವಿದ್ಯಾಸಂಸ್ಥೆಯಾದ ಜ್ಞಾನಗಂಗಾ ಪದವಿ ಪೂರ್ವ ಕಾಲೇಜು 2023-24ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿದೆ. ಪೂರ್ಣಪ್ರಮಾಣದ ಉಪನ್ಯಾಸಕರ ತರಬೇತಿಯಿಂದ ಈ ಸಾಧನೆ ಮಾಡಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಚಂದು ಕುಮಾರಿ ಡಿ. 577 ಅಂಕ ಪಡೆದು ವಿಜ್ಞಾನ ವಿಭಾಗದಲ್ಲಿ ಕಾಲೇಜಿಗೆ ಮೊದಲಿಗರಾಗಿ ಶ್ರೇಷ್ಠ ಸಾಧನೆ ಮಾಡಿದ್ದಾರೆ.
ಅರ್ಪಿತ ಕೌಶಿಕ್ ಎಂ.ಆರ್.570 ಅಂಕಗಳನ್ನು ಪಡೆದು ವಾಣಿಜ್ಯ ವಿಭಾಗದಲ್ಲಿ ಮೊದಲಿಗರಾಗಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಶ್ರೇಯಸ್ ಕೆ. 570, ಸೋನು ಎನ್. 568, ಶಾಲು ಕುಮಾರಿ 566, ಅಮೋಘ ಬಿ.ವಿ. 554, ಪೂರ್ಣಚಂದ್ರ 547, ಸಂಜನ 545, ಚೈತನ್ಯ 542, ಮನೀಶ್ ಕುಮಾರ್ 538, ನಂದಿತ 537, ಮಹಾಲಕ್ಷ್ಮಿ ಎಸ್. 535, ಯಶ್ವಂತ್ 534, ಹಿತೀಶ್ 533, ಎನ್. ಸೃಜನ್ 524, ಸುಪ್ರಿತ ಕೆ. 522 ಇವರು ವಿಜ್ಞಾನ ವಿಭಾಗದಲ್ಲಿ ಅತ್ಯುತ್ತಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಒಟ್ಟಾರೆ ಕಾಲೇಜಿನ ಫಲಿತಾಂಶ ಶೇ.97ರಷ್ಟು ಬಂದಿದ್ದು, ಇವರಲ್ಲಿ 16 ಅತ್ಯುನ್ನತ ದರ್ಜೆ, 50 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಇವರಿಗೆ ಪ್ರಾಂಶುಪಾಲರು, ಕಾಲೇಜಿನ ಸಿಬ್ಬಂದಿ ವರ್ಗದವರು ಅಭಿನಂದನೆಗಳನ್ನು ತಿಳಿಸಿದ್ದಾರೆ.