ಸೋಲು-ಗೆಲುವು ಸಮನಾಗಿ ಸ್ವೀಕರಿಸಿ : ಓಲೆಮಹದೇವ

 ಜೈಭೀಮ್ ಟೆನ್ನಿಸ್‌ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ

 ಚಾಮರಾಜನಗರ : ಕ್ರೀಡೆ ಎಂದ ಮೇಲೆ ಸೋಲು-ಗೆಲುವು ಸಹಜವಾದದ್ದು ಕ್ರಿಕೆಟ್ ಆಟಗಾರರು ಸೋಲು-ಗೆಲುವುವನ್ನು ಸಮನಾಗಿ ಸ್ವೀಕರಿಸಬೇಕು ಎಂದು ಗುತ್ತಿಗೆದಾರ ಓಲೆ ಮಹದೇವ ಹೇಳಿದರು.
      ನಗರದ ಸಿದ್ಧಾರ್ಥ ಕಾಲೇಜು ಆವರಣದಲ್ಲಿ ಜೆಬಿಸಿಸಿ ವತಿಯಿಂದ ಅಯೋಜಿಸಿದ ಜೈಭೀಮ್ ಕಪ್ ಕ್ರಿಕೆಟ್ ಲೀಗ್ -2026 ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಪಂದ್ಯಾವಳಿಗೆ ಬ್ಯಾಟ್ ಮಾಡುವ ಮೂಲಕ ಚಾಲನೆ ನೀಡಿದರು.
ಪ್ರಸ್ತುತ ದಿನಗಳಲ್ಲಿ ಯುವಜನತೆಯು ಕ್ರೀಡೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಕೊಂಡು ದೈಹಿಕವಾಗಿ, ಮಾನಸಿಕವಾಗಿ ಸದೃಢರಾಗಬೇಕು ಎಂದು ಕ್ರಿಕೆಟ್ ಆಟಗಾರರಿಗೆ, ಅಯೋಜಕರಿಗೆ ಶುಭ ಕೋರಿದರು.
  ಮುಖ್ಯ ಅತಿಥಿ ಅತಿಥಿಯಾಗಿ ಭಾಗವಹಿಸಿದ್ದ ಸಾಹಿತಿ ಮಂಜುಕೋಡಿಉಗನೆ ಮಾತನಾಡಿ, ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಸರಿನಲ್ಲಿ ಪಂದ್ಯಾವಳಿ ಅಯೋಜನೆ ಮಾಡಿರುವುದು ತುಂಭಾ ಸಂತಸದಾಯಕವಾಗಿದೆ ಎಂದು ಮೆಚ್ಚಿಗೆ ವ್ಯಕ್ತಪಡಿಸಿದರು. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ ಉಪಾಧ್ಯಕ್ಷ ಎನ್.ಮಹೇಶ್, ಮಹದೇವಯ್ಯ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಯೋಜಕರಾದ ಲೋಕೇಶ್, ಮಲ್ಲೇಶ್, ಹರೀಶ್, ಮನೋಜ್, ಶಿವಕುಮಾ‌ರ್, ಗುತ್ತಿಗೆದಾರ ದೊರೆಸ್ವಾಮಿ, ಮೂರ್ತಿಮುಡಿಗುಂಡ, ಸಾಹಿತಿ ದೊಡ್ಡರಾಯಪೇಟೆ ಸಿದ್ದರಾಜು, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ ಸ್ಥಳೀಯ ಸಮಿತಿ ಅಧ್ಯಕ್ಷ ಮುರುಳಿಕೃಷ್ಣ, ಉಪಾಧ್ಯಕ್ಷ ಎಸ್.ಮಂಜುನಾಥ್, ಖಜಾಂಚಿ ಎಸ್.ರಮೇಶ್, ನಿರ್ದೇಶಕ ಡಿ.ಪಿ.ನಾಗರಾಜು, ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಮಹದೇವ, ಡಾ. ಬಿ.ಆರ್.ಅಂಬೇಡ್ಕರ್ ಸಂಘದ ಅಧ್ಯಕ್ಷ ಪ್ರದೀಪ್‌ಕುಮಾರ್, ಎಸ್‌ಸ್ಸಿ,ಎಸ್‌ಟಿ ಕೇಂದ್ರ ಕಾರ್ಯ
ಕಾರಿ ಸಮಿತಿ ಸದಸ್ಯ ಮಂಜುನಾಥ್, ಅಧ್ಯಕ್ಷ ಪ್ರಶಾಂತ್, ಉಪಾಧ್ಯಕ್ಷ ಸಂತೋಷ್ ಕುಮಾರ್, ನಿರ್ದೇಶಕ ಮೋಹನ್, ಕ್ರಿಕೆಟ್ ಆಟಗಾರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *