ರೋಟರಿ ಸಂಸ್ಥೆಯ ಮುಂದಿನ ಸಾಲಿನ ಅಧ್ಯಕ್ಷರಾಗಿ ಅಬ್ದುಲ್‌ ಅಜೀಜ್ ದೀನಾ, ಕಾರ್ಯದರ್ಶಿಯಾಗಿ ಜಿ.ಅಂಕಶೆಟ್ಟಿ

ಚಾಮರಾಜನಗರ: ರೋಟರಿಸಂಸ್ಥೆಯ 2026-27ನೇ ಸಾಲಿನ ಅಧ್ಯಕ್ಷರಾಗಿ ಅಬ್ದುಲ್‌ಅಜೀಜ್ ದೀನಾ, ಕಾರ್ಯದರ್ಶಿಯಾಗಿ ಜಿ.ಅಂಕಶೆಟ್ಟಿ ಅವಿರೋಧವಾಗಿ ಆಯ್ಕೆಯಾದರು.
ನಗರದ ರೋಟರಿ ಭವನದಲ್ಲಿ ಮಂಗಳವಾರ ರಾತ್ರಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಅಬ್ದುಲ್ ಅಜೀಜ್ ದೀನಾ, ಕಾರ್ಯದರ್ಶಿಯಾಗಿ ಜಿ.ಅಂಕಶೆಟ್ಟಿ, ನಿರ್ಗಮಿತ ಅಧ್ಯಕ್ಷರಾಗಿ ಚಂದ್ರಶೇಖರ್, ಮುಂದಿನ ಸಾಲಿನ ಅಧ್ಯಕ್ಷರಾಗಿ ಸಿದ್ದರಾಜು, ಉಪಾಧ್ಯಕ್ಷರಾಗಿ ಸುರೇಶ್ ಕುಮಾರ್, ಸಹ ಕಾರ್ಯದರ್ಶಿಯಾಗಿ ಮಹದೇವಪ್ರಸಾದ್, ದಂಡಪಾಣಿಯರಾಗಿ ರಮೇಶ್, ಕ್ಲಬ್ ಸರ್ವೀಸ್‌ರಾಗಿ ನೇಮಿರಾಜ್, ವೃತ್ತಿಸೇವೆ ನಿರ್ದೇಶಕರಾಗಿ ರತ್ನಮ್ಮ, ಸಮುದಾಯ ಸೇವೆ ನಿರ್ದೇಶಕರಾಗಿ ಸಿದ್ದಮಲ್ಲಪ್ಪ, ಅಂತಾರಾಷ್ಟ್ರೀಯ ಸೇವೆಯ ನಿರ್ದೇಶಕರಾಗಿ ಮಹದೇವಸ್ವಾಮಿ, ಯುವಸೇವೆ ನಿರ್ದೇಶಕ ರಾಮು, ವಿವಿಧ ಛೇರ್ಮನ್ ಗಳಾಗಿ ಜಿ.ಆರ್.ಅಶ್ವಥ್‌ ನಾರಾಯಣ್, ಸಿ.ವಿ. ಶ್ರೀನಿವಾಸಶೆಟ್ಟಿ, ಎಲ್.ನಾಗರಾಜು, ಪ್ರಭಕರ್, ಭವಾನಿದೇವಿ, ನಂಜುಂಡಸ್ವಾಮಿ, ಸಿ.ಎ.ನಾರಾಯಣ್, ಪ್ರಕಾಶ್, ಕೆ.ಮಹದೇವಸ್ವಾಮಿ, ಸಿ.ಎ.ರಮೇಶ್, ಸುಭಾಷ್, ಹರೀಶ್, ಕಮಲ್‌ರಾಜ್, ಚಂದ್ರಪ್ರಭಜೈನ್, ಬಿ.ಕೆ.ಮೋಹನ್, ಸಂಜಯ್‌ ಕುಮಾರ್ ಜೈನ್, ಉಲ್ಲಾಸ್, ಯೋಗರಾಜ್, ಡಾ.ಮಹದೇವಸ್ವಾಮಿ, ಶ್ರೀನಿವಾಸ್, ಶ್ರೀನಿವಾಸನ್, ರಾಜೇಂದ್ರ, ವಿ.ನಾಗರಾಜು,
ಜಿ.ಗುರುಸ್ವಾಮಿ ಅವಿರೋಧವಾಗಿ ಅಯ್ಕೆಯಾದರು. ಚುನಾವಣಾಧಿಕಾರಿಯಾಗಿ ಸಿ.ವಿ.ಶ್ರೀನಿವಾಸಶೆಟ್ಟಿ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.
ಸನ್ಮಾನ.: ರೋಟರಿಸಂಸ್ಥೆಯ 2026-27ನೇ ಸಾಲಿನ  ರೋಟರಿ ಸಂಸ್ಥೆ ಯ ಅಧ್ಯಕ್ಷರಾಗಿ ಅಬ್ದುಲ್‌ಅಜೀಜ್ ದೀನಾ, ಕಾರ್ಯದರ್ಶಿಯಾಗಿ ಜಿ. ಅಂಕಶೆಟ್ಟಿ ಅವಿರೋಧವಾಗಿ ಆಯ್ಕೆಯಾದರು. ಅವರನ್ನು ರೋಟರಿ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಅಬ್ದುಲ್‌ಅಜೀಜ್ ದೀನಾ ಮಾತನಾಡಿ, ರೋಟರಿಸಂಸ್ಥೆಯ 2026-27ನೇ ಸಾಲಿನ ಅಧ್ಯಕ್ಷರಾಗಿ ನನ್ನನ್ನು ಕಾರ್ಯದರ್ಶಿಯಾಗಿ ಜಿ.ಅಂಕಶೆಟ್ಟಿ ಹಾಗೂ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಿದ ರೋಟರಿ ಸಂಸ್ಥೆಯ ಪದಾಧಿಕಾರಿಗಳಿಗೆ ಈ ಮೂಲಕ ಅಭಿನಂದನೆ ಸಲ್ಲಿಸುತ್ತೇನೆ. ಎಲ್ಲರ ಸಹಕಾರದೊಂದಿಗೆ ರೋಟರಿ ಸೇವೆಯನ್ನು ನಿರಂತರವಾಗಿ ಮಾಡುವುದಾಗಿ ತಿಳಿಸಿದರು.

Leave a Reply

Your email address will not be published. Required fields are marked *