ಕಾಗಲವಾಡಿಯಲ್ಲಿ ಅದ್ದೂರಿ ಹಾಲರವೆ ಉತ್ಸವ

 ಚಾಮರಾಜನಗರ: ತಾಲೂಕಿನ ಕಾಗಲವಾಡಿ ಗ್ರಾಮದಲ್ಲಿ ಕಡೇ ಕಾರ್ತಿಕ ಸೋಮವಾರದ ಅಂಗವಾಗಿ  ಶ್ರೀಮಲೇಮಹದೇಶ್ವರಸ್ವಾಮಿಯ 17ನೇ ವರ್ಷದ 101ನೇ ಹಾಲರವೆ  ಪೂಜಾ  ಮಹೋತ್ಸವ ಜಾನಪದ ಕಲಾತಂಡಗಳೊಂದಿಗೆ
ಅದ್ದೂರಿಯಾಗಿ ನಡೆಯಿತು.
     ಗ್ರಾಮದ ಶ್ರೀಮಹದೇಶ್ವರ ದೇವಸ್ಥಾನದಿಂದ  ಸತ್ತಿಗೆ ಸೂರಿಪಾನಿ, ಶ್ರೀಮಹದೇಶ್ವರ ಉತ್ಸವಮೂರ್ತಿಯನ್ನು
ಗ್ರಾಮದ ಸರ್ಕಾರಿ ಶಾಲೆ ಆವರಣಕ್ಕೆ ತೆರಳಿ
 ಸ್ವಚ್ಛಗೊಳಿಸಿ, ವಿವಿಧ ಹೂವುಗಳಿಂದ ಅಲಂಕರಿಸಿ,ವಿಶೇಷಪೂಜೆ ಸಲ್ಲಿಸಲಾಯಿತು. ನಂತರ  ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ದೇವಸ್ಥಾನದ ಬಳಿ ಮುಕ್ತಾಯವಾಯಿತು.
  ಶ್ರೀಮಹದೇಶ್ವರಸ್ವಾಮಿಗೆ ರುದ್ರಭೀಷೇಕ ಮತ್ತು ಬಿಲ್ವಾರ್ಚನೆ, ಮಹಾ ಮಂಗಳಾರತಿ, ಪೂಜಾ ಕಾರ್ಯಕ್ರಮಗಳು ನಡೆಯಿತು.ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
   ಮೆರವಣಿಗೆಯಲ್ಲಿ ಕೊರವರ ಕುಣಿತ, ಬೀಸುಕಂಸಾಳೆ, ಬ್ಯಾಂಡ್ ಸೆಟ್ ಮೆರವಣಿಗೆ ಮೆರಗು ನೀಡಿತು.  ಯುವಕರು ತಮಟೆ ಸದ್ದಿಗೆ ಕುಣಿದು ಸಂಭ್ರಮಿಸಿದರು. ಮಹಿಳೆಯರು ಪಂಜಿನ ಸೇವೆ ಮಾಡಿದರು.
ಮೆರವಣಿಗೆಯಲ್ಲಿ   ಕಾಗಲವಾಡಿ ಯಜಮಾನರು, ಕುಲಸ್ಥರು, ನಾಡುದೇಶದ ಯಜಮಾನರು,
ದೇವರಗುಡ್ಡರು, ಮಹದೇಶ್ವರಸ್ವಾಮಿ ಭಕ್ತರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *