ಚಾಮರಾಜನಗರ: ಚಾಮರಾಜನಗರ ಲೋಕಸಭೆಕ್ಷೇತ್ರದಚುನಾವಣೆ ಸಂಬಂಧ ಮಾ.29 ರಂದು ಬೆಳಗ್ಗೆ 11ಕ್ಕೆ ನಗರದ ನಂಜನಗೂಡುರಸ್ತೆಯಖಾಸಗಿಕಲ್ಯಾಣಮಂಟಪದಲ್ಲಿ ಪೂರ್ವಭಾವಿ ಹಮ್ಮಿಕೊಳ್ಳಲಾಗಿದೆ ಎಂದುಎಂಎಸ್‍ಐಎಲ್ ಅಧ್ಯಕ್ಷರು ಆದ ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.
ನಗರದಜಿಲ್ಲಾಕಾಂಗ್ರೆಸ್ ಸಮಿತಿಕಚೇರಿಯಲ್ಲಿ ನಡೆದ ಪಕ್ಷದ ಪದಾಧಿಕಾರಿಗಳು, ಮುಖಂಡರು ಮತ್ತುಕಾರ್ಯಕರ್ತರ ಸಭೆಯಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಂದಿನ ಸಭೆಯಲ್ಲಿ ಮೈಸೂರುಜಿಲ್ಲಾಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ, ಚಾಮರಾಜನಗರಜಿಲ್ಲಾಉಸ್ತುವಾರಿ ಸಚಿವ ಕೆ.ವೆಂಕಟೇಶ್, ಕೆಪಿಸಿಸಿ ಕಾರ್ಯಾಧ್ಯಕ್ಷತನ್ವೀರ್ ಸೇಠ್ ಸೇರಿದಂತೆ ಪಕ್ಷದಚಾಮರಾಜನಗರಜಿಲ್ಲಾ ಶಾಸಕರು ಭಾಗವಹಿಸುವರು.
ಸಿದ್ದರಾಮಯ್ಯ ನೇತೃತ್ವದರಾಜ್ಯಕಾಂಗ್ರೆಸ್ ಸರ್ಕಾರಅಧಿಕಾರಕ್ಕೆ ಬಂದೊಡನೆಯೇ 5 ಗ್ಯಾರಂಟಿಗಳನ್ನು ಜಾರಿಗೆತಂದುಜನರಿಗೆ ಅನೂಕೂಲ ಮಾಡಿಕೊಟ್ಟಿದೆ.ಇವುಗಳನ್ನು ಮುಂದಿಟ್ಟುಕೊಂಡು ಪಕ್ಷಚುನಾವಣೆಎದುರಿಸಬೇಕಿದೆ.
ಪಕ್ಷದಅಭ್ಯರ್ಥಿಯನ್ನುಗೆಲ್ಲಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಕೈಯ್ಯನ್ನು ಬಲಪಡಿಸಬೇಕು, ಮಾ.29 ರಂದು ನಡೆಯುವ ಪೂರ್ವಭಾವಿ ಸಭೆಯಲ್ಲಿ ಪಕ್ಷದಕಾರ್ಯಕರ್ತರು, ಮುಖಂಡರು ಹೆಚ್ಚಿನಸಂಖೈಯಲ್ಲಿ ಭಾಗವಹಿಸಬೇಕು, ಜಿಲ್ಲೆಯಿಂದ ಹೆಚ್ಚಿನಸಂಖ್ಯೆಯಲ್ಲಿಕಾರ್ಯಕರ್ತರು ಭಾಗವಹಿಸುವಂತೆ ಮನವಿ ಮಾಡಿದರು.
ಜಿಲ್ಲಾಕಾಂಗ್ರೆಸ್‍ಅಧ್ಯಕ್ಷ, ಕಾಡಾಅಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿ, ಬಿಜೆಪಿ ಸರ್ಕಾರಅಧಿಕಾರಕ್ಕೆ ಬಂದಆರಂಭದಲ್ಲಿ ಪ್ರತಿಯೊಬ್ಬರಖಾತೆಗೆ 15ಲಕ್ಷ, ಉದ್ಯೋಗಸೃಷ್ಟಿ ಮಾಡುವುದಾಗಿ ಹೇಳಿ ಅಧಿಕಾರಕ್ಕೆ ಬಂದುಜನರಿಗೆ ಸುಳ್ಳು ಭರವಸೆ ನೀಡಿತು. ಆದರೆ ನಮ್ಮ ಪಕ್ಷದ ಸರ್ಕಾರ ವಿಧಾನಸಭೆಚುನಾವಣೆಯಲ್ಲಿ ಭರವಸೆ ನೀಡಿದಂತೆ 5 ಗ್ಯಾರಂಟಿಯೋಜನೆಜಾರಿಗೆತಂದು, ನುಡಿದಂತೆ ನಡೆದಿದೆ.’
ಈ ಬಾರಿಯ ಲೋಕಸಭೆಚುನಾವಣೆಯಲ್ಲಿ ಪಕ್ಷದಕಾರ್ಯಕರ್ತರುಕಾಂಗ್ರೆಸ್ ಸರ್ಕಾರದ ಗ್ಯಾರಂಟಿಯೋಜನೆಗಳನ್ನು ಪ್ರತಿಯೊಬ್ಬ ಮತದಾರರಿಗೂ ಮನವರಿಕೆ ಮಾಡಿಕೊಡಬೇಕು, ಮಾ.29 ರಂದು ನಡೆಯುವ ಪೂರ್ವಭಾವಿ ಸಭೆಯಲ್ಲಿ ಹೆಚ್ಚಿನಸಂಖ್ಯೆಯಲ್ಲಿಭಾಗವಹಿಸುವ ಸಂಬಂಧ ಪಕ್ಷದಮುಖಂಡರು ಹೆಚ್ಚಿನಜವಾಬ್ದಾರಿವಹಿಸಬೇಕು ಎಂದರು.
ಜಿಲ್ಲಾಕಾಂಗ್ರೆಸ್‍ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಪ್ರದಾನ ಕಾರ್ಯದರ್ಶಿಗಳಾದ ಚಿಕ್ಕಮಹಾದೇವ್, ಆರ್.ಮಹಾದೇವ, ಬ್ಲಾಕ್‍ಕಾಂಗ್ರೆಸ್‍ಅಧ್ಯಕ್ಷರಾದ ಮಹಮದ್‍ಅಸ್ಗರ್, ಎ.ಎಸ್.ಗುರುಸ್ವಾಮಿ, ಒಬಿಸಿ ರಾಜ್ಯಪ್ರಧಾನಕಾರ್ಯದರ್ಶಿ ಸಿ.ಎ.ಮಹದೇವಶೆಟ್ಟಿ, ಎಸ್ಟಿಮೋರ್ಚಾ ಪ್ರದಾನ ಕಾರ್ಯದರ್ಶಿ ಪು.ಶ್ರೀನಿವಾಸನಾಯಕ, ಎಪಿಎಂಸಿ ಸದಸ್ಯ ಎ.ಎಸ್.ಪ್ರದೀಪ್, ಜಿಪಂಮಾಜಿ ಸದಸ್ಯರಾದ ಕೆ.ಪಿ.ಸದಾಶಿವಮೂರ್ತಿ, ಅರಕಲವಾಡಿಸೋಮನಾಯಕ, ಕಾವೇರಿ, ಕನಿಷ್ಠ ವೇತನಸಲಹಮಂಡಳಿ ಮಾಜಿಅಧ್ಯಕ್ಷಉಮೇಶ್, ನಗರಸಭೆಸದಸ್ಯಆರ್.ಪಿ.ನಂಜುಂಡಸ್ವಾಮಿ, ಅಲ್ಪಸಂಖ್ಯಾತರವಿಭಾಗದ ಮಹಮದ್‍ಅಪ್ಜಲ್ ಷರೀಪ್, ಎಸ್ಸಿಮೋರ್ಚಾ ಜಿಲ್ಲಾಧ್ಯಕ್ಷ ನಲ್ಲೂರುಸೋಮೇಶ್,ಕಾರ್ಮಿಕವಿಭಾಗದಅಧ್ಯಕ್ಷ ಸ್ವಾಮಿ,ಗ್ರಾಪಂಅಧ್ಯಕ್ಷರೂಪೇಶ್, ಎಪಿಎಂಸಿ ಮಾಜಿಅಧ್ಯಕ್ಷ ಡಿ.ನಾಗೇಂದ್ರ, ಮುಖಂಡರಾದಬದನಗುಪ್ಪೆ ನಾಗರಾಜಮೂರ್ತಿ, ಸಯ್ಯದ್‍ರಫಿ, ನಸ್ರುಲ್ಲಖಾನ್, ಚುಡಾಮಾಜಿಅಧ್ಯಕ್ಷ ಸುಹೇಲ್‍ಆಲಿಖಾನ್, ನಯಾಜ್, ಆಯೂಬ್‍ಖಾನ್, ಯುವಕಾಂಗ್ರೆಸ್‍ಜಿಲ್ಲಾ ಪ್ರಧಾನ ಕಾರ್ಯದರ್ಶಿ.ಶ್ರೀನಿವಾಸ, ಉಪಾಧ್ಯಕ್ಷ ಕೆಲ್ಲಂಬಳ್ಳಿಸೋಮೇಶ್, ನಾಗರಾಜು,ಪದ್ಮಪುರುಷೋತ್ತಮ್, ನಾಗಶ್ರೀ, ನಾಗರತ್ನ, ಶಾಂತಲಾ, ಮಹದೇವು, ಬಸಪ್ಪನಪಾಳ್ಯನಟರಾಜು, ಕೋಡಿಮೋಳೆ ಪ್ರಕಾಶ್, ಬೂದಿತಿಟ್ಟುಲಿಂಗರಾಜು, ಮಹದೇವಸ್ವಾಮಿ, ಹನುಮಂತು, ಗೋವಿಂದರಾಜು ಸೇರಿದಂತೆ ಮತ್ತಿತ್ತರರು ಹಾಜರಿದ್ದರು.