
ಚಾಮರಾಜನಗರ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿಯಾಗಿ ಆಯ್ಕೆಯಾದ ಯರಿಯೂರು ನಾಗೇಂದ್ರ, ನಿರ್ದೇಶಕರಾಗಿ ಆಯ್ಕೆಯಾದ ಭಾನುಪ್ರಕಾಶ್ ಹಾಗೂ ಬಸವರಾಜು ಅವರನ್ನು ಎ.ಆರ್.ಕೃಷ್ಣಮೂರ್ತಿ ಅಭಿಮಾನಿ ಬಳಗದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಯಳಂದೂರು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿಯ ಅಧ್ಯಕ್ಷ ಕಿನಕಹಳ್ಳಿ ಪ್ರಭುಪ್ರಸಾದ್, ಅಭಿಮಾನಿ ಬಳಗದ ಕಂದಹಳ್ಳಿ ನಂಜುಂಡಸ್ವಾಮಿ, ಹೊನ್ನೂರು ರಾಘವೇಂದ್ರ ಪ್ರಸಾದ್, ದುಗ್ಗಹಟ್ಟಿ ಜಿ.ಮಾದೇಶ್, ಪಪಂ ನಾಮ ನಿರ್ದೇಶಿತ ಸದಸ್ಯ ಮುನಾವರ್ ಬೇಗ್, ಮುಖಂಡರಾದ ಶಿವನಂಜಯ್ಯ, ಸೋಮನಾಯಕ, ತಾಲೂಕು ಯೂತ್ ಕಾಂಗ್ರೆಸ್ ಅಧ್ಯಕ್ಷ ವಿಜಯ್ ಕುಮಾರ್ ಇದ್ದರು.